ಟೀಮ್ ಇಂಡಿಯಾ ಆಟಗಾರನ ನಿರಂತರ ಕಳಪೆ ಪ್ರದರ್ಶನ, ಆದ್ರೂ ಹಲವು ಅವಕಾಶ: ಕಾಡುವ ಪ್ರಶ್ನೆಗಳು..
ಬಾಂಗ್ಲಾದೇಶದ ವಿರುದ್ಧ ಟೀಂ ಇಂಡಿಯಾ ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯದಲ್ಲಿ 6 ರನ್ ಗಳಿಂದ ಸೋಲು ಕಂಡಿದೆ. ಈ ಸೋಲಿನ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದ, ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮ್ಯಾನ್ ಸೂರ್ಯಕುಮಾರ್ ಯಾದವ್ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ 34 ಎಸೆತಗಳಲ್ಲಿ 26 ರನ್ ಗಳಿಸಲಷ್ಟೇ ಶಕ್ತರಾದರು. ಅಸಲಿಗೆ ಅಂದಿನ ಪಂದ್ಯದಲ್ಲಿ ಅವರಿಗೆ ತಮ್ಮ ಬ್ಯಾಟಿಂಗ್ ಲಯ ತೋರಿಸುವ ಉತ್ತಮ ಅವಕಾಶವಿತ್ತು.

ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ನಿರಂತರ ಕಳಪೆ ಪ್ರದರ್ಶನ ನೀಡಿದರೂ, ತಂಡದಲ್ಲಿ ಸ್ಥಾನ ಲಭಿಸುತ್ತಿರುವ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅಂಕಿ ಅಂಶಗಳ ಪ್ರಕಾರ ಸೂರ್ಯ ಕುಮಾರ್ ಯಾದವ್ ಭಾರತದ ಪರ 27 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸೂರ್ಯಕುಮಾರ್ ಯಾದವ್ ಈ 27 ಏಕದಿನ ಪಂದ್ಯಗಳಲ್ಲಿ 537 ರನ್ ಗಳಿಸಿದ್ದಾರೆ.
ಈ ಅವಧಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಸರಾಸರಿ 24.41 ಆಗಿದೆ. ಆದರೆ ಈ ಆಟಗಾರ ODI ಸ್ವರೂಪದಲ್ಲಿ 99.81 ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲಿ ಎರಡು ಬಾರಿ ಐವತ್ತು ರನ್ ಗಳ ಗಡಿ ದಾಟಿದ್ದಾರೆ. ಆದರೆ ಬಿಗ್ ಸ್ಕೋರ್ ಬಾರಿಸಲು ಸಾಧ್ಯವಾಗಿಲ್ಲ.
ಸೂರ್ಯಕುಮಾರ್ ಯಾದವ್ ಅವರ ಟಿ20 ದಾಖಲೆ ಅಮೋಘ
ಸೂರ್ಯಕುಮಾರ್ ಯಾದವ್ ಅವರ ಟಿ20 ದಾಖಲೆ ಅಮೋಘವಾಗಿವೆ. ಟಿ20 ಮಾದರಿಯಲ್ಲಿ ನೀಡಿದ ಪ್ರದರ್ಶನವನ್ನೇ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲೂ ನೀಡಬಹುದು ಎಂಬ ಲೆಕ್ಕಾಚಾರದಿಂದಲೇ ಅವರಿಗೆ ಮಣೆ ಹಾಕಲಾಗುತ್ತಿದೆ. ಆದರೆ, ಸಿಕ್ಕ ಅವಕಾಶವನ್ನು ಪದೇಪದೇ ಹಾಳು ಮಾಡಿಕೊಳ್ಳುತ್ತಿದ್ದು, ಅವರ ಸ್ಥಾನದ ಮೇಲೆ ತೂಗುಗತ್ತಿ ನೇತಾಡುವಂತೆ ಮಾಡಿದೆ.
ತಂಡದಲ್ಲಿ ಎಷ್ಟು ದಿನ ಸ್ಥಾನ ನೀಡುತ್ತೀರಾ ಎಂಬ ಪ್ರಶ್ನೆಗಳು ಎದ್ದಿವೆ
ಇನ್ನು ಎಷ್ಟು ದಿನ ಸೂರ್ಯ ರನ್ ಗಳಿಸದೇ ಇದ್ದರೂ, ತಂಡದಲ್ಲಿ ಸ್ಥಾನ ನೀಡುತ್ತೀರಾ ಎಂಬ ಪ್ರಶ್ನೆಗಳು ಎದ್ದಿವೆ. ಏಷ್ಯಾ ಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 6 ರನ್ ಗಳಿಂದ ಬಾಂಗ್ಲಾದೇಶದ ವಿರುದ್ಧ ಸೋಲನ್ನು ಕಂಡಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರುಗಳಲ್ಲಿ 8 ವಿಕೆಟೆಗೆ 265 ರನ್ ಗಳಿಸಿತ್ತು.
ಈ ಮೂಲಕ ಭಾರತ ತಂಡಕ್ಕೆ ಗೆಲುವಿಗೆ 266 ರನ್ ಗಳ ಗುರಿ ನೀಡಿತು. ಆದರೆ ಭಾರತ ತಂಡ 49.5 ಓವರುಗಳಲ್ಲಿ ಕೇವಲ 259 ರನಗಳಿಗೆ ಸೀಮಿತವಾಯಿತು. ಈ ಮೂಲಕ ಶಕೀಬ್ ಅಲ್ ಹಸನ್ ಪಡೆ 6 ರನ್ ಗಳ ಜಯ ಸಾಧಿಸಿತು. ಭಾರತದ ಪರ ಆರಂಭಿಕ ಆಟಗಾರ ಶುಭಮನ್ ಗಿಲ್ ಭರ್ಜರಿ ಶತಕ ಬಾರಿಸಿದರು.
ಈ ಯುವ ಆರಂಭಿಕ ಆಟಗಾರ 133 ಎಸೆತಗಳಲ್ಲಿ 121 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ಸೇರಿವೆ. ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಬಾಂಗ್ಲಾದೇಶ ಪರ ಗರಿಷ್ಠ 3 ವಿಕೆಟ್ ಪಡೆದರು. (Image Courtesy: PTI)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications