For Quick Alerts
ALLOW NOTIFICATIONS  
For Daily Alerts
 

Shikhar Dhawan: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಶಿಖರ್ ಧವನ್ ನಿವೃತ್ತಿ

ಬಹು ದಿನಗಳಿಂದ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ, ಸ್ಟಾರ್‌ ಓಪನರ್‌ ಶಿಖರ್‌ ಧವನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಶನಿವಾರ ಬೆಳಗಿನ ಜಾವ ಶಿಖರ್‌ ಧವನ್‌ ಭಾವನಾತ್ಮಕ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಇದೇ ವೇಳೆ ಅವರು ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

2010ರಲ್ಲಿ ಶಿಖರ್‌ ಧವನ್‌ ಭಾರತ ತಂಡದ ಪರ ಪದಾರ್ಪಣೆ ಮಾಡಿದರು. ಮೊದಲು ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಗಬ್ಬರ್‌ ಬಳಿಕ ಟಿ20 ಹಾಗೂ ಟೆಸ್ಟ್‌ ತಂಡ ಸೇರಿದರು. ಇವರನ್ನು ವಿಶ್ವ ಕ್ರಿಕೆಟ್‌ನ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಧವನ್ ಕೊನೆಯ ಬಾರಿಗೆ 2022 ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.

Team india Shikhar Dhawan Announces Retirement from International Cricket

ವಿಡಿಯೋದಲ್ಲಿ ಏನಿದೆ?

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಶಿಖರ್‌ ವಿಡಿಯೋದಲ್ಲಿ ಹಲವರಿಗೆ ಧನ್ಯವಾದ ತಿಳಿಸಿದ್ದಾರೆ. ಇಂದು ನಾನು ಮಹತ್ವದ ಘಟ್ಟದಲ್ಲಿ ನಿಂತಿರುವೆ. ನನ್ನ ಕ್ರಿಕೆಟ್‌ ವೃತ್ತಿ ಜೀವನವನ್ನು ಹಿಂತಿರುಗಿ ನೋಡಿದಾಗ, ಸವಿ ನೆನಪುಗಳು ಕಾಡುತ್ತವೆ. ನಾನು ಆರಂಭದಲ್ಲಿ ಭಾರತದ ಪರ ಆಡುವ ಗುರಿಯನ್ನು ಹೊಂದಿದ್ದೆ. ಇದನ್ನು ಸಾಧಿಸಿದ ಖುಷಿ ನನ್ನ ಮನಸ್ಸಿನಲ್ಲಿದೆ. ನನ್ನ ಕುಟುಂಬ, ನನ್ನ ಬಾಲ್ಯದ ತರಬೇತುದಾರರಾದ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಜಿ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತಿದ್ದೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಮನೆಯನ್ನು ಬಿಟ್ಟು ಭಾರತಕ್ಕೆ ಆಡಲು ಬಂದಾಗ, ಅಲ್ಲಿಯೂ ಒಂದು ಹೊಸ ಕುಟುಂಬ ನನಗೆ ಸಿಕ್ಕಿತು. ಇದೇ ವೇಳೆ ನಿಮ್ಮ ಪ್ರೀತಿ ಹಾಗೂ ಬೆಂಬಲವನ್ನು ಪಡೆದುಕೊಂಡಿದ್ದೇನೆ. ಭಾರತದ ಪರ ಸಾಕಷ್ಟು ಆಡಿದ್ದೇನೆ ಎಂಬ ಸಮಾಧಾನವಿದೆ. ನನಗೆ ಈ ಅವಕಾಶವನ್ನು ನೀಡಿದ ಬಿಸಿಸಿಐ ಮತ್ತು ಡಿಡಿಸಿಎಗೆ ಧನ್ಯವಾದಗಳುನ್ನು ಧವನ್ ತಿಳಿಸಿದ್ದಾರೆ.

ಶಿಖರ್‌ ಸಾಧನೆ

ಶಿಖರ್‌ ಧವನ್ ಭಾರತದ ಪರ 34 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 7 ಶತಕ, 5 ಅರ್ಧಶತಕ ಸೇರಿದಂತೆ 2315 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 167 ಪಂದ್ಯಗಳನ್ನು ಆಡಿದ್ದು 6793 ರನ್‌ ಸಿಡಿಸಿದ್ದಾರೆ. ಇದರಲ್ಲಿ 17 ಬಾರಿ ಮೂರಂಕಿ ಮುಟ್ಟಿದರೆ, 39 ಅರ್ಧಶತಕ ಸಿಡಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 68 ಬಾರಿ ಭಾರತದ ಪರ ಕಣಕ್ಕೆ ಇಳಿದಿದ್ದು, 11 ಅರ್ಧಶತಕ ಬಾರಿಸಿದ್ದಾರೆ. ಇದರಲ್ಲಿ 1759 ರನ್‌ ಸಿಡಿಸಿದ್ದಾರೆ.

Story first published: Saturday, August 24, 2024, 8:37 [IST]
Other articles published on Aug 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+