For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ದಾಖಲೆಗಳು

By Mahesh

1992 ರ ನಂತರ ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ 2015ರಲ್ಲಿ ಸಚಿನ್ ತೆಂಡೂಲ್ಕರ್ ಇಲ್ಲದೆ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ. 1992 ರಿಂದ 2011 ರ ತನಕ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಸಚಿನ್ ಭರ್ಜರಿ ದಾಖಲೆಗಳನ್ನು ನಿರ್ಮಿಸಿದರು. ಕೊನೆಗೆ ವಿಶ್ವಕಪ್ ಎತ್ತಿ ಹಿಡಿದು ತಮ್ಮ ಕನಸು ನನಸಾಗಿಸಿಕೊಂಡರು.

ಪಾಕಿಸ್ತಾನದ ಜಾವೇದ್ ಮಿಯಾಂದಾದ್(1975 ರಿಂದ 1996) ನಂತರ ಸಚಿನ್ ಮಾತ್ರ 6 ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಲ್ಲದೆ ಅನೇಕ ಹೊಸ ದಾಖಲೆಗಳನ್ನು ನಿರ್ಮಿಸಿ ಏಕದಿನ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಕ್ಕೆ ಹೊಸ ದಾದಿ ಹುಟ್ಟುಹಾಕಿದರು. [ಸಚಿನ್, ರಿಕಿ ದಾಖಲೆ ಧೂಳಿಪಟ ಸಾಧ್ಯವೇ?]

ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫೆ.14ರಿಂದ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಈ ಬಾರಿ ಕಪ್ ಉಳಿಸಿಕೊಳ್ಳುವುದೇ ಹೊಸ ದಾಖಲೆಗಳನ್ನು ಬರೆಯುವುದೇ ಕಾದು ನೋಡಬೇಕಿದೆ. [ಶತಕ ವೀರರ ಪೈಕಿ ಸಚಿನ್ ಇಸ್ ಬೆಸ್ಟ್]

Team India's records at ICC World Cup

ಸದ್ಯಕ್ಕೆ ಟೀಂ ಇಂಡಿಯಾದ ಇಲ್ಲಿ ತನಕದ ಸಾಧನೆಯತ್ತ ಅವಲೋಕನ ಇಲ್ಲಿದೆ....

ಅತಿ ಹೆಚ್ಚು ಪಂದ್ಯಗಳಲ್ಲಿ ಆಡಿದವರು
* 45-ಸಚಿನ್ ತೆಂಡೂಲ್ಕರ್ (1992-2011)

ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕ
* 23- ಮೊಹಮ್ಮದ್ ಅಜರುದ್ದೀನ್ (1992-1999)

ಅತಿ ಹೆಚ್ಚು ಕ್ಯಾಚ್ (ವಿಕೆಟ್ ಕೀಪರ್ ಹೊರತುಪಡಿಸಿ)
* 14- ಅನಿಲ್ ಕುಂಬ್ಳೆ(18 ಪಂದ್ಯಗಳಲ್ಲಿ)

ಅತಿ ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್
* 18-ಕಿರಣ್ ಮೋರೆ (12 ಕ್ಯಾಚ್ ಗಳು ಹಾಗೂ 6 ಸ್ಟಂಪಿಂಗ್ಸ್)

ಅತಿ ಹೆಚ್ಚು ವಿಕೆಟ್
* 44- ಜಹೀರ್ ಖಾನ್ (23 ಇನ್ನಿಂಗ್ಸ್),

* ಜಾವಗಲ್ ಶ್ರೀನಾಥ್ (33 ಇನ್ನಿಂಗ್ಸ್)

ಅತ್ಯುತ್ತಮ ಬೌಲಿಂಗ್
* 6/23 -ಆಶೀಶ್ ನೆಹ್ರಾ vs ಇಂಗ್ಲೆಂಡ್ (2003)

ಅತಿ ಹೆಚ್ಚು ರನ್

* 2,278 (44 ಇನ್ನಿಂಗ್ಸ್) ಸಚಿನ್ ತೆಂಡೂಲ್ಕರ್

ಅತಿ ಹೆಚ್ಚು ವೈಯಕ್ತಿಕ ಸ್ಕೋರ್
* 183 ರನ್ -ಸೌರವ್ ಗಂಗೂಲಿ vs ಶ್ರೀಲಂಕಾ (1999)

ಅತಿ ಹೆಚ್ಚು ಶತಕ
* 6- ಸಚಿನ್ ತೆಂಡೂಲ್ಕರ್

ಅತಿ ಹೆಚ್ಚು ಡಕ್ಸ್

* 4- ಕ್ರಿಸ್ ಶ್ರೀಕಾಂತ್

ತಂಡದ ಅತ್ಯಧಿಕ ಮೊತ್ತ
* 413/5, 50 ಓವರ್ಸ್ vs ಬರ್ಮುಡಾ, 2007. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ತಂಡದ ಅತಿ ಕಡಿಮೆ ಮೊತ್ತ
* 125 ಆಲೌಟ್ 41.4 ಓವರ್ಸ್ vs ಆಸ್ಟ್ರೇಲಿಯಾ, 2003

ಅತಿ ಹೆಚ್ಚಿನ ಸ್ಟ್ರೈಕ್ ರೇಟ್
* 206.25- ಕಪಿಲ್ ದೇವ್ (33 ರನ್ 16 ಎಸೆತ, 5X4) vs ನ್ಯೂಜಿಲೆಂಡ್, 1992

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+