Kulcha Pair: ಟಿ20 ವಿಶ್ವಕಪ್‌ನಲ್ಲಿ ಕಮಾಲ್ ಮಾಡ್ತಾರ ಟೀಮ್ ಇಂಡಿಯಾ ಕುಲ್ಚಾ ಜೋಡಿ?
ಜೂನ್ 1 ರಿಂದ 29 ರವರೆಗೆ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿ ಅಳೆದು ತೂಗಿ ಬಲಿಷ್ಠ ಭಾರತ ತಂಡವನ್ನು ಕಟ್ಟಿದೆ. ತಂಡದಲ್ಲಿ ಅನುಭವಿ ಆಟಗಾರರೊಂದಿಗೆ ಯುವ ಆಟಗಾರರು ಇದ್ದು, ಸಾಗರೋತ್ತರ ಟೂರ್ನಿನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಚರ್ಚೆಯಾಗುತ್ತಿದೆ.
ಬಹುದಿನಗಳ ಬಳಿಕ ಟೀಮ್ ಇಂಡಿಯಾಕ್ಕೆ ಬಲಗೈ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಪುನರಾಗಮನ ಮಾಡಿದ್ದಾರೆ. ಈ ಮೂಲಕ ಚೈನ್‌ಮ್ಯಾನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರೊಂದಿಗೆ ಯುಜ್ವೇಂದ್ರ ಚಹಾಲ್ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಸಜ್ಜಾಗಿದ್ದಾರೆ.

ತಮ್ಮ ಸ್ಪಿನ್ ಮೋಡಿಯಿಂದ ವಿಶ್ವದ ಆನೇಕ ಬಲಿಷ್ಠ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಿರುವ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಕುಲ್ಚಾ ಜೋಡಿ ಎಂದೆ ಪ್ರಖ್ಯಾತಿ ಗಳಿಸಿದ್ದಾರೆ. ಈ ಹಿಂದೆ 2022ರ ಟಿ20 ವಿಶ್ವಕಪ್ ಭಾರತ ತಂಡದಿಂದಲ್ಲೂ ಬಿಸಿಸಿಐ ಆಯ್ಕೆ ಸಮಿತಿ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಅವರನ್ನು ಕೈ ಬಿಟ್ಟು ಶಾಕ್ ನೀಡಿತ್ತು.
ಸಾಮರ್ಥ್ಯದ ಆಧಾರದ ಮೇಲೆ ಯಾವ ಕುಲ್ಚಾ ಜೋಡಿಯನ್ನು ಟೀಮ್ ಇಂಡಿಯಾದಿಂದ ಆಚೆ ಇಟ್ಟು ಬಿಸಿಸಿಐ ಆಯ್ಕೆ ಸಮಿತಿ ಅಮಾನಿಸಿತ್ತು. ಅದೆ ಸಮಿತಿ ಮೂಗಿನ ಮೇಲೆ ಕೈ ಇಟ್ಟು ನೋಡುವಂತೆ 15ನೇ ಆವೃತ್ತಿ ಐಪಿಎಲ್‌ಯಲಿ ಈ ಕುಲ್ಚಾ ಜೋಡಿ ಬೊಂಬಾಟ್ ಪ್ರದರ್ಶನ ನೀಡಿತ್ತು. ಈ ಆವೃತ್ತಿಯಲ್ಲಿ 27 ವಿಕೆಟ್ ಪಡೆದಿದ್ದ ಚಹಾಲ್ ಪರ್ಪಲ್ ಕ್ಯಾಪ್ ರನ್ನರ್ ಆಪ್ ಆಗಿದ್ದರು. ಇನ್ನೊಂದೆಡೆ ಕುಲದೀಪ್ ಯಾದವ್ 21 ವಿಕೆಟ್ ಪಡೆಯವ ಮೂಲಕ ಚಹಾಲ್ ಅವರಿಗೆ ಪ್ರಬಲ ಸ್ಪರ್ಧಿಯಾಗಿದ್ದರು.
ಇದೀಗಾ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ 17ನೇ ಆವೃತ್ತಿ ಐಪಿಎಲ್‌ನಲ್ಲಿ ಕುಲ್ಚಾ ಜೋಡಿ ಸಾಲಿಡ್ ಪ್ರದರ್ಶನ ನೀಡಿದ್ದಾರೆ. ಇದನ್ನು ಗಮನಿಸಿರುವ ಬಿಸಿಸಿಐ ಆಯ್ಕೆ ಸಮಿತಿ ಈ ಹಿಂದೆ ಮಾಡಿದ ತಪ್ಪು ಅನ್ನು ಮತ್ತೆ ಮಾಡಬಾರದು ಎಂದು ಟಿ20 ವಿಶ್ವಕಪ್‌ಗೆ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಆಯ್ಕೆ ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಕುಲ್ಚಾ ಜೋಡಿ ಸೀಮಿತ ಓವರ್‌ಗಳ ಕ್ರಿಕೆಟ್ ಯಶಸ್ಸಿನ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ತಮ್ಮ ಬೌಲಿಂಗ್ ಮೂಲಕ ಭಾರತಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ವಿಕೆಟ್‌ಗಳನ್ನು ಪಡೆಯುವುದರಲ್ಲೂ ಯಶ ಕಂಡಿದ್ದಾರೆ. ಸಾಮಾನ್ಯವಾಗಿ ಕುಲ್ಚಾ ಜೋಡಿಯನ್ನು ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡವನ್ನು ಹೇರಲು ಮತ್ತು ಪಂದ್ಯಗಳ ನಿರ್ಣಾಯಕ ಹಂತಗಳಲ್ಲಿ ಮೇಲುಗೈ ಸಾಧಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ಕುಲ್ಚಾ ಜೋಡಿಯನ್ನು ಮತ್ತೊಮ್ಮೆ ಬಿಸಿಸಿಐ ಆಯ್ಕೆ ಸಮಿತಿ ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ಕಣಕ್ಕೀಳಿಸಲು ನಿರ್ಧಾರಿಸಿದೆ.
ಕುಲ್ಚಾ ಜೋಡಿಯ ಮೋಡಿ :
ಈವರೆಗೆ ಕುಲದೀಪ್ ಆಡಿರುವ 34 ಟಿ20 ಪಂದ್ಯಗಳಿಂದ 59 ವಿಕೆಟ್‌ಗಳನ್ನು ಕಬಳಿಸಿದರೆ, ಐಪಿಎಲ್‌ನಲ್ಲಿ 79 ಪಂದ್ಯಗಳಲ್ಲಿ 83 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಬೌಲಿಂಗ್ ಮತ್ತು ವಿಕೆಟ್ ಪಡೆಯುವುದರಲ್ಲಿ ಕುಲ್‌ದೀಪ್ ಅವರಿಗಿಂತ ಯುಜ್ವೇಂದ್ರ ಚಹಾಲ್ ಅವರು ಹೆಚ್ಚು ಪ್ರಭಾವಿಯಾಗಿದ್ದಾರೆ.
ಚಹಾಲ್ ಅವರು 153 ಐಪಿಎಲ್ ಪಂದ್ಯಗಳಲ್ಲಿ ಬರೋಬ್ಬರಿ 200 ವಿಕೆಟ್ ಉರಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವೊಂದರ ಪರವಾಗಿ ಚಹಾಲ್ 139 ವಿಕೆಟ್‌ಗಳನ್ನು ಹೊಂದಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ 79 ಪಂದ್ಯಗಳಿಂದ 96 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications