IND vs WI Test: ದೆಹಲಿಯಲ್ಲಿ ಹೇಗಿದೆ ಟೀಮ್ ಇಂಡಿಯಾ ಟೆಸ್ಟ್ ಸಾಧನೆ?
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಪಂದ್ಯ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿಯನ್ನು ವಶಕ್ಕೆ ಪಡೆಯುವ ಕನಸು ಶುಭಮನ್ ಗಿಲ್ ಪಡೆಯದ್ದಾಗಿದೆ. ಇನ್ನು ಆಡಿದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ವೆಸ್ಟ್ ಇಂಡೀಸ್ ತಂಡ ಪುಟಿದೇಳುವ ಕನಸು ಕಾಣುತ್ತಿದೆ. ಹಾಗಿದ್ದರೆ ನವದೆಹಲಿಯ ಅಂಗಳದ ಕಥೆ ಏನು? ಭಾರತದ ಪ್ರದರ್ಶನ ಹೇಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಅಹಮದಾಬಾದ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ರವೀಂದ್ರ ಜಡೇಜಾ, ಕೆಎಲ್ ರಾಹುಲ್, ಧ್ರುವ್ ಜುರೇಲ್ ಶತಕ ಬಾರಿಸಿದರೆ, ಬೌಲಿಂಗ್‌ನಲ್ಲಿ ಸಿರಾಜ್, ಜಡ್ಡು ಕಮಾಲ್ ಪ್ರದರ್ಶನ ನೀಡಿದರು. ಜೇಟ್ಲಿ ಪಿಚ್‌ನಲ್ಲೂ ಇದೇ ಪ್ರದರ್ಶನ ನೀಡುವ ಕನಸು ಭಾರತ ತಂಡದ್ದಾಗಿದೆ.

ಒಟ್ಟಾರೆ ಈ ಮೈದಾನದಲ್ಲಿ 35 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಟೀಮ್ ಇಂಡಿಯಾ ಈ ವೇಳೆ 14ರಲ್ಲಿ ಜಯ ಸಾಧಿಸಿದೆ. 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಉಳಿದ 15 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ. ಕೊನೆಯ ಬಾರಿಗೆ 2023ರಲ್ಲಿ ಭಾರತ ಈ ಮೈದಾನದಲ್ಲಿ ಅಖಾಡಕ್ಕೆ ಇಳಿದಾಗ ಆಸ್ಟ್ರೇಲಿಯಾವನ್ನು 6 ವಿಕೆಟ್‌ಗಳಿಂದ ಮಣಿಸಿತ್ತು. ಆ ಪಂದ್ಯದಲ್ಲಿ ಜಡೇಜಾ 10 ವಿಕೆಟ್ ಪಡೆದು ಸಾಧನೆ ಮಾಡಿದ್ದರು.
1987ರಿಂದ ಈ ಅಂಗಳದಲ್ಲಿ ಭಾರತ ಅಜೇಯವಾಗಿದೆ. ಭಾರತ ಈ ಅಂಗಳದಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧವೇ ಸೋಲು ಕಂಡಿತ್ತು. 1987ರಿಂದ ಈ ವರೆಗೆ ಭಾರತ ಈ ಅಂಗಳದಲ್ಲಿ ಶ್ರೀಲಂಕಾ (2017) ಹಾಗೂ ಆಸ್ಟ್ರೇಲಿಯಾ (2008) ವಿರುದ್ಧ ಡ್ರಾ ಸಾದಿಸಿತ್ತು. ಈ ಮೈದಾನದಲ್ಲೂ ಟೀಮ್ ಇಂಡಿಯಾ ಮತ್ತೊಂದು ಏಕಪಕ್ಷೀಯ ಜಯ ದಾಖಲಿಸುವ ಕನಸು ಹೊಂದಿದೆ. 14 ವರ್ಷದ ಬಳಿಕ ಇದೇ ಅಂಗಳದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕಾದಾಟ ನಡೆಸಲಿವೆ.

ಆಟಗಾರರ ಸಾಧನೆ
ಈ ಅಂಗಳದಲ್ಲಿ ಸದ್ಯದ ಆಟಗಾರರಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯವನ್ನು ಆಡಿದ ಕೀರ್ತಿ ರವೀಂದ್ರ ಜಡೇಜಾ ಅವರಿಗೆ ಸಲ್ಲುತ್ತದೆ. ಇವರು ಈ ಮೈದಾನದಲ್ಲಿ ಆಡಿದ 4 ಪಂದ್ಯಗಳಲ್ಲಿ 29 ವಿಕೆಟ್ ಪಡೆದಿದ್ದಾರೆ. ಇನ್ನು ಇದೇ ಅಂಗಳದಲ್ಲಿ 42 ರನ್ ನೀಡಿ 7 ವಿಕೆಟ್ ಸಹ ಪಡೆದ ಸಾಧನೆಯನ್ನು ಜಡ್ಡು ಮಾಡಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ 2023ರಲ್ಲಿ ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್ ಆಡಿದ ಅನುಭವ ಹೊಂದಿದ್ದಾರೆ.
ಅರುಣ್ ಜೇಟ್ಲಿ ಮೈದಾನದಲ್ಲಿ ಸ್ಪಿನ್ ಬೌಲರ್‌ಗಳು ಅಬ್ಬರ ನಡೆಸಲಿದ್ದಾರೆ. ಇನ್ನು ಬೌನ್ಸ್ ಸಹ ವೇಗದ ಬೌಲರ್‌ಗಳಿಗೆ ನೆರವು ನೀಡಲಿದೆ. ವೆಸ್ಟ್ ಇಂಡೀಸ್ ಬ್ಯಾಟರ್‌ಗಳಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಎರಡನೇ ಟೆಸ್ಟ್‌ನಲ್ಲಿ ಯಾರು ಮಿಂಚುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications