ಐಪಿಎಲ್ 2022 ಮುಕ್ತಾಯದ ಬೆನ್ನಲ್ಲೇ ಶುರು ಟೀಮ್ ಇಂಡಿಯಾ ಪಂದ್ಯಗಳು; ಜೂನ್-ಜುಲೈ ತಿಂಗಳ ವೇಳಾಪಟ್ಟಿ

ಕಳೆದ ಮೇ 29ರ ಭಾನುವಾರದಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದ ಮೂಲಕ ಟೂರ್ನಿ ಅಂತ್ಯಗೊಂಡಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಭರ್ಜರಿ ಜಯ ಸಾಧಿಸಿದ್ದು, ತನ್ನ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹೀಗೆ ಈ ಪಂದ್ಯ ಮುಗಿದ ನಂತರ ಕಳೆದ ಎರಡು ತಿಂಗಳುಗಳ ಕಾಲ ಕ್ರಿಕೆಟ್ ಲೋಕದ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿಗೆ ತೆರೆಬಿದ್ದಿದ್ದು, ಅಂತರರಾಷ್ಟ್ರೀಯ ಪಂದ್ಯಗಳು ಗರಿಗೆದರಿವೆ. ಹೌದು, ಈ ಐಪಿಎಲ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರ ಜತೆಗೆ ವಿಶ್ವದ ಹಲವು ಕ್ರಿಕೆಟ್ ತಂಡಗಳ ಪ್ರಮುಖ ಆಟಗಾರರು ಭಾಗವಹಿಸಿದ್ದ ಕಾರಣ ಹೆಚ್ಚೇನೂ ಅಂತರರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ. ಆದರೆ, ಇದೀಗ ಅಂತರರಾಷ್ಟ್ರೀಯ ಸರಣಿಗಳು ಪುನರಾರಂಭವಾಗುತ್ತಿದ್ದು, ಸಾಲು ಸಾಲು ಪಂದ್ಯಗಳು ಆಯೋಜನೆಯಾಗಿವೆ.
ಸದ್ಯ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಸರಣಿ ಆರಂಭವಾಗಿದ್ದು, ಟೀಮ್ ಇಂಡಿಯಾದ ಅಂತರರಾಷ್ಟ್ರೀಯ ಪಂದ್ಯಗಳು ಇದೇ ತಿಂಗಳ 9ರಿಂದ ಆರಂಭವಾಗಲಿದೆ. ಹೌದು, ಜೂನ್ 9ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದ್ದು, ನಂತರ ಸಾಲು ಸಾಲು ಸರಣಿಗಳು ನಡೆಯಲಿವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿಯೇ ಟೀಮ್ ಇಂಡಿಯಾ ಒಟ್ಟು ಈ ಹಿಂದೆ ಮುಂದೂಡಲ್ಪಟ್ಟಿದ್ದ ಒಂದು ಟೆಸ್ಟ್ ಪಂದ್ಯ ಸೇರಿದಂತೆ ಐದು ಸರಣಿಗಳಲ್ಲಿ ಕಣಕ್ಕಿಳಿಯಲಿದ್ದು, ಅವುಗಳ ವೇಳಾಪಟ್ಟಿ, ಪಂದ್ಯ ನಡೆಯುವ ಸ್ಥಳದ ವಿವರ ಈ ಕೆಳಕಂಡಂತಿದೆ.

ಟೀಮ್ ಇಂಡಿಯಾದ ಜೂನ್ ತಿಂಗಳ ವೇಳಾಪಟ್ಟಿ
ಜೂನ್ 9 ಭಾರತ vs ದಕ್ಷಿಣ ಆಫ್ರಿಕಾ - ಮೊದಲ ಟಿ ಟ್ವೆಂಟಿ ಪಂದ್ಯ - ಅರುಣ್ ಜೇಟ್ಲಿ ಸ್ಟೇಡಿಯಂ, ನವದೆಹಲಿ 7 PM
ಜೂನ್ 12 ಭಾರತ vs ದಕ್ಷಿಣ ಆಫ್ರಿಕಾ - ಎರಡನೇ ಟಿ ಟ್ವೆಂಟಿ ಪಂದ್ಯ - ಬಾರಾಬತಿ ಸ್ಟೇಡಿಯಂ, ಕಟಕ್ 7 PM
ಜೂನ್ 14 ಭಾರತ vs ದಕ್ಷಿಣ ಆಫ್ರಿಕಾ - ಮೂರನೇ ಟಿ ಟ್ವೆಂಟಿ ಪಂದ್ಯ - ಡಾ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂ, ವಿಶಾಖಪಟ್ಟಣಂ 7 PM
ಜೂನ್ 17 ಭಾರತ vs ದಕ್ಷಿಣ ಆಫ್ರಿಕಾ - ನಾಲ್ಕನೇ ಟಿ ಟ್ವೆಂಟಿ ಪಂದ್ಯ - SCA ಸ್ಟೇಡಿಯಂ, ರಾಜ್ಕೋಟ್ 7 PM
19 ಜೂನ್ ಭಾರತ vs ದಕ್ಷಿಣ ಆಫ್ರಿಕಾ - ಐದನೇ ಟಿ ಟ್ವೆಂಟಿ ಪಂದ್ಯ - ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು 7 PM
26 ಜೂನ್ ಭಾರತ vs ಐರ್ಲೆಂಡ್ - ಮೊದಲ ಟಿ ಟ್ವೆಂಟಿ ಪಂದ್ಯ - ಕ್ಯಾಸಲ್ ಅವೆನ್ಯೂ, ಡಬ್ಲಿನ್ 8:30 PM
28 ಜೂನ್ ಭಾರತ vs ಐರ್ಲೆಂಡ್ - ಎರಡನೇ ಟಿ ಟ್ವೆಂಟಿ ಪಂದ್ಯ ಕ್ಯಾಸಲ್ ಅವೆನ್ಯೂ, ಡಬ್ಲಿನ್ 8:30 PM

ಜುಲೈ ತಿಂಗಳ ವೇಳಾಪಟ್ಟಿ
1 ಜುಲೈ-5 ಜುಲೈ ಭಾರತ vs ಇಂಗ್ಲೆಂಡ್ - ಟೆಸ್ಟ್ ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್ 3:30 PM ( ಮುಂದೂಡಲಾಗಿದ್ದ ಟೆಸ್ಟ್ ಪಂದ್ಯ )
ಜುಲೈ 7 ಭಾರತ vs ಇಂಗ್ಲೆಂಡ್ - ಮೊದಲ ಟಿ ಟ್ವೆಂಟಿ ಪಂದ್ಯ - ರೋಸ್ ಬೌಲ್, ಸೌತಾಂಪ್ಟನ್ 11 PM
ಜುಲೈ 9 ಭಾರತ vs ಇಂಗ್ಲೆಂಡ್ - ಎರಡನೇ ಟಿ ಟ್ವೆಂಟಿ ಪಂದ್ಯ - ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್ 7 PM
ಜುಲೈ 10 ಭಾರತ vs ಇಂಗ್ಲೆಂಡ್ - ಮೂರನೇ ಟಿ ಟ್ವೆಂಟಿ ಪಂದ್ಯ - ಟ್ರೆಂಟ್ ಬ್ರಿಡ್ಜ್, ನಾಟಿಂಗ್ಹ್ಯಾಮ್ 11 PM
ಜುಲೈ 12 ಭಾರತ vs ಇಂಗ್ಲೆಂಡ್ - ಮೊದಲ ಏಕದಿನ ಪಂದ್ಯ - ಕೆನ್ನಿಂಗ್ಟನ್ ಓವಲ್, ಲಂಡನ್ 3:30 PM
ಜುಲೈ 14 ಭಾರತ vs ಇಂಗ್ಲೆಂಡ್ - ದ್ವಿತೀಯ ಏಕದಿನ ಪಂದ್ಯ - ಲಾರ್ಡ್ಸ್, ಲಂಡನ್ 5:30 PM
ಜುಲೈ 17 ಭಾರತ vs ಇಂಗ್ಲೆಂಡ್ - ತೃತೀಯ ಏಕದಿನ ಪಂದ್ಯ - ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ 5:30 PM

ದಕ್ಷಿಣ ಆಫ್ರಿಕಾ ಸರಣಿಗೆ ಪ್ರಕಟವಾದ ಟೀಮ್ ಇಂಡಿಯಾ
ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್ ) ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ವೈ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್ , ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications