ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ : ಸಚಿನ್, ಮೆಗ್ರಾಥ್, ರಿಕಿ ದಾಖಲೆ ಧೂಳಿಪಟ ಸಾಧ್ಯವೇ?

By Mahesh

ಬೆಂಗಳೂರು, ಜ.22: ಏಕದಿನ ಕ್ರಿಕೆಟ್ ಗಳಲ್ಲಿ ವಿಶ್ವಕಪ್ ಟೂರ್ನಿ ಅತ್ಯಾಕರ್ಷಕ ಹಾಗೂ ಜನಪ್ರಿಯ ಟೂರ್ನಿ ಎನಿಸಿಕೊಂಡಿದೆ. ಅಲ್ಲದೆ, ಪ್ರತಿಭಾವಂತವರಿಗೆ ದಾಖಲೆಗಳನ್ನು ಮುರಿಯುವ ವೇದಿಕೆಯೂ ಆಗಿದೆ. ಈ ಬಾರಿಯ ಐಸಿಸಿ ವಿಶ್ವಕಪ್ 2015ನಲ್ಲೂ ಹೆಚ್ಚಿನ ಪ್ರಮಾಣದ ದಾಖಲೆ ಮುರಿಯುವುದನ್ನು ಕಾಣುವ ತವಕ ಅಭಿಮಾನಿಗಳಿಗಿದೆ.

1975ರಿಂದ 2011ರ ತನಕದ ವಿಶ್ವಕಪ್ ಟೂರ್ನಿಗಳ ಅಂಕಿ ಅಂಶ ಗಮಿಸಿದರೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಗ್ಲೆನ್ ಮೆಗ್ರಾಥ್ ಹಾಗೂ ರಿಕಿ ಪಾಂಟಿಂಗ್ ವಿಶ್ವಕಪ್ ದಾಖಲೆಗಳು ಇನ್ನಷ್ಟು ಕಾಲ ಮುಂದುವರೆಯುವ ಸಾಧ್ಯತೆಗಳಿವೆ. [ವಿಶ್ವಕಪ್ ಶತಕ ವೀರರ ಪೈಕಿ ಸಚಿನ್ ಇಸ್ ಬೆಸ್ಟ್]

ವಿಶ್ವಕಪ್ ಇತಿಹಾಸದಲ್ಲಿ ತೆಂಡೂಲ್ಕರ್ ಅವರು 2,278 ರನ್ ಸ್ಕೋರಿ ಮಾಡಿದ್ದರೆ, ವೇಗಿ ಗ್ಲೆನ್ ಮೆಗ್ರಾಥ್ ಅವರು 71ವಿಕೆಟ್ ಕಿತ್ತಿದ್ದಾರೆ. ಪಾಂಟಿಂಗ್ ಅತಿ ಹೆಚ್ಚು ಪಂದ್ಯ(46) ಹಾಗೂ ಹೆಚ್ಚು ಪಂದ್ಯ ನಾಯಕ(29)ನಾಗಿ ಆಡಿದ್ದಾರೆ. [ವಿಶ್ವಕಪ್ 2015: ಎಲ್ಲಾ ತಂಡಗಳ ಪಟ್ಟಿ]

ಶ್ರೇಷ್ಠ ನಾಯಕರಾಗಿ ಕೂಡಾ ರಿಕಿ ಪಾಂಟಿಂಗ್ ಗುರುತಿಸಲ್ಪಟ್ಟಿದ್ದಾರೆ. 29 ಪಂದ್ಯಗಳಲ್ಲಿ 26 ಗೆಲುವು, 2 ಸೋಲು 1 ಪಂದ್ಯ ಫಲಿತಾಂಶ ಹೊರ ಬಂದಿಲ್ಲ.

ಐಸಿಸಿ ವಿಶ್ವಕಪ್ 1975-2011 ರ ತನಕ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ರೆಕಾರ್ಡ್

1975-2011: All the records from ICC World Cups

ಅತಿ ಹೆಚ್ಚು ರನ್
* 2,278(45 ಪಂದ್ಯಗಳು) -ಸಚಿನ್ ತೆಂಡೂಲ್ಕರ್ (ಭಾರತ)

ಅತಿ ಹೆಚ್ಚು ವಿಕೆಟ್
* 71 (39 ಪಂದ್ಯಗಳು)-ಗ್ಲೆನ್ ಮೆಗ್ರಾಥ್ (ಆಸ್ಟ್ರೇಲಿಯಾ)

ಅತಿ ಹೆಚ್ಚು ವೈಯಕ್ತಿಕ ಸ್ಕೋರ್
* 188 ನಾಟೌಟ್- ಗ್ಯಾರಿ ಕರ್ಸ್ಟನ್ (ದಕ್ಷಿಣ ಆಫ್ರಿಕಾ) vs ಯುನೈಟೆಡ್ ಅರಬ್ ಎಮಿರೇಟ್ಸ್, 1996

ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ಸ್ಕೋರ್
* 673 (11 ಇನ್ನಿಂಗ್ಸ್), 2003- ತೆಂಡೂಲ್ಕರ್

ಅತಿ ಹೆಚ್ಚು ಅರ್ಧಶತಕ
* 15 -ಸಚಿನ್ ತೆಂಡೂಲ್ಕರ್ (ಭಾರತ)

ಅತ್ಯುತ್ತಮ ಬೌಲಿಂಗ್
* 7/15 ಗ್ಲೆನ್ ಮೆಗ್ರಾಥ್ (ಆಸ್ಟ್ರೇಲಿಯಾ) vs ನಮೀಬಿಯಾ, 1999

ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ವಿಕೆಟ್
* 26, 2007ರ ವಿಶ್ವಕಪ್-ಗ್ಲೆನ್ ಮೆಗ್ರಾಥ್

ಅತಿ ಹೆಚ್ಚು ಕ್ಯಾಚ್ (ವಿಕೆಟ್ ಕೀಪರ್ ಹೊರತುಪಡಿಸಿ)
* 28 (46 ಪಂದ್ಯಗಳು)- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)

ಹೆಚ್ಚು ಸ್ಟಂಪಿಂಗ್ಸ್
* 10 (30 ಪಂದ್ಯಗಳು) - ಕುಮಾರ್ ಸಂಗಕ್ಕಾರ (ಶ್ರೀಲಂಕಾ)

ಹೆಚ್ಚು ಕ್ಯಾಚ್ (ವಿಕೆಟ್ ಕೀಪರ್)
* 45 (31 ಪಂದ್ಯಗಳು) ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ)

ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್
* 52 (45 ಪಂದ್ಯ, 7 ಸ್ಟಂಪಿಂಗ್ಸ್) -ಗಿಲ್ ಕ್ರಿಸ್ಟ್

ಹೆಚ್ಚು ಶತಕ ಬಾರಿಸಿದ ಆಟಗಾರ
* 6 (44 ಇನ್ನಿಂಗ್ಸ್)- ಸಚಿನ್ ತೆಂಡೂಲ್ಕರ್. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಅತಿ ಹೆಚ್ಚು ಡಕ್ಸ್
* 5 ನಾಥನ್ ಆಸ್ಲೆ (ನ್ಯೂಜಿಲೆಂಡ್) ಹಾಗೂ ಇಜಾಜ್ ಅಹ್ಮದ್ (ಪಾಕಿಸ್ತಾನ)

ಅತಿ ಹೆಚ್ಚು ಪಂದ್ಯ
* 46-ರಿಕಿ ಪಾಂಟಿಂಗ್

ನಾಯಕನಾಗಿ ಹೆಚ್ಚು ಪಂದ್ಯ
* 29 ಪಂದ್ಯ-ರಿಕಿ ಪಾಂಟಿಂಗ್

ಅತಿ ಹೆಚ್ಚು ತಂಡದ ಮೊತ್ತ
* 413/5, 50 ಓವರ್- ಭಾರತ vs ಬರ್ಮುಡಾ, 2007

ಅತಿ ಕಡಿಮೆ ಮೊತ್ತ
* 36-ಕೆನಡಾ vs ಶ್ರೀಲಂಕಾ, 2003

ಅತಿ ಹೆಚ್ಚು ಪಂದ್ಯಗಳಲ್ಲಿ ಅಂಪೈರಿಂಗ್

* 46-ಡೇವಿಡ್ ಶೆಪರ್ಡ್ (ಇಂಗ್ಲೆಂಡ್)- 1983-2003

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X