Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಸೆಂಬರ್ 2022ರವರೆಗೆ ಟೀಂ ಇಂಡಿಯಾದ ಸಂಪೂರ್ಣ ಕ್ರಿಕೆಟ್ ವೇಳಾಪಟ್ಟಿಯ ಅಪ್‌ಡೇಟ್‌

Team india

ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಬ್ಯುಸಿಯಾಗಿದೆ. ಮೂರು ಏಕದಿನ ಪಂದ್ಯ, ಐದು ಟಿ20 ಪಂದ್ಯಗಳ ಸರಣಿಯನ್ನ ಆಡಲಿದ್ದು, ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಎರಡನೇ ಏಕದಿನ ಪಂದ್ಯವು ಕ್ವೀನ್ಸ್ ಓವಲ್ ಪಾರ್ಕ್‌ನಲ್ಲಿ ಭಾನುವಾರ (ಜು. 24) ನಡೆಯುತ್ತಿದ್ದು ಪಂದ್ಯವು ಜಿದ್ದಾಜಿದ್ದಿನಿಂದ ಕೂಡಿರಲಿದೆ.

ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಪ್ರಮುಖ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಟಿ20 ಸರಣಿಯಲ್ಲಿ ಕೊಹ್ಲಿ ಮತ್ತು ಬುಮ್ರಾ ವಿಶ್ರಾಂತಿ ಮುಂದುವರಿಸಲಿದ್ದಾರೆ.

ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಅದಕ್ಕೂ ಮೊದಲು ಏಷ್ಯಾಕಪ್‌ನಲ್ಲಿ ತನ್ನ ಸಾಮರ್ಥ್ಯವನ್ನ ಪ್ರದರ್ಶನಕ್ಕೆ ಒಳಪಡಿಸಲಿದೆ. ಸಾಲು ಸಾಲು ಸರಣಿಗಳು ಮುಂದಿದ್ದು, ಪ್ರಸ್ತುತ ವರ್ಷದ ಅಂತ್ಯದವರೆಗೆ ಪ್ರತಿ ತಿಂಗಳಿನಲ್ಲಿ ಒಂದಲ್ಲಾ ಒಂದು ಟೂರ್ನಿಯಲ್ಲಿ ಬ್ಯುಸಿ ಇರಲಿದೆ. ಟೂರ್ನಿಯ ಸಂಪೂರ್ಣ ವಿವರ ಈ ಕೆಳಗಿದೆ.

ಆಗಸ್ಟ್‌: ಭಾರತ ವರ್ಸಸ್ ಜಿಂಬಾಬ್ವೆ

ಆಗಸ್ಟ್‌: ಭಾರತ ವರ್ಸಸ್ ಜಿಂಬಾಬ್ವೆ

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗಳು ಆಗಸ್ಟ್‌ 7ಕ್ಕೆ ಮುಕ್ತಾಯಗೊಳ್ಳಲಿದ್ದು, ಟೀಂ ಇಂಡಿಯಾ ವಿಂಡೀಸ್ ಪ್ರವಾಸದ ಬಳಿಕ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳ ಪ್ರವಾಸಕ್ಕೆ ಹರಾರೆಗೆ ತೆರಳಲಿದೆ. ಆಗಸ್ಟ್‌ 18 ರಿಂದ ಪ್ರಾರಂಭಗೊಳ್ಳಲಿರುವ ಏಕದಿನ ಸರಣಿಯು ಆಗಸ್ಟ್‌ 22ಕ್ಕೆ ಮುಕ್ತಾಯಗೊಳ್ಳಲಿದೆ. ಮೂರು ಏಕದಿನ ಪಂದ್ಯಗಳಿಗೆ ಹರಾರೆ ಸ್ಪೋರ್ಟ್ಸ್‌ ಕ್ಲಬ್ ಆತಿಥ್ಯ ವಹಿಸಲಿದೆ.

ಆಗಸ್ಟ್‌: ಏಷ್ಯಾಕಪ್ 2022

ಆಗಸ್ಟ್‌: ಏಷ್ಯಾಕಪ್ 2022

ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಪ್ರತಿಷ್ಠಿತ ಏಷ್ಯಾ ಕಪ್ 2022 ಟೂರ್ನಿ ಬಹುತೇಕ ಸನಿಹಗೊಂಡಿದೆ. ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ಈ ಮೆಗಾ ಟೂರ್ನಮೆಂಟ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಶಿಫ್ಟ್‌ ಆಗಿದೆ. ಶ್ರೀಲಂಕಾದಲ್ಲಿ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಟ್ಟ ಪರಿಸ್ಥಿತಿಯಲ್ಲಿದ್ದು, ಈ ಕಾರಣದಿಂದ ಟೂರ್ನಿ ನಡೆಯಲು ಹಿಂದೆ ಸರಿದಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಮಿನಿ ವಿಶ್ವಕಪ್‌ನಂತೆ ನಡೆಯಲಿರುವ ಈ ಟೂರ್ನಿಯ ಮೇಲೆ ಭಾರಿ ನಿರೀಕ್ಷೆಗಳಿವೆ. ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ. ಭಾರತವು ಕಳೆದ ಎರಡು ಕಪ್‌ ಗೆದ್ದಿದ್ದು (2016, 2018) ಹ್ಯಾಟ್ರಿಕ್ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ

ಏಷ್ಯಾ ಕಪ್ ಮುಗಿದ ಬಳಿಕ ಟೀಂ ಇಂಡಿಯಾ ಎರಡು ಬಲಿಷ್ಠ ರಾಷ್ಟ್ರಗಳ ವಿರುದ್ಧ ಕ್ರಿಕೆಟ್ ಸರಣಿ ಆಡಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿರುವಂತೆ ವಿಶ್ವಕಪ್‌ ಮುನ್ನ ಪೂರ್ವ ತಯಾರಿಯಂತೆ ಭಾರತವು ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನ ಆಯೋಜಿಸಲಿದೆ. ಆದ್ರೆ ಈ ಸರಣಿಯ ಕುರಿತು ಪಂದ್ಯಗಳೆಷ್ಟು, ಯಾವಾಗ ನಡೆಯಲಿದೆ ಎಂಬುದು ಇನ್ನೂ ಘೋಷಣೆಯಾಗಬೇಕಿದೆ.

T20 ವಿಶ್ವಕಪ್‌ 2022: ಸ್ವಲ್ಪ ಯಾಮಾರಿದ್ರೂ ಈ 4 ಭಾರತದ ಸ್ಟಾರ್‌ ಆಟಗಾರರು ಮಿಸ್

ಅಕ್ಟೋಬರ್: ಐಸಿಸಿ ಟಿ20 ವಿಶ್ವಕಪ್‌

ಅಕ್ಟೋಬರ್: ಐಸಿಸಿ ಟಿ20 ವಿಶ್ವಕಪ್‌

ಕಳೆದ ವರ್ಷದಲ್ಲಿ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ, ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಭಾರತವು ಕಾಂಗರೂ ನಾಡಿಗೆ ಕಾಲಿಡಲಿದ್ದು, ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಲಿದೆ.

ಚುಟುಕು ವಿಶ್ವಕಪ್ ಅಕ್ಟೋಬರ್ 16ರಿಂದ ಪ್ರಾರಂಭಗೊಳ್ಳಲಿದ್ದು, ಟೀಂ ಇಂಡಿಯಾ ಅಕ್ಟೋಬರ್ 23ರಂದು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಲಿದೆ. ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ತಂಡದ ಟಿಕೆಟ್‌ಗಳು ಸಂಪೂರ್ಣ ಮಾರಾಟವಾಗಿವೆ.

ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫಾಸ್ಟ್ ಮತ್ತು ಸ್ಪಿನ್ ಎರಡೂ ಬೌಲಿಂಗ್‌ ಮಾಡಿರುವ 7 ಖ್ಯಾತ ಕ್ರಿಕೆಟಿಗರಿವರು

ನವೆಂಬರ್: ಭಾರತ ವರ್ಸಸ್ ನ್ಯೂಜಿಲೆಂಡ್

ನವೆಂಬರ್: ಭಾರತ ವರ್ಸಸ್ ನ್ಯೂಜಿಲೆಂಡ್

ಕಳೆದ ವರ್ಷದಂತೆ ಟಿ20 ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಕಳೆದ ಬಾರಿ ಕಿವೀಸ್ ತಂಡವು ಭಾರತಕ್ಕೆ ಬಂದಿದ್ದು, ಆದ್ರೆ ಈ ಬಾರಿ ಭಾರತವು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮೂರು ಟಿ20 ಪಂದ್ಯ ಮತ್ತು ಏಕದಿನ ಸರಣಿಯಲ್ಲೂ ಕೂಡ ಭಾಗಿಯಾಗಲಿದೆ.

ಡಿಸೆಂಬರ್: ಭಾರತ ವರ್ಸಸ್ ಬಾಂಗ್ಲಾದೇಶ

ಡಿಸೆಂಬರ್: ಭಾರತ ವರ್ಸಸ್ ಬಾಂಗ್ಲಾದೇಶ

ಈ ವರ್ಷದ ಕೊನೆಯಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಕಾದಾಟ ನಡೆಸಲಿದೆ. ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ 2 ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನ ಆಡಲಿದೆ ಎಂದು ಯೋಜಿಸಲಾಗಿದ್ದು, ಈ ಕುರಿತಾಗಿ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

Story first published: Monday, July 25, 2022, 10:33 [IST]
Other articles published on Jul 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+