ಏಕದಿನ ನಂಬರ್ 1 ತಂಡವಾಗಲು ಭಾರತದ ಮುಂದೆ ಚಿನ್ನದಂತಾ ಅವಕಾಶ: ಟೀಮ್ ಇಂಡಿಯಾ ಮಾಡಬೇಕಿರುವುದು ಇಷ್ಟೇ!
ಕೇವಲ 24 ಗಂಟೆಗಳ ಅಂತರದಲ್ಲಿ ಭಾರತ ಎರಡು ಬಲಿಷ್ಠ ತಂಡಗಳ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿದ್ದು ಏಷ್ಯಾಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಮೊದಲಿಗೆ ಪಾಕಿಸ್ತಾನ ತಂಡವನ್ನು 228 ರನ್‌ಗಳ ಬೃಹತ್ ಅಂತರದಿಂದ ಮಣಿಸಿದ್ದರೆ ನಂತರ ಶ್ರೀಲಂಕಾ ತಂಡವನ್ನು ಲೋ ಸ್ಕೋರಿಂಗ್ ಸೆಣೆಸಾಟದಲ್ಲಿ 41 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಅತ್ಯಂತ ಸನಿಹಕ್ಕೆ ತಲುಪಿದೆ ಭಾರತ.
ಏಷ್ಯಾಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶಿಸುವುದರ ಜೊತೆಗೆ ಟೀಮ್ ಇಂಡಿಯಾಗೆ ಮತ್ತೊಂದು ದೊಡ್ಡ ಸಾಧನೆ ಮಾಡುವ ಅವಕಾಶವೂ ಟೀಮ್ ಇಂಡಿಯಾ ಮುಂದಿದೆ. ವಿಶ್ವಕಪ್ ಟೂರ್ನಿ ಅತ್ಯಂತ ಸನಿಹದಲ್ಲಿರುವಾಗ ಟೀಮ್ ಇಂಡಿಯಾಗೆ ಏಕದಿನ ಮಾದರಿಯ ನಂಬರ್ 1 ತಂಡವಾಗುವ ಅವಕಾಶ ಕಣ್ಣ ಮುಂದಿದೆ. ಆದರೆ ಅದು ಸಾಧ್ಯವಾಗಬೇಕಿದ್ದರೆ ಈ ನಾಲ್ಕು ಅಂಶಗಳು ಭಾರತ ತಂಡದ ಪರವಾಗಿ ಆಗಬೇಕಿದೆ. ಏನದು? ಇಲ್ಲಿದೆ ಸಂಪೂರ್ಣ ವಿವರ.

ಪಾಕ್‌ಗೆ ಸೋಲುಣಿಸಬೇಕು ಲಂಕಾ
ಏಷ್ಯಾಕಪ್ ಅಂತ್ಯದಲ್ಲಿ ಭಾರತ ಐಸಿಸಿ ನಂಬರ್ 1 ತಂಡವಾಗಬೇಕಿದ್ದರೆ ಮೊದಲಿಗೆ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಫಲಿತಾಂಶ ನಿರ್ಣಾಯಕ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಶ್ರೀಲಂಕಾ ಮಣಿಸಬೇಕಿದೆ. ಈ ಮೂಲಕ ಪಾಕಿಸ್ತಾನ ಫೈನಲ್‌ಗೆ ಪ್ರವೇಶಿಸದಂತೆ ತಡೆಯುವುದು ಅಗತ್ಯ.
ಭಾರತಕ್ಕೆ ಬೇಕು ಈ ಎರಡು ಗೆಲುವು
ಪಾಕಿಸ್ತಾನ ತಂಡವನ್ನು ಶ್ರೀಲಂಕಾ ಮಣಿಸಿದರೆ ಸಾಲುವುದಿಲ್ಲ. ನಂತರ ಭಾರತ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ನಂತರ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಬೇಕಿದೆ. ಇದರ ಜೊತೆಗೆ ಬೇರೊಂದು ಸರಣಿಯ ಫಲಿತಾಂಶದ ಮೇಲೆಯೂ ಕಣ್ಣಿಟಬೇಕಿದ್ದು ಅದರ ಫಲಿತಾಂಶ ಕೂಡ ಮಹತ್ವ ಪಡೆದುಕೊಳ್ಳಲಿದೆ.
ಆಸ್ಟ್ರೇಲಿಯಾವನ್ನು ಮಣಿಸಬೇಕಿದೆ ದಕ್ಷಿಣ ಆಪ್ರಿಕಾ
ಈ ಏಷ್ಯಾಕಪ್ ಟೂರ್ನಿಯ ಫಲಿತಾಂಶದ ಜೊತೆಗೆ ಸದ್ಯ ದಕ್ಷಿಣ ಆಫ್ರಕಾ ಹಾಗೂ ಆಸ್ಟ್ರೇಲಿಯಾ ಫಲಿತಾಂಶ ಕೂಡ ಮುಖ್ಯವಾಗಲಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು 5 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿರುವ ಆಸ್ಟ್ರೇಲಿಯಾ ತಂಡ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಸೋಲು ಅನುಭವಿಸಬೇಕಿದೆ. ಇಷ್ಟು ಅಂದುಕೊಂಡಂತೆ ಆದರೆ ಟೀಮ್ ಇಂಡಿಯಾ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ನಂಬರ್ 1 ತಂಡವಾಗಿ ಹೊರಹೊಮ್ಮಲಿದೆ.
ವಿಶ್ವಕಪ್‌ಗೆ ನಂಬರ್ 1 ತಂಡವಾಗಿ ಕಣಕ್ಕಿಳಿಯಲು ಮತ್ತೊಂದು ಸವಾಲು
ಇನ್ನು ಇಷ್ಟೆಲ್ಲಾ ಆದ ಬಳಿಕ ವಿಶ್ವಕಪ್ ಟೂರ್ನಿಗೆ ನಂಬರ್ 1 ತಂಡವಾಗಿಯೇ ಕಣಕ್ಕಿಳಿಯಬೇಕಾದರೆ ಮತ್ತೊಂದು ಸವಾಳು ಭಾರತದ ಮುಂದಿದೆ. ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಸೆಪ್ಟೆಂಬರ್ 22ರಿಂದ 27ರ ಮಧ್ಯೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸರಣಿಯನ್ನು ಗೆಲ್ಲಬೇಕಿದೆ. ಹಾಗಾದಲ್ಲಿ ನಂಬರ್ 1 ತಂಡವಾಗಿಯೇ ಭಾರತ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications