ಟೀಮ್ ಇಂಡಿಯಾ ಮುಂದಿದೆ ರಣರೋಚಕ ಸವಾಲುಗಳು; ಐಪಿಎಲ್ ನಂತರದ ಭಾರತದ ಸಂಪೂರ್ಣ ವೇಳಾಪಟ್ಟಿ
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿ ಯಶಸ್ವಿಯಾಗಿ ಅಂತ್ಯವಾಗಿದೆ. ಎರಡು ತಿಂಗಳ ಕಾಲ ನಡೆದ ಈ ಮೆಗಾ ಟೂರ್ನಿ ಮುಕ್ತಾಯದ ಬಳಿಕ ಭಾರತ ತಂಡ ಈಗ ತನ್ನ ಅಂತಾರಾಷ್ಟ್ರೀಯ ಸರಣಿಗಳತ್ತ ಚಿತ್ತ ನೆಡಲಿದೆ. 2022ರಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಟಿ20 ವಿಶ್ವಕಪ್, ಏಷ್ಯಾಕಪ್ ಸೇರಿದಂತೆ ಬಹುನಿರೀಕ್ಷಿತ ಟೂರ್ನಿಗಳಲ್ಲಿ ಭಾರತ ನಿರಾಸೆ ಕಂಡಿತ್ತು. ಟಿ20 ಮಾದರಿಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಲು ವಿಫಲವಾಗಿದ್ದ ಭಾರತ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ತನ್ನ ಹೋರಾಟ ಅಂತ್ಯವಾಗಿತ್ತು.
ಈ ವರ್ಷವೂ ಭಾರತದ ಮುಂದೆ ಅಂಥಾದ್ದೇ ದೊಡ್ಡ ದೊಡ್ಡ ಸವಾಲುಗಳು ಟೀಮ್ ಇಂಡಿಯಾದ ಮುಂದಿದೆ. ಈಗಾಗಲೇ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಗೆಲುವು ಸಾಧಿಸಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಐಪಿಎಲ್ ಬಳಿಕ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಮೂಲಕ ಆರಂಭಿಸಲು ಸಜ್ಜಾಗಿದೆ. ಇಂಗ್ಲೆಂಡ್‌ನ ನಂಡನ್‌ನಲ್ಲಿರುವ ದಿ ಓವಲ ಕ್ರೀಡಾಂಗಣದಲ್ಲಿ ಟೆಸ್ಟ್ ಮಾದರಿಯಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣೆಸಾಡಲಿದ್ದು ಜೂನ್ 7ರಿಂದ 11ರವರೆಗೆ ಈ ಪಂದ್ಯ ನಡೆಯಲಿದೆ.
ಜುಲೈ/ಆಗಸ್ಟ್, ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ ಭಾರತ
ಜುಲೈ ತಿಂಗಳಿನಲ್ಲಿ ಟೀಮ್ ಇಂಡಿಯಾ ಕೆರಿಬಿಯನ್ ನಾಡಿಗೆ ಪ್ರವಾಸಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಮೂರು ಮಾದರಿಯಲ್ಲಿಯೂ ಸರಣಿಯ್ನಾಡಲಿರುವ ಟೀಮ್ ಇಂಡಿಯಾ ಮೊದಲುಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಸಪ್ಟೆಂಬರ್‌ನಲ್ಲಿ ನಡೆಯಲಿದೆ ಏಷ್ಯಾ ಕಪ್ ಟೂರ್ನಿ
ಇನ್ನು ಈ ಬಾರಿಯ ಏಷ್ಯಾ ಕಪ್ ಟೂರ್ನಿ ಏಕದಿನ ಮಾದರಿಯಲ್ಲಿ ನಡೆಯಲಿದೆ. ಆದರೆ ಟೂರ್ನಿಯ ಆಯೋಜನೆಗೆ ಸಂಬಂಧಿಸಿದ ಗೊಂದಲ ಮುಂದಿವರಿದಿದೆ. ಪಾಕಿಸ್ಥಾನ ಟೂರ್ನಿಯ ಆಯೋಜನೆ ಹೊಂದಿದೆ. ಆದರೆ ಪಾಕಿಸ್ತಾನಕ್ಕೆ ಭಾರತ ತೆರಳಲು ಒಪ್ಪದಿರುವ ಕಾರಣ ಶ್ರೀಲಂಕಾದಲ್ಲಿ ಈ ಟೂರ್ನಿ ಆಯೋಜನೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಈ ಬಗೆಗಿನ ಗೊಂದಲಗಳು ಮುಮದುವರಿದಿದೆ.
ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ ಆಸ್ಟ್ರೇಲಿಯಾ
ಈ ವರ್ಷ ಆಸ್ಟ್ರೇಲಿಯಾ ಮೂರು ಬಾರಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಬಾರಿ ವೈಟ್‌ಬಾಲ್ ಮಾದರಿಯಲ್ಲಿ ಮಾತ್ರವೇ ಸರಣಿ ಆಯೋಜನೆಯಾಗಲಿದೆ. ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಪಂದ್ಯವನ್ನು ಆಯೋಜಿಸಲಿದೆ.
ಅಕ್ಟೋಬರ್/ನವೆಂಬರ್, ಏಕದಿನ ವಿಶ್ವಕಪ್
2023ರ ಏಕದಿನ ವಿಶ್ವಕಪ್ ಟೂರ್ನಿ ಭಾರತದಲ್ಲಿಯೇ ಆಯೋಜನೆಯಾಗಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಾರಿ ಭಾರತ ಪೂರ್ಣಪ್ರಮಾಣದಲ್ಲಿ ಆತಿಥ್ಯವಹಿಸಿಕೊಳ್ಳುತ್ತಿರುವುದು ವಿಶೇಷ. 2011ರಲ್ಲಿ ಶ್ರೀಲಂಕಾ ಜೊತೆಗೆ ಜಂಟಿಯಾಗಿ ಆಯೋಜನೆ ಮಾಡಿತ್ತು. ಅಕ್ಟೋಬರ್‌ನಲ್ಲಿ ಈ ಟೂರ್ನಿ ಆರಂಭವಾಗಲಿದ್ದು ನವೆಂಬರ್‌ನಲ್ಲಿ ಅಂತ್ಯವಾಗಲಿದೆ.
ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ
ಇನ್ನು ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಭಾರತದಲ್ಲಿ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಚುಟುಕು ಸರಣಿಯಲ್ಲಿ ಎರಡು ತಂಡಗಳ ಮಧ್ಯೆ ಐದು ಪಂದ್ಯಗಳು ನಡೆಯಲಿದೆ.
ಡಿಸೆಂಬರ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾಗೆ ಪ್ರವಾಸ
ಇನ್ನು ಡಿಸೆಂಬರ್ ತಿಂಗಳಿನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮೂರು ಮಾದರಿಯಲ್ಲಿಯೂ ಮುಖಾಮುಖಿಯಾಗಲಿದ್ದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications