Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೆಂಚುರಿಯನ್ ಅಂಗಳದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು: ಟ್ವಿಟ್ಟರ್‌ನಲ್ಲಿ ಶುಭಾಶಯಗಳ ಮಹಾಪೂರ

Team india win

2021 ಭಾರತದ ಟೆಸ್ಟ್‌ ಕ್ರಿಕೆಟ್‌ಗೆ ಅತ್ಯಂತ ಅದ್ಭುತ ವರ್ಷವಾಗಿ ಪರಿಣಮಿಸಿದೆ. ಈ ವರ್ಷದ ಆರಂಭದಲ್ಲಷ್ಟೇ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಗಬ್ಬಾ ಕೋಟೆಯನ್ನ ಭೇದಿಸಿತು. ಕಳೆದ 32 ವರ್ಷಗಳಲ್ಲಿ ಆ ಪಿಚ್‌ನಲ್ಲಿ ಕಾಂಗರೂಗಳನ್ನ ಯಾರೂ ಸೋಲಿಸಲು ಸಾಧ್ಯವಾಗಿರಲಿಲ್ಲ. ಆದ್ರೆ ಭಾರತ ಐತಿಹಾಸಿಕ ಗೆಲುವನ್ನ ಪಡೆಯಿತು. ಇದಾದ ಬಳಿಕ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಗೆಲುವು ಸಾಧಿಸಿತು.

ಕೇವಲ ಗಬ್ಬಾದಲ್ಲಿ ಐತಿಹಾಸಿಕ ಗೆಲುವಷ್ಟೇ ಅಲ್ಲದೆ, ಇಂಗ್ಲೆಂಡ್‌ನ ಓವಲ್‌ನಲ್ಲಿ 50 ವರ್ಷಗಳ ನಂತರ ಭಾರತವು ಪಂದ್ಯವನ್ನ ಗೆದ್ದು ಬೀಗಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ ತಲುಪಿತು. ಇದಾದ ಬಳಿಕ ಸೆಂಚುರಿಯನ್ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಮೊಟ್ಟ ಮೊದಲ ಬಾರಿಗೆ ಸೋಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-0 ಮುನ್ನಡೆ ಸಾಧಿಸಿದೆ.

ಮೂರುವರೆ ದಿನಕ್ಕೆ ಪಂದ್ಯದ ಫಲಿತಾಂಶ
ಎರಡನೇ ದಿನದಾಟವು ಸಂಪೂರ್ಣ ಮಳೆಯಿಂದಾಗಿ ಕೊನೆಗೊಂಡರೂ ಸಹ, ಇನ್ನೂ ಒಂದು ಸೆಷನ್ ಬಾಕಿ ಇರುವಂತೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾರುಪತ್ಯ ಮೆರೆದಿದೆ. ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ವಿಕೆಟ್ ಉರುಳಿಸುವ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನ ಅಂತಿಮ ದಿನದಲ್ಲಿ ಪೆವಿಲಿಯನ್‌ಗೆ ಅಟ್ಟಿದ ಭಾರತ 113ರನ್‌ಗಳಿಂದ ಮೊದಲ ಟೆಸ್ಟ್‌ ಗೆದ್ದು ಬೀಗಿದೆ.

ಸೋಲಿನಿಂದ ತಂಡವನ್ನ ಪಾರುಮಾಡದ ಬ್ಯಾಟ್ಸ್‌ಮನ್ಸ್‌
ಕ್ಯಾಪ್ಟನ್ ಡೀನ್ ಎಲ್ಗರ್ ಔಟಾದ ಬಳಿಕ ದಕ್ಷಿಣ ಆಫ್ರಿಕಾವನ್ನ ಸೋಲಿನ ದವಡೆಯಿಂದ ತಪ್ಪಿಸಲು ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಹಾಗೂ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದ್ರು. ಕ್ವಿಂಟರ್ ಡಿಕಾಕ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ರೆ, ವಿಯಾನ್ ಮುಲ್ಡರ್ ಕೇವಲ 1ರನ್‌ಗೆ ಶಮಿ ಬೌಲಿಂಗ್‌ನಲ್ಲಿ ಔಟಾದ್ರು. ಮಾರ್ಕೊ ಜಾನ್ಸನ್ 13ರನ್‌ಗಳಿಸಿದ್ದಾಗ ಶಮಿಗೆ ವಿಕೆಟ್ ಒಪ್ಪಿಸಿದರು.

ದಕ್ಷಿಣ ಆಫ್ರಿಕಾ ಊಟದ ವಿರಾಮದ ಹೊತ್ತಿಗೆ ಮೂರು ವಿಕೆಟ್ ಉಳಿಸಿಕೊಂಡು ಗೆಲುವಿಗೆ 123ರನ್‌ಗಳು ಬೇಕಿತ್ತು. ಆದ್ರೆ ವಿರಾಮದ ಬಳಿಕ ಪ್ರಬಲ ದಾಳಿ ನಡೆಸಿ ಶಮಿ ಮಾರ್ಕೊ ಜಾನ್ಸೆನ್ ವಿಕೆಟ್ ಕಬಳಿಸಿದ್ರೆ, 68 ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಸತತ ಎರಡು ಎಸೆತಗಳಲ್ಲಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಸಂಪೂರ್ಣವಾಗಿ ಸೋಲೊಪ್ಪಿಕೊಂಡ್ರು.

113ರನ್‌ಗಳೊಂದಿಗೆ ಮೊದಲ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ 123ರನ್ ಕಲೆಹಾಕಿದ ಕೆ.ಎಲ್ ರಾಹುಲ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿದೆ.

ಭಾರತ ಪರ ಒಟ್ಟಾರೆ ಪಂದ್ಯದಲ್ಲಿ ಮೊಹಮ್ಮದ್ ಶಮಿ 8 ವಿಕೆಟ್, ಜಸ್ಪ್ರೀತ್ ಬುಮ್ರಾ 5, ಮೊಹಮ್ಮದ್ ಸಿರಾಜ್ 3, ಆರ್. ಅಶ್ವಿನ್ 2, ಶಾರ್ದೂಲ್ ಠಾಕೂರ್ 2 ವಿಕೆಟ್ ಕಬಳಿಸಿದ್ದಾರೆ. 8 ವಿಕೆಟ್ ಪಡೆದ ಮೊಹಮ್ಮದ್ ಶಮಿ ಯಶಸ್ವಿ ಬೌಲರ್ ಎನಿಸಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಟೆಂಬ ಬವುಮಾ 52, ನಾಯಕ ಡೀನ್ ಎಲ್ಗರ್ ಎರಡನೇ ಇನ್ನಿಂಗ್ಸ್‌ನ್ಲಲಿ 77ರನ್‌ ಗಳಿಸಿದ್ದೇ ವೈಯಕ್ತಿಕ ಗರಿಷ್ಠ ರನ್ ಆಗಿದೆ. ಲುಂಗಿ ಎನ್‌ಗಿಡಿ 8 ವಿಕೆಟ್, ಕಗಿಸೊ ರಬಾಡ 7 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿದ್ದಾರೆ.

ಸೌತ್ ಆಫ್ರಿಕಾವನ್ನು ಬಗ್ಗುಬಡಿದಿದ್ದು ಹೇಗೆ ಅಂತಾ ಹೇಳಿದ ವಿರಾಟ್ | Oneindia Kannada

Story first published: Thursday, December 30, 2021, 18:20 [IST]
Other articles published on Dec 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+