ಭಾರತ-ಆಸೀಸ್: ನವದೀಪ್ ಸೈನಿ ಹುಟ್ಟುಹಬ್ಬ ಆಚರಿಸಿದ ಟೀಮ್ ಇಂಡಿಯಾ

ಸಿಡ್ನಿ: ಭಾರತದ ವೇಗಿ ನವದೀಪ್ ಸೈನಿ ನವೆಂಬರ್ 23ಕ್ಕೆ 28ನೇ ಹರೆಯಕ್ಕೆ ಕಾಲಿರಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಸೈನಿ ಅವರ ಹುಟ್ಟುಹಬ್ಬವನ್ನು ಟೀಮ್ ಇಂಡಿಯಾ ಆಟಗಾರರು ಸಿಡ್ನಿಯ ಪುಲ್‌ಮ್ಯಾನ್ ಹೋಟೆಲ್‌ನಲ್ಲಿ ಆಚರಿಸಿದ್ದಾರೆ.
ಬಹುನಿರೀಕ್ಷಿತ ಭಾರತ vs ಆಸ್ಟ್ರೇಲಿಯಾ ಸರಣಿಗಾಗಿ ಸದ್ಯ ಭಾರತೀಯ ತಂಡ ಸಿಡ್ನಿಯಲ್ಲಿದ್ದು ಅಭ್ಯಾಸ ನಡೆಸುತ್ತಿದೆ. ತಂಡದ ಜೊತೆಗೆ ಇರುವ ನವದೀಪ್ ಸೈನಿ ಅಲ್ಲೇ ಹುಟ್ಟುಹಬ್ಬದ ಸಂಭ್ರಮಾಚರಿಸಿಕೊಂಡಿದ್ದಾರೆ. ಭಾರತದ ಏಕದಿನ, ಟಿ20ಐ ಮತ್ತು ಟೆಸ್ಟ್ ಮೂರೂ ತಂಡಗಳಲ್ಲೂ ಸೈನಿ ಹೆಸರಿಸಲ್ಪಟ್ಟಿದ್ದಾರೆ.
ಭಾರತೀಯ ಆಟಗಾರರು ಸೈನಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿದೆ. ಕೇಕ್ ಕತ್ತರಿಸುವ ಮೂಲಕ ಸೈನಿ ಬರ್ತ್‌ಡೇ ಆಚರಿಸಲಾಗಿದೆ. 1992 ನವೆಂಬರ್ 23ರಂದು ಸೈನಿ ಹರ್ಯಾಣ ರಾಜ್ಯದ ಕಾರ್ನಲ್‌ನಲ್ಲಿ ಜನಿಸಿದ್ದರು.
ಏಕದಿನ ಮತ್ತು ಟಿ20ಐ ಎರಡೂ ಮಾದರಿಗಳಲ್ಲೂ ಸೈನಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ್ದಾರೆ. 5 ಏಕದಿನ ಪಂದ್ಯಗಳಲ್ಲಿ 60.2 ಸರಾಸರಿಯಂತೆ 5 ವಿಕೆಟ್, 9 ಟಿ20ಐ ಪಂದ್ಯಗಳಲ್ಲಿ 18.08 ಸರಾಸರಿಯಂತೆ ಸೈನಿ 13 ವಿಕೆಟ್ ಪಡೆದಿದ್ದಾರೆ. 26 ಐಪಿಎಲ್ ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications