Ind vs WI: ಏಕದಿನ ಮಾದರಿಯಲ್ಲಿ ಪಾಕಿಸ್ತಾನದ ಹೆಸರಿನಲ್ಲಿದ್ದ ದೊಡ್ಡ ದಾಖಲೆ ಮುರಿದ ಭಾರತ

ಅತ್ಯಂತ ರೋಚಕವಾಗಿ ನಡೆದ ವೆಸ್ಟ್ ಇಂಡೀಸ್ ಹಾಗೂ ಭಾರತ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಎರಡು ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು ಸರಣಿಯನ್ನು 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಂತಯೇ ಈ ಪಂದ್ಯ ಕೂಡ ಅಂತಿಮ ಹಂತದವರೆಗೂ ಕುತೂಹಲವನ್ನು ಉಳಿಸಿಕೊಂಡಿದ್ದು ಕೊನೆಯ ಹಂತದಲ್ಲಿ ಭಾರತ ಗೆಲುವಿನ ನಗೆ ಬೀರಿದೆ.
ಈ ಗೆಲುವಿನೊಂದಿಗೆ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ವಶಕ್ಕೆ ಪಡೆದಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಯುವಲ್ಲಿ ಭಾರತ ಕ್ರಿಕೆಟ್ ತಂಡ ಯಶಸ್ವಿಯಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನದ ಹೆಸರಿನಲ್ಲಿದ್ದ ಈ ಪ್ರಮುಖ ದಾಖಲೆಯನ್ನು ಈಗ ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ.
ಹಾಗಾದರೆ ಭಾರತದ ಹೆಸರಿನಲ್ಲಿರುವ ಆ ಪ್ರಮುಖ ದಾಖಲೆ ಯಾವುದು? ಮುಂದೆ ಓದಿ..

ವಿಂಡೀಸ್ ವಿರುದ್ಧ ಸತತ 12ನೇ ಏಕದಿನ ಸರಣಿ ಗೆಲುವು
ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದೆ. ಒಂದು ತಂಡದ ವಿರುದ್ಧ ಸತತವಾಗಿ ಅತಿ ಹೆಚ್ಚು ಸರಣಿ ಗೆದ್ದ ವಿಶ್ವದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಸತತ 12ನೇ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿ ಭಾರತ ಈ ದಾಖಲೆ ಮಾಡಿದೆ. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು. ಜಿಂಬಾಬ್ವೆ ತಂಡದ ವಿರುದ್ಧ 11 ಸರಣಿ ಗೆದ್ದಿರುವ ಪಾಕಿಸ್ತಾನದ ದಾಖಲೆಯನ್ನು ಭಾರತ ಮುರಿಯುವಲ್ಲಿ ಯಶಸ್ವಿಯಾಗಿದೆ.

ದೊಡ್ಡ ಗುರಿ ಬೆನ್ನಟ್ಟಿ ಗೆದ್ದ ಭಾರತ
ಅಕ್ಷರ್ ಪಟೇಲ್ ಅವರ ಸ್ಪೋಟಕ ಹಾಗೂ ಸಾಹಸದ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಭಾರತ ಬೃಹತ್ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಮಾದರಿಯಲ್ಲಿ ಭಾರತ ಬೆನ್ನಟ್ಟಿದ ಬೃಹತ್ ಗುರಿ ಇದಾಗಿದೆ. ಒಟ್ಟಾರೆಯಾಗಿಯೂ ಕೆರಿಬಿಯನ್ ನೆಲದಲ್ಲಿ ಭಾರತದ ಮೂರನೇ ಬೃಹತ್ ರನ್ ಚೇಸ್ ಎಂಬುದು ಗಮನಾರ್ಹ ಅಂಶ.

ಬೃಹತ್ ಗುರಿ ನೀಡಿದ ವೆಸ್ಟ್ ಇಂಡೀಸ್
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ವೆಸ್ಟ್ ಇಂಡೀಸ್ ತಂಡ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕಟ್‌ಗೆ 65 ನ್‌ಗಳಿಸಿದ ವಿಂಡೀಸ್ ಪಡೆಯ ಪರವಾಗಿ ಆರಂಭಿಕ ಆಟಗಾರ ಶಾಯ್ ಹೋಪ್ ಭರ್ಜರಿ ಶತಕ ಸಿಡಿಸಿದರು. ನಂತರ ನಾಯಕ ನಿಕೋಲಸ್ ಪೂರನ್ ಕೂಡ 74 ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಇದರ ಕಾರಣದಿಂದಾಗಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 300 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಈ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು.

ಅಕ್ಷರ್ ಸಾಹಸ
ಇನ್ನು ಇದನ್ನು ಬೆನ್ನಟ್ಟಿದ ಭಾರತ ತಂಡ ಸಾಧಾರಣ ಆರಂಭವನ್ನು ಪಡೆಯಿತು. ನಾಯಕ ಧವನ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ 13 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ಆದರೆ ಬಳಿಕ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಐಯ್ಯರ್ ಆರಂಭಿಕ ಆಟಗಾರ ಗಿಲ್ ಜೊತೆಗೆ ಸೇರಿಕೊಂಡು ಸ್ಕೋರ್ ಹೆಚ್ಚಿಸಿದರು. ಗಿಲ್ 43 ರನ್‌ಗಳಿಸಿದರೆ ಐಯ್ಯರ್ 63 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಸಂಜು ಸ್ಯಾಂ್ಸನ್ ಹಾಗೂ ಅಕ್ಷರ್ ಪಟೇಲ್ ಕೂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ಇಬ್ಬರು ಕೂಡ ತಮ್ಮ ಚೊಚ್ಚಲ ಏಕದಿನ ಅರ್ಧ ಶತಕ ಸಿಡಿಸಿದ್ದಾರೆ. ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಭಾರತದ ಪರವಾಗಿ ಆಲ್‌ರೌಂಡರ್ ಪ್ರದರ್ಶನ ನಿಡಿ ಮಿಂಚಿದ್ದಾರೆ. ಬ್ಯಾಟಿಂಗ್‌ನಲ್ಲಿ 35 ಎಸೆತಗಳಲ್ಲಿ 64 ರನ್ ಸಿಡಿಸುವ ಮೂಲಕ ಅಜೇಯವಾಗುಳಿದು ಗೆಲುವಿನ ದಡ ಸೇರಿಸಿದರೆ ಬೌಲಿಂಗ್‌ನಲ್ಲಿಯೂ 9 ಓವರ್‌ಗಳಲ್ಲಿ 40 ರನ್‌ಗಳಿಗೆ 1 ವಿಕೆಟ್ ಸಂಪಾದಿಸಿದ್ದಾರೆ. ಈ ಪ್ರದರ್ಶನಕ್ಕೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಇತ್ತಂಡಗಳ ಆಡುವ ಬಳಗ: ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಶಮರ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್, ಜೇಡನ್ ಸೀಲ್ಸ್, ಹೇಡನ್ ವಾಲ್ಷ್
ಬೆಂಚ್: ಕೀಮೋ ಪಾಲ್, ಕೀಸಿ ಕಾರ್ಟಿ
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ಯುಜ್ವೇಂದ್ರ ಚಹಾಲ್
ಬೆಂಚ್: ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಇಶಾನ್ ಕಿಶನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications