ದ್ವಿಪರಾಷ್ಟ್ರದಲ್ಲಿ ಸೂರ್ಯ ಪಡೆ ಅಬ್ಬರ: ಭಾರತದಲ್ಲಿ ಕ್ರಿಕೆಟ್ ಅಭಿಮಾನಿಗಳ ಹರ್ಷ
ಕೊಲಂಬೋದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ಪಾಕ್ ತಂಡವನ್ನು ಬಗ್ಗು ಬಡೆದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪಾಕ್ ತಂಡದ ತಂತ್ರವನ್ನು ಮೆಟ್ಟಿನಿಂತ ಆಟಗಾರರು ಐಸಿಸಿ ಟೂರ್ನಿಯಲ್ಲಿ ತನ್ನ ಜಯದ ಓಟವನ್ನು ಮುಂದುವರೆಸಿದೆ. ಈ ಗೆಲುವಿನ ಮೂಲಕ ಭಾರತ ಪ್ರಸಕ್ತ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದು ಅಬ್ಬರಿಸಿದೆ. ಟೀಮ್ ಇಂಡಿಯಾ 67 ರನ್‌ಗಳ ಜಯವನ್ನು ಕೊಲಂಬೊದಲ್ಲಿ ದಾಖಲಿಸುತ್ತಿದ್ದಂತೆ, ಭಾರತದ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
ದ್ವೀಪರಾಷ್ಟ್ರದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್ ಸೇರಿಸಿತು. ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿ 77 ರನ್ ಬಾರಿಸಿದರು. ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿ, ಸೋಲು ಕಂಡರು. ಭಾರತದ ಪರ ಎಲ್ಲ ಬೌಲರ್‌ಗಳು ಬಿಗುವಿನ ದಾಳಿ ಸಂಘಟಿಸಿದರು.

ಭಾರತ ತಂಡ ಕೊಲಂಬೊದಲ್ಲಿ ಭರ್ಜರಿ ಜಯ ದಾಖಲಿಸುತ್ತಿದ್ದಂತೆ ಅಭಿಮಾನಿಗಳು, ರಸ್ತೆಗಿಳಿದು ಸಂಭ್ರಮಿಸಿದರು. ಫ್ಯಾನ್ಸ್ ರಾಷ್ಟ್ರ ಧ್ವಜವನ್ನು ಹಿಡಿದು ಸಂಭ್ರಮಿಸಿದರು. ಅಲ್ಲದೆ ರಸ್ತೆಗಳಲ್ಲಿ ಪಟಾಕಿ ಹಚ್ಚಿ ಖುಷಿ ಪಟ್ಟರು.

ಅಹಮದಾಬಾದ್‌ನಲ್ಲೂ ಕ್ರಿಕೆಟ್ ಪ್ರೇಮಿಗಳು ರಸ್ತೆಗಿಳಿದು ತಿರಂಗ ಹಿಡಿದು ಭಾರತದ ವಿಜಯವನ್ನು ಸಂಭ್ರಮಿಸಿದರು. ಅಲ್ಲದೆ ಭಾರತದ ಪರ ಘೋಷಣೆಗಳನ್ನು ಕೂಗಿದರು.

ನಾಗ್ಪುರದಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳು ಫುಲ್ ಜೋಷ್ ಕಂಡು ಬಂದಿತು. ಈ ವೇಳೆ ಅಭಿಮಾನಿಗಳು ರಸ್ತೆಯಲ್ಲಿ ಡ್ಯಾನ್ಸ್ ಸಹ ಮಾಡಿ ಖುಷಿ ಪಟ್ಟರು.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲೂ ಭಾರತೀಯ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪಾಕ್ ವಿರುದ್ಧ ಭಾರತ ಸಾಧಿಸಿದ್ದ 67 ರನ್ ಜಯವನ್ನು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.

ಕೊಲ್ಕತ್ತಾದಲ್ಲೂ ಯುವ ಕ್ರಿಕೆಟ್ ಅಭಿಮಾನಿಗಳು ಕುಣಿದು ಸಂಭ್ರಮಿಸಿದರು.

ಪಾಟ್ನಾದಲ್ಲೂ ಕ್ರಿಕೆಟ್ ಅಭಿಮಾನಿಗಳು ಬಿಗ್ ಫೈಟ್‌ಗೂ ಮುನ್ನ ಪೂಜೆ ಸಲ್ಲಿಸುತ್ತಿರುವುದನ್ನು ಕಾಣಬಹುದು.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications