Arshdeep Singh: ವಿಕೆಟ್‌ಗಳ ಶತಕಕ್ಕೆ ಇನ್ನು ಮೂರೇ ಹೆಜ್ಜೆ
ಇಂಗ್ಲೆಂಡ್ ಸದ್ಯ ಭಾರತದ ಪ್ರವಾಸದಲ್ಲಿದೆ. ಈ ವೇಳೆ ಇಂಗ್ಲೆಂಡ್, ಆತಿಥೇಯ ತಂಡದ ವಿರುದ್ಧ ಮೊದಲು ಟಿ20 ಪಂದ್ಯಗಳನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಸರಣಿಯ ಎರಡನೇ ಟಿ20 ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ.
ತಮ್ಮ ಅಮೋಘ ಬೌಲಿಂಗ್ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಅರ್ಷದೀಪ್ ಚೆನ್ನೈನಲ್ಲಿ ಇತಿಹಾಸ ಬರೆಯುವ ಕನಸಿನಲ್ಲಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್ ಪಡೆದು, ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರ ಗರಿಷ್ಠ ವಿಕೆಟ್ ಸಾಧನೆಯನ್ನು ಅಳಿಸಿರುವ ಅರ್ಷದೀಪ್ ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ನಿಂತಿದ್ದಾರೆ.

ಟೀಮ್ ಇಂಡಿಯಾ ಪರ ಯಾರು ಮಾಡದ ಸಾಧನೆ
ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪರ ಇನ್ನು ಯಾರು ಮಾಡದ ಸಾಧನೆಯನ್ನು ಮಾಡುವ ಹುಮ್ಮಸಿನಲ್ಲಿ ಅರ್ಷದೀಪ್ ಸಿಂಗ್ ಇದ್ದಾರೆ. ಇವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 97 ವಿಕೆಟ್‌ಗಳನ್ನು ಪಡೆದಿದ್ದಾರೆ. ಚೆನ್ನೈನಲ್ಲಿ ನಡೆಯುವ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದೇ ಆದಲ್ಲಿ ವಿಕೆಟ್‌ಗಳ ಶತಕವನ್ನು ಬಾರಿಸಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಯಾವೊಬ್ಬ ಬೌಲರ್ ಮಾಡದ ಸಾಧನೆಯನ್ನು ಮಾಡಿ ಬೀಗಲಿದ್ದಾರೆ.
ಈಗಾಗಲೇ ತಮ್ಮ ಕರಾರುವಾಕ್ ದಾಳಿಯಿಂದ ಮನೆ ಮಾತಾಗಿರುವ ಅರ್ಷದೀಪ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡಿರುವ ಪ್ರತಿಭೆ. ಇವರು ಭಾರತ 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರು ಹೌದು. ಅಲ್ಲದೆ ಈ ವಿಶ್ವಕಪ್‌ನಲ್ಲಿ ತಮ್ಮ ಮೊನಚಾದ ದಾಳಿಯಿಂದ ಎಲ್ಲರ ಗಮನ ಸೆಳೆದಿದ್ದ ಬೌಲರ್. ಈಗ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವನ್ನು ಬರೆಯುವ ಕನಸಿನಲ್ಲಿದ್ದಾರೆ. ಅಲ್ಲದೆ ಅರ್ಷದೀಪ್ ಈ ಸರಣಿಯಲ್ಲಿ ಈ ಸಾಧನೆ ಮಾಡುವುದು ಪಕ್ಕಾ. ಈ ಮೂಲಕ ವೇಗವಾಗಿ 100 ವಿಕೆಟ್ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಳ್ಳಲಿದ್ದಾರೆ.

ಅರ್ಷದೀಪ್ ಸಾಧನೆ
ಅರ್ಷದೀಪ್ 2022ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಈ ವರೆಗೆ ಅವರು ಚುಟುಕು ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ಇವರು ಈಗಾಗಲೇ 61 ಟಿ20 ಪಂದ್ಯಗಳಲ್ಲಿ 97 ವಿಕೆಟ್ ಪಡೆದಿರುವ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೆ ಕೋಲ್ಕತ್ತಾದಲ್ಲಿ ಎರಡು ವಿಕೆಟ್ ಪಡೆಯುತ್ತಿದ್ದಂತೆ, ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಬೌಲರ್ಸ್
ರಾಶೀದ್ ಖಾನ್ (ಅಫ್ಘಾನಿಸ್ತಾನ), 53 ಪಂದ್ಯ
ಸಂದೀಪ್ ಲಮಿಚಾನ್ (ನೇಪಾಳ), 54 ಪಂದ್ಯ
ವಹಿಂದು ಹಸರಂಗ (ಶ್ರೀಲಂಕಾ), 63 ಪಂದ್ಯ
ಹ್ಯಾರಿಸ್ ರೌಫ್ (ಪಾಕಿಸ್ತಾನ), 71 ಪಂದ್ಯ
ಎಹ್ಸಾನ್ ಖಾನ್ (ಹಾಂಗ್ ಕಾಂಗ್), 71 ಪಂದ್ಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications