
ವಿಶ್ವಕಪ್ ಹತ್ತಿರದಲ್ಲಿದೆ ಏಷ್ಯಾಕಪ್ 2022
ನಾಲ್ಕು ವರ್ಷಗಳಿಂದ ಕಾಯುತ್ತಿದ್ದ ಏಷ್ಯಾ ಕಪ್ 2022 ಟೂರ್ನಿ ಬಹುತೇಕ ಸನಿಹಗೊಂಡಿದೆ. ಈ ಮೆಗಾ ಟೂರ್ನಮೆಂಟ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಶಿಫ್ಟ್ ಆಗಿದೆ.
ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ. ಪೂರ್ವ ನಿಗದಿತ ವೇಳಾಪಟ್ಟಿಯಂತೆ, ಈ ಪಂದ್ಯಾವಳಿಯನ್ನು ಶ್ರೀಲಂಕಾದಲ್ಲಿ ನಡೆಸಬೇಕಾಗಿತ್ತು ಆದರೆ ಅಲ್ಲಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ, ಅದನ್ನು ಮರುಭೂಮಿ ದೇಶವಾದ ಯುಎಇಗೆ ಸ್ಥಳಾಂತರಿಸಲಾಯಿತು.

ವಿಶ್ವಕಪ್‌ಗೂ ಮುನ್ನ ಮಿನಿ ವಿಶ್ವಕಪ್
ಅಕ್ಟೋಬರ್ ನವೆಂಬರ್‌ನಲ್ಲಿ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಏಷ್ಯಾಕಪ್ ನಡೆಯುತ್ತಿರುವುದರಿಂದ ಇದೊಂದು ಮಿನಿ ವಿಶ್ವಕಪ್ ಎಂಬಂತೆ ಬಿಂಬಿತವಾಗಿದೆ. ಇದಕ್ಕೆ ಕಾರಣ ಟಿ20 ಫಾರ್ಮೆಟ್‌ನಲ್ಲಿ ಟೂರ್ನಮೆಂಟ್ ನಡೆಯುತ್ತಿದೆ.
ಈ ಟೂರ್ನಿಯ ಗ್ರೂಪ್ ಹಂತದಲ್ಲಿ ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹಿಂದಿನ ಎರಡು ಟೂರ್ನಮೆಂಟ್ 2016ರಲ್ಲಿ ಟಿ20 ಫಾರ್ಮೆಟ್ ಹಾಗೂ 2018ರಲ್ಲಿ ಏಕದಿನ ಫಾರ್ಮೆಟ್‌ನಲ್ಲಿ ನಡೆದ ಏಷ್ಯಾಕಪ್ ಅನ್ನು ಭಾರತ ತಂಡ ಗೆದ್ದಿತ್ತು. ಈ ಟೂರ್ನಿಯಲ್ಲಿ ಯಶಸ್ವಿ ತಂಡವೂ ಟೀಂ ಇಂಡಿಯಾವೇ ಎಂಬುದು ಗಮನಾರ್ಹ.
CWG 2022: ಪಾಕ್ ವಿರುದ್ಧ ಭಾರತಕ್ಕೆ ಗೆಲುವು; ದೊಡ್ಡ ದಾಖಲೆ ಬರೆದ 'ನ್ಯಾಶನಲ್ ಕ್ರಶ್' ಸ್ಮೃತಿ ಮಂಧಾನ

ವಿಶ್ವಕಪ್‌ಗೂ ಮೊದಲೇ ತಂಡವನ್ನ ಸೆಟ್ ಮಾಡುವ ಪ್ರಯತ್ನ
ಏಷ್ಯಾಕಪ್‌ನಲ್ಲಿ ಆಡಿದ ತಂಡವನ್ನೇ ಮುಂದಿನ ದಿನಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಆರು ಟಿ20 ಪಂದ್ಯಗಳು ಸಹ ಅದೇ ಗುಂಪಿನ ಆಟಗಾರರನ್ನು ಒಳಗೊಂಡಿರುತ್ತವೆ. ವಿಶ್ವಕಪ್‌ಗೆ ಮೊದಲು, ಆಯ್ಕೆದಾರರು ತಂಡ ನಿರ್ವಹಣೆಗೆ ಸೂಕ್ತ ಸಂಖ್ಯೆಯ ಆಟಗಳನ್ನು ಕೆಲಸ ಮಾಡಲು ಪ್ರಯತ್ನಿಸುತ್ತಾರೆ. ಹೀಗಾಗಿ ಏಷ್ಯಾಕಪ್‌ನಲ್ಲಿ ಆಡಿದ ತಂಡವೇ ಬಹುತೇಕ ವಿಶ್ವಕಪ್‌ನಲ್ಲೂ ಆಡಲಿದೆ.
ತನ್ನ ಫಿಟ್ನೆಸ್ ಕುರಿತು ಪ್ರಮುಖ ಮಾಹಿತಿ ನೀಡಿದ ಕೆ.ಎಲ್ ರಾಹುಲ್: ಟೀಂ ಇಂಡಿಯಾ ಕಂಬ್ಯಾಕ್ ಯಾವಾಗ?

ಏಷ್ಯಾಕಪ್‌ಗೆ ಮರಳಲಿದ್ದಾರೆ ಕೆ.ಎಲ್ ರಾಹುಲ್
ಟೀಂ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ವಿಂಡೀಸ್ ಟಿ20 ಸರಣಿಯನ್ನೂ ಮಿಸ್ ಮಾಡಿಕೊಂಡ ಬಳಿಕ ಜಿಂಬಾಬ್ವೆ ಪ್ರವಾಸವನ್ನಾದ್ರೂ ಮಾಡಬಹುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದ್ರೆ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೂ ರಾಹುಲ್ ಆಯ್ಕೆಗೊಳ್ಳುವಲ್ಲಿ ವಿಫಲಗೊಂಡಿದ್ದಾರೆ. ಹೀಗಾಗಿ ಮುಂಬರುವ ಏಷ್ಯಾಕಪ್‌ನಲ್ಲಿ ಕೆ.ಎಲ್ ರಾಹುಲ್ ಟೀಂ ಇಂಡಿಯಾಗೆ ಮರಳುವ ನಿರೀಕ್ಷೆ ಹೆಚ್ಚಿದೆ.
ಈಗಾಗಲೇ ತನ್ನ ಆರೋಗ್ಯ ಮತ್ತು ಫಿಟ್ನೆಸ್ ಕುರಿತು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿರುವ ಕೆ.ಎಲ್ ರಾಹುಲ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು, ಟೀಂ ಇಂಡಿಯಾ ಆಯ್ಕೆಗೆ ಲಭ್ಯನಿರಲಿದ್ದೇನೆ ಎಂದು ಹೇಳಿದ್ದಾರೆ. ರಾಷ್ಟ್ರವನ್ನ ಪ್ರತಿನಿಧಿಸುವುದು ಬಹುದೊಡ್ಡ ಗೌರವವಾಗಿದೆ. ಹೀಗಾಗಿ ನಾನು ಮತ್ತೆ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ನನಗೆ ಕಾಯಲು ಸಾಧ್ಯವಿಲ್ಲ. ಶ್ರೀಘ್ರದಲ್ಲೇ ತಂಡಕ್ಕೆ ಬರುವುದಾಗಿ ರಾಹುಲ್ ಹೇಳಿದ್ದಾರೆ.

ಜಿಂಬಾಬ್ವೆ ವಿರುದ್ಧ ಸರಣಿಗೆ ಭಾರತದ ಸ್ಕ್ವಾಡ್
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ದ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್


Click it and Unblock the Notifications
