Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Legends World Championship: ಟೂರ್ನಿ ಆರಂಭಕ್ಕೂ ಮುನ್ನ ಟೀಮ್‌ ಇಂಡಿಯಾ ಜೆರ್ಸಿ ಬಿಡುಗಡೆ; ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?

ಜುಲೈ 2 ಮಂಗಳವಾರ, ಟಿ20 ವಿಶ್ವಕಪ್ 2024ರ ಟೂರ್ನಿ ಮುಗಿಯುತ್ತಿದ್ದಂತೆ ಇದೀಗ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಮೊದಲ ಆವೃತ್ತಿ (ಬುಧವಾರ) ನಾಳೆಯಿಂದ ಪ್ರಾರಂಭವಾಗಲಿದೆ. ಈ ಟೂರ್ನಿ ಜುಲೈ 3 ರಿಂದ 13 ರವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಭಾರತ ತಂಡದ ಜೆರ್ಸಿ ಬಿಡುಗಡೆಯಾಗಿದೆ. ಟೀಮ್‌ ಇಂಡಿಯಾ ಮಾಜಿ ಆಟಗಾರರಾದ ಸುರೇಶ್‌ ರೈನ್‌, ರಾಹುಲ್‌ ಶರ್ಮಾ ಹಾಗು ಆರ್‌ಪಿ ಸಿಂಗ್‌ ಜೆರ್ಸಿ ಬಿಡುಗಡೆಗೊಳಿಸಿದ್ದಾರೆ. ಈ ವೇಳೆ ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್‌ನಲ್ಲಿ ಪ್ರಮುಖ ಉದ್ಯಮಿಗಳಾಗಿರುವ ಭಾರತದ ಚಾಂಪಿಯನ್ಸ್-ಸಲ್ಮಾನ್ ಅಹ್ಮದ್, ಸುಮಂತ್ ಬಹ್ಲ್ ಮತ್ತು ಜಸ್ಪಾಲ್ ಬಹ್ರಾ ಅವರ ಮಾಲೀಕರು ಜೆರ್ಸಿ ಬಿಡುಗಡೆಯಲ್ಲಿ ಉಪಸ್ಥಿತರಿದ್ದರು.

Team India Jersey Released for Legends World Championship Tournament

ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಮೊದಲ ಆವೃತ್ತಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ, ಶಾಹಿದ್ ಅಫ್ರಿದಿ, ಕೆವಿನ್ ಪೀಟರ್ಸನ್, ಯೂನಿಸ್ ಖಾನ್, ಕ್ರಿಸ್ ಗೇಲ್ ಸೇರಿದಂತೆ ಕೆಲವು ಟಾಪ್ ಕ್ರಿಕೆಟ್ ತಾರೆಯರು ಭಾಗವಹಿಸುತ್ತಿದ್ದಾರೆ.

ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಪ್ರತಿ ತಂಡವು ಒಂದೊಂದು ಪಂದ್ಯವಾಡಲಿವೆ.

ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಮುಖಾಮುಖಿಯಾಗಲಿವೆ. ಬಳಿಕ ಎರಡು ತಂಡಗಳು ಫೈನಲ್‌ನಲ್ಲಿ ಸ್ಪರ್ಧಿಸಲಿವೆ. ಭಾರತದ ಮೊದಲ ಪಂದ್ಯ ಜುಲೈ 3 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಇದು ಟೂರ್ನಿಯ ಮೊದಲ ಪಂದ್ಯವಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯ ಜುಲೈ 6 ರಂದು ನಡೆಯಲಿದೆ.

ಭಾರತ ತಂಡ: ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಯೂಸುಫ್ ಪಠಾಣ್, ಗುರುಕೀರತ್ ಮಾನ್, ರಾಹುಲ್ ಶರ್ಮಾ, ನಮನ್ ಓಜಾ, ರಾಹುಲ್ ಶುಕ್ಲಾ, ಆರ್‌ಪಿ ಸಿಂಗ್, ವಿನಯ್ ಕುಮಾರ್, ಧವಳ್ ಕುಲಕರ್ಣಿ, ಅನುರೀತ್ ಸಿಂಗ್, ಪವನ್ ನೇಗಿ.

ಆಸ್ಟ್ರೇಲಿಯಾ ತಂಡ : ಬ್ರೆಟ್ ಲೀ, ಟಿಮ್ ಪೈನ್, ಶಾನ್ ಮಾರ್ಷ್, ಬೆನ್ ಕಟ್ಟಿಂಗ್, ಬೆನ್ ಡಂಕ್, ಡಿರ್ಕ್ ನ್ಯಾನೆಸ್, ಡಾನ್ ಕ್ರಿಶ್ಚಿಯನ್, ಬೆನ್ ಲಾಫ್ಲಿನ್, ಆರನ್ ಫಿಂಚ್, ಜಾನ್ ಹೇಸ್ಟಿಂಗ್, ಬ್ರಾಡ್ ಹ್ಯಾಡಿನ್, ಕ್ಯಾಲಮ್ ಫರ್ಗುಸನ್, ಪೀಟರ್ ಸಿಡ್ಲ್, ಕ್ಸೇವಿಯರ್ ಡೊಹೆರ್ಟಿ, ನಾಥನ್ ಕೌಲ್ಟರ್-ನೈಲ್.

ದಕ್ಷಿಣ ಆಫ್ರಿಕಾ ತಂಡ : ಜಾಕ್ವೆಸ್ ಕಾಲಿಸ್, ಇಮ್ರಾನ್ ತಾಹಿರ್, ಹರ್ಷಲ್ ಗಿಬ್ಸ್, ಮಖಾಯಾ ಎನ್ಟಿನಿ, ಡೇಲ್ ಸ್ಟೇಯ್ನ್, ಆಶ್ವೆಲ್ ಪ್ರಿನ್ಸ್, ನೀಲ್ ಮೆಕೆಂಜಿ, ರಿಯಾನ್ ಮೆಕ್‌ಕ್ಲಾರೆನ್, ಜಸ್ಟಿನ್ ಒಂಟಾಂಗ್, ರೋರಿ ಕ್ಲಾಂಡ್‌ಫ್ಲೀಟ್, ಜೆಪಿ ಡುಮಿನಿ, ರಿಚರ್ಡ್ ಲೆವಿ, ಡೇನ್ ಫ್ಲಾಂಡರ್, ಚಾರ್ನ್ಲ್ ವಿಲಾಂಡರ್, ವೆರಾನ್ಲ್ ವಿಲಾಂಡರ್.

ವೆಸ್ಟ್ ಇಂಡೀಸ್ ತಂಡ : ಕ್ರಿಸ್ ಗೇಲ್, ಡ್ಯಾರೆನ್ ಸಾಮಿ, ಸ್ಯಾಮ್ಯುಯೆಲ್ ಬದ್ರೀ, ಟಿನೋ ಬೆಸ್ಟ್, ರಿಯಾದ್ ರಿಯಾನ್ ಎಮ್ರಿಟ್, ಜೇಸನ್ ಮೊಹಮ್ಮದ್, ನವೀನ್ ಸ್ಟೀವರ್ಟ್, ಆಶ್ಲೇ ನರ್ಸ್, ಡ್ವೇನ್ ಸ್ಮಿತ್, ಸುಲೀಮನ್ ಬೆನ್, ಚಾಡ್ವಿಕ್ ವಾಲ್ಟನ್, ಜೆರೋಮ್ ಟೇಲರ್, ಫಿಡೆಲ್ ಎಡ್ವರ್ಡ್ಸ್, ಜೋನಾಥನ್ ಕಾರ್ಟರ್, ಜೋನಾಥನ್ ಕಾರ್ಟರ್.

ಪಾಕಿಸ್ತಾನ ತಂಡ : ಶಾರ್ಜೀಲ್ ಖಾನ್, ಉಮರ್ ಅಕ್ಮಲ್, ಯೂನಿಸ್ ಖಾನ್, ಶೋಯೆಬ್ ಮಲಿಕ್, ಮಿಸ್ಬಾ ಉಲ್ ಹಕ್, ಶಾಹಿದ್ ಅಫ್ರಿದಿ, ಅಬ್ದುಲ್ ರಜಾಕ್, ವಹಾಬ್ ರಿಯಾಜ್, ಸೊಹೈಲ್ ತನ್ವೀರ್, ಸೊಹೈಲ್ ಖಾನ್, ಅಬ್ದುಲ್ ರೆಹಮಾನ್, ಅಮೀರ್ ಯಾಮಿನ್, ತೌಫೀಕ್ ಉಮರ್, ಶೋಯಬ್ ಮಕ್ಸೂದ್, ತಾಸಿರ್ ಅರಾಫತ್, ತಾಸಿರ್ ಅರಾಫತ್ ಅಹಮದ್.

ಇಂಗ್ಲೆಂಡ್ ತಂಡ : ಕೆವಿನ್ ಪೀಟರ್ಸನ್, ರವಿ ಬೋಪಾರ, ಇಯಾನ್ ಬೆಲ್, ಸಮಿತ್ ಪಟೇಲ್, ಓವೈಸ್ ಶಾ, ಮಸ್ಟರ್ಡ್ ಫಿಲಿಪ್, ಸಾಜಿದ್ ಮಹಮೂದ್, ಕ್ರಿಸ್ ಸ್ಕೋಫೀಲ್ಡ್, ಅಜ್ಮಲ್ ಶಹಜಾದ್, ರಯಾನ್ ಸೈಡ್‌ಬಾಟಮ್, ಉಸ್ಮಾನ್ ಅಫ್ಜಲ್, ಸ್ಟುವರ್ಟ್ ಮೀಕರ್, ಕೆವಿನ್ ಒ'ಬ್ರಿಯಾನ್, ಡ್ಯಾರೆನ್ ಮ್ಯಾಡಿ.

ಕ್ರಿಕೆಟ್ ಅಭಿಮಾನಿಗಳು ಫ್ಯಾನ್‌ಕೋಡ್ ಮೊಬೈಲ್ ಅಪ್ಲಿಕೇಶನ್ (ಆಂಡ್ರಾಯ್ಡ್, ಐಒಎಸ್) ಮತ್ತು ಟಿವಿ ಅಪ್ಲಿಕೇಶನ್‌ನಲ್ಲಿ ಎಲ್ಲಾ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

Story first published: Tuesday, July 2, 2024, 18:43 [IST]
Other articles published on Jul 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+