Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜುಲೈನಲ್ಲಿ ಜಿಂಬಾಬ್ವೆ ಜೊತೆ ಟೀಂ ಇಂಡಿಯಾ ಕದನ

ಬೆಂಗಳೂರು, ಜೂ.10: ಬಾಂಗ್ಲಾ ಪ್ರವಾಸದ ನಂತರ ಟೀಂ ಇಂಡಿಯಾದ ಆಟಗಾರರು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದಾರೆ. ಜುಲೈ ತಿಂಗಳಿನಲ್ಲಿ ಏಕದಿನ ಕ್ರಿಕೆಟ್ ಹಾಗೂ ಟ್ವೆಂಟಿ20 ಪಂದ್ಯಗಳನ್ನಾಡಲಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಬುಧವಾರ ಪ್ರಕಟಿಸಿದೆ.

ಬಾಂಗ್ಲಾದೇಶದಲ್ಲಿ ಜೂನ್ ನಲ್ಲಿ ಒಂದು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ನಂತರ ಜಿಂಬಾಬ್ವೆ ಗೆ ಜುಲೈ ತಿಂಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಜಿಂಬಾಬ್ವೆಯಲ್ಲಿ ಮೂರು ಏಕದಿನ ಪಂದ್ಯ ಹಾಗೂ ಎರಡು ಟಿ20 ಆಡಲಿದೆ.

India to play 3 ODIs, 2 T20s in Zimbabwe next month


ಈ ನಡುವೆ ಶ್ರೀಲಂಕಾ ಪ್ರವಾಸಕ್ಕೂ ಸಿದ್ದವಾಗಬೇಕಿದೆ. ಆಗಸ್ಟ್ ನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನಾಡಲಿದೆ. ನಂತರ ದಕ್ಷಿಣ ಆಫ್ರಿಕಾ ತಂಡವನ್ನು ಸೆಪ್ಟೆಂಬರ್ ನಲ್ಲಿ ಸ್ವಾಗತಿಸಬೇಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯ, ಐದು ಏಕದಿನ ಪಂದ್ಯ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ. [ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ ]

ಬಾಂಗ್ಲಾದಲ್ಲಿ 1 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿರುವ ಟೀಂ ಇಂಡಿಯಾ ಜೂ.24ಕ್ಕೆ ಪ್ರವಾಸ ಅಂತ್ಯಗೊಳಿಸಲಿದೆ. ಜುಲೈ 7ಕ್ಕೆ ಅಫ್ರಿಕನ್ ದೇಶ ಜಿಂಬಾಬ್ವೆಗೆ ತೆರಳಲಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ವ್ಯವಸ್ಥಾಪಕ ನಿರ್ದೇಶಕ ಮಾಜಿ ನಾಯಕ ಅಲಿಸ್ಟರ್ ಕ್ಯಾಂಪ್ ಬೆಲ್ ಹೇಳಿದ್ದಾರೆ. [ಟೀಂ ಇಂಡಿಯಾದಿಂದ ಬಾಂಗ್ಲಾ ಪ್ರವಾಸ]

ಜುಲೈ 7 ರಿಂದ ಜುಲೈ 20 ರ ಅವಧಿಯಲ್ಲಿ 3 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 2 ಟಿ20 ಪಂದ್ಯಗಳು ಆಯೋಜನೆಗೊಂಡಿವೆ. ಪಂದ್ಯದ ವೇಳಾಪಟ್ಟಿ, ಇನ್ನಿತರ ವಿವರಗಳು ಈ ವಾರವೇ ಪ್ರಕಟಿಸಲಾಗುವುದು, ಎಲ್ಲಾ ಪಂದ್ಯಗಳು ಹರಾರೆಯಲ್ಲೇ ನಡೆಯಲಿದೆ ಎಂದು ಕ್ಯಾಂಪ್ ಬೆಲ್ ಹೇಳಿದ್ದಾರೆ.

2013ರಲ್ಲಿ ಜಿಂಬಾಬ್ವೆ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅತಿಥೇಯರ ವಿರುದ್ಧ 5-0 ಅಂತರದಲ್ಲಿ ಏಕದಿನ ಸರಣಿ ಗೆದ್ದುಕೊಂಡಿತ್ತು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+