Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಪ್‌ ಗೆದ್ದರು ತವರಿಗೆ ಮರಳದ ಟೀಮ್ ಇಂಡಿಯಾ; ಬಾರ್ಬಡೋಸ್‌ನಲ್ಲಿ ರೋಹಿತ್‌ ಪಡೆ ಲಾಕ್‌!

ಜುಲೈ 2 ಮಂಗಳವಾರ, 17 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿರುವ ಭಾರತ ಟಿ20 ವಿಶ್ವಕಪ್‌ನಲ್ಲಿ ಎರಡನೇ ಪ್ರಶಸ್ತಿ ಗೆದ್ದುಕೊಂಡಿದೆ. ಇದರಿಂದ ಇಡೀ ಭಾರತ ದೇಶವೇ ಸಂತಸಗೊಂಡಿದ್ದು, ಟೀಮ್‌ ಇಂಡಿಯಾ ಆಟಗಾರರನ್ನು ತವರಿನಲ್ಲಿ ಸ್ವಾಗತಿಸಲು ಸಜ್ಜಾಗಿದ್ದಾರೆ.

ಚಾಂಪಿಯನ್‌ ಇಂಡಿಯಾ ಸೋಮವಾರ ಬಾರ್ಬಡೋಸ್‌ನಿಂದ ನ್ಯೂಯಾರ್ಕ್‌ಗೆ ಹೋಗಿ ನಂತರ ದುಬೈ ಮೂಲಕ ತವರಿಗೆ ಮರಳಬೇಕಿತ್ತು. ಆದರೆ ಟೀಮ್‌ ಇಂಡಿಯಾ ಇನ್ನೂ ಬಾರ್ಬಡೋಸ್‌ನಲ್ಲಿ ಇದೆ.

Team India locked in Barbados due to Cyclone Beryl

ಬಾರ್ಬಡೋಸ್‌ನಲ್ಲಿ ಟೀಮ್ ಇಂಡಿಯಾ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್‌ನಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆತಿದ್ದು, ಕರ್ಫ್ಯೂ ಘೋಷಿಸಿಲಾಗಿದೆ. ಇದರಿಂದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಹೀಗಾಗಿ ಟೀಮ್‌ ಇಂಡಿಯಾ ತವರಿಗೆ ಮರಳಲು ವಿಮಾನದ ವವ್ಯಸ್ಥೆ ಇಲ್ಲದೆ ಬಾರ್ಬಡೋಸ್‌ನ ಹೋಟೆಲ್ ಹಿಲ್ಟನ್‌ನಲ್ಲಿ ಉಳಿದುಕೊಂಡಿದೆ. ಹವಾಮಾನವು ಉತ್ತಮವಾಗಿದ್ದರೆ ಟೀಮ್ ಇಂಡಿಯಾ ಚಾರ್ಟರ್ ಫ್ಲೈಟ್ ಮೂಲಕ ಮರಳಬಹುದು ಎನ್ನಲಾಗುತ್ತಿದೆ. ಇತ್ತ ಭಾರತೀಯ ಅಭಿಮಾನಿಗಳು ಆಟಗಾರರು ಮತ್ತು ಟ್ರೋಫಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಸೂರ್ಯ-ಜೈಸ್ವಾಲ್ ಪೋಸ್ಟ್‌

ಬಾರ್ಬಡೋಸ್‌ನಲ್ಲಿರುವ ಟೀಮ್‌ ಇಂಡಿಯಾ ಆಟಗಾರರಿಂದ ವಿವಿಧ ರೀತಿಯ ಪೋಸ್ಟ್‌ಗಳು ನಿರಂತರವಾಗಿ ಕಂಡುಬರುತ್ತಿವೆ. ಟೀಮ್‌ ಇಂಡಿಯಾ ಇನ್ನೂ ಗೆಲುವಿನ ಸಂಭ್ರಮದಲ್ಲಿದೆ.

ಭಾರತದ ಸ್ಟಾರ್ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಮುದ್ರ ತೀರದಲ್ಲಿ ಬಲವಾದ ಗಾಳಿಯನ್ನು ಕಾಣಬಹುದು.

ವೀಡಿಯೊ ಜೊತೆಗೆ, 'ಹವಾ ತೇಜ್ ಚಲತಾ ಹೈ ದಿನಕರ್ ರಾವ್, ನಿಮ್ಮ ಟೋಪಿಯನ್ನು ನೋಡಿಕೊಳ್ಳಿ' ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ, ಯಶಸ್ವಿ ಜೈಸ್ವಾಲ್ ಸಮುದ್ರ ತೀರದಲ್ಲಿ ಬಲವಗಿ ಬೀಸುತ್ತಿರುವ ಗಾಳಿಯ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಚಾರ್ಟರ್ ಪ್ಲೇನ್ ಮೂಲಕ ತವರಿಗೆ ಭಾರತ

ಮೂಲಗಳ ಪ್ರಕಾರ ತಂಡವು ಚಾರ್ಟರ್ ಪ್ಲೇನ್ ಮೂಲಕ ಭಾರತಕ್ಕೆ ಬರಬಹುದು ಎನ್ನಲಾಗುತ್ತಿದೆ. ನವದೆಹಲಿಗೆ ನೇರ ಚಾರ್ಟರ್ ಪ್ಲೇನ್ ಅನ್ನು ತರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಯತ್ನಿಸುತ್ತಿದೆ. ಇದರಿಂದ ತಂಡವು ಸುರಕ್ಷಿತವಾಗಿ ತವರಿಗೆ ತಲುಪಬಹುದು.

ಆದಾಗ್ಯೂ, ಬಾರ್ಬಡೋಸ್‌ನಲ್ಲಿ ಏಪ್‌ಪೋರ್ಟ್‌ ಮುಚ್ಚಿರುವುದರಿಂದ ಯಾವುದೇ ವಿಮಾನಗಳು ಇಲ್ಲಿ ಕನಿಷ್ಠ 24 ಗಂಟೆಗಳ ಕಾಲ ಅಥವಾ ಬಹುಶಃ ಇನ್ನೂ ಹೆಚ್ಚು ಕಾಲ ಇಳಿಯಲು ಸಾಧ್ಯವಾಗುವುದಿಲ್ಲ. ಇಲ್ಲಿಗೆ ತಲುಪಲು, ಚಾರ್ಟರ್ ವಿಮಾನವು ಅಮೆರಿಕದಿಂದ ಹಾರಬೇಕು.

ಆದರೆ, ಸಮುದ್ರದ ಒತ್ತಡದಿಂದಾಗಿ ಗಾಳಿಯ ವೇಗ ಗಂಟೆಗೆ 100 ಮೈಲು ತಲುಪಿದ್ದು, ಮುಂದಿನ 15 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಬಾರ್ಬಡೋರ್ಸ್‌ ವಾಯುಪ್ರದೇಶಕ್ಕೆ ಯಾವುದೇ ವಿಮಾನ ಹಾರುವುದು ಅಸಾಧ್ಯವಾಗಿದೆ. ಈಗಾಗಲೇ ಜುಲೈ 5 ರವರೆಗೆ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವುದರಿಂದ ಸದ್ಯಕ್ಕೆ ಟೀಮ್‌ ಇಂಡಿಯಾ ಸುರಕ್ಷಿತವಾಗಿ ಬಾರ್ಬಡೋಸ್‌ನಲ್ಲಿ ಉಳಿದಿದೆ.

Story first published: Tuesday, July 2, 2024, 8:08 [IST]
Other articles published on Jul 2, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+