ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ

By Mahesh

ಮುಂಬೈ, ಮೇ.20: ಮಳೆಗಾಲದಲ್ಲಿ ಬಾಂಗ್ಲಾದೇಶದ ಸರಣಿ ಆರಂಭಿಸಲಿರುವ ಟೀಂ ಇಂಡಿಯಾಕ್ಕೆ ಪ್ರಯಾಸಕರ ಸರಣಿಗಳ ಸುರಿಮಳೆ ಕಾದಿದೆ. ಐಪಿಎಲ್ ನಲ್ಲಿ ಜಾಲಿಯಾಗಿ ಆಡುತ್ತಿದ್ದ ಅನೇಕ ಆಟಗಾರರು ಭಾರತ ತಂಡ ಸೇರಿದ ಮೇಲೆ ಬಿಗುವಿನ ವೇಳಾಪಟ್ಟಿ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ.

ಬಾಂಗ್ಲಾದೇಶದ ಪ್ರವಾಸಕ್ಕೂ ಮುನ್ನ ವಿಶ್ರಾಂತಿ ಬಯಸಿದ್ದ ನಾಯಕ ವಿರಾಟ್ ಕೊಹ್ಲಿ ಕೂಡಾ ವಿಶ್ರಾಂತಿ ಬದಿಗೊತ್ತಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಬಾಂಗ್ಲಾದೇಶದ ಪ್ರವಾಸ ಚುಟುಕಾಗಿ ಮುಗಿದು ಬಿಡುತ್ತದೆ. ಅದರೆ, ಪಾಕಿಸ್ತಾನದ ವಿರುದ್ಧ ಸರಣಿ ಆಡಿದರೂ ಅಚ್ಚರಿ ಪಡಬೇಕಾಗಿಲ್ಲ.[ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ]

ಪಾಕಿಸ್ತಾನ ಹಾಗೂ ಭಾರತ ನಡುವಿನ ದ್ವಿಪಕ್ಷೀಯ ಕದನ ಆರಂಭದ ಬಗ್ಗೆ ಮಾತುಕತೆ ಇನ್ನೂ ನಡೆಯುತ್ತಿದೆ. ಪಂದ್ಯಗಳ ಆತಿಥ್ಯ ವಹಿಸಿಕೊಳ್ಳಲು ದುಬೈ ಕೂಡಾ ಸಿದ್ಧವಾಗಿದೆ. ಟೆಸ್ಟ್, ಏಕದಿನ ಕ್ರಿಕೆಟ್ ಹಾಗೂ ಟಿ20 ಪಂದ್ಯಗಳನ್ನು ಆಡಲು ಯೋಜಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

Team India has heavy schedule after Bangladesh tour

ಭಾರತ ಹಾಗೂ ಪಾಕಿಸ್ತಾನ ನಡುವೆ ಮ್ಯಾಚ್ ಯಾವಾಗ ನಡೆಯುತ್ತೋ ಗೊತ್ತಿಲ್ಲ ಅದರೆ, ಟೀಂ ಇಂಡಿಯಾ ವೇಳಾಪಟ್ಟಿಯಂತೂ ಫುಲ್ ಟೈಟ್ ಆಗಿದೆ. ಬಾಂಗ್ಲಾದೇಶದಲ್ಲಿ ಜೂನ್ ನಲ್ಲಿ ಒಂದು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. [ಮಳೆಗಾಲದಲ್ಲಿ ಟೀಂ ಇಂಡಿಯಾದಿಂದ ಬಾಂಗ್ಲಾ ಪ್ರವಾಸ]

ನಂತರ ಜಿಂಬಾಬ್ವೆ ಗೆ ಜುಲೈ ತಿಂಗಳಲ್ಲಿ ಪ್ರವಾಸ ಕೈಗೊಳ್ಳಲಿದೆ. ಜಿಂಬಾಬ್ವೆಯಲ್ಲಿ ಮೂರು ಏಕದಿನ ಪಂದ್ಯ ಹಾಗೂ ಎರಡು ಟಿ20 ಆಡಲಿದೆ.

ಈ ನಡುವೆ ಶ್ರೀಲಂಕಾ ಪ್ರವಾಸಕ್ಕೂ ಸಿದ್ದವಾಗಬೇಕಿದೆ. ಆಗಸ್ಟ್ ನಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನಾಡಲಿದೆ. ನಂತರ ದಕ್ಷಿಣ ಆಫ್ರಿಕಾ ತಂಡವನ್ನು ಸೆಪ್ಟೆಂಬರ್ ನಲ್ಲಿ ಸ್ವಾಗತಿಸಬೇಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯ, ಐದು ಏಕದಿನ ಪಂದ್ಯ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ.

ಅಷ್ಟರಲ್ಲಿ ನವೆಂಬರ್ ತಿಂಗಳು ಮುಗಿದಿರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನ ವಿರುದ್ಧ ಸರಣಿ ಆಡುವ ಸಾಧ್ಯತೆಯಿದೆ. ಇದಾದ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಐದು ಏಕದಿನ ಪಂದ್ಯ ಹಾಗೂ ಮೂರು ಟಿ20 ಪಂದ್ಯಗಳನ್ನು 2016ರ ಆರಂಭದಲ್ಲಿ ಟೀಮ್ ಇಂಡಿಯಾ ಆಡಲಿದೆ.

ಇದಾದ ಬಳಿಕ 2016ರ ಫೆಬ್ರವರಿ ತಿಂಗಳಿನಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಮೂರು ಟಿ20 ಪಂದ್ಯಗಳನ್ನಾಡಲಿದೆ. ನಂತರ ಏಷ್ಯಾಕಪ್ ಆಡಲು ಸಿದ್ಧವಾಗಬೇಕಿದೆ. ಕೊನೆಗೆ, ಟೀಂ ಇಂಡಿಯಾ ಮಾ.11 ರಿಂದ ಏ.3 ರ ತನಕ ವಿಶ್ವ ಟಿ20 ಚಾಂಪಿಯನ್ ಶಿಪ್ ನಲ್ಲಿ ಕಾಣಿಸಿಕೊಳ್ಳಲಿದೆ. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X