Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs PAK Asia Cup T20: ಭಾರತ ಎದುರು ಮಂಡಿಯೂರಿದ ಪಾಕ್: ಸೂರ್ಯ ಪಡೆಗೆ ಭರ್ಜರಿ ಜಯ

ದುಬೈ: ಭರವಸೆಯ ಆಟಗಾರರಾದ ತಿಲಕ್‌ ವರ್ಮಾ ಹಾಗೂ ಸ್ಪಿನ್ ಬೌಲರ್‌ ಕುಲ್‌ದೀಪ್ ಯಾದವ್ ಅವರ ಸೊಗಸಾದ ಆಟದ ನೆರವಿನಿಂದ ಟೀಮ್ ಇಂಡಿಯಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ 7 ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಅಬ್ಬರಿಸಿದೆ. ಅಲ್ಲದೆ ಸೂಪರ್‌ ಫೋರ್ ಹಂತಕ್ಕೆ ಒಂದು ಕಾಲು ಇಟ್ಟಿದೆ. ನಿರೀಕ್ಷೆಯಂತೆ ಭಾರತದ ಸಂಘಟಿತ ಆಟದ ಎದುರು ಪಾಕ್‌ ಮಂಡಿಯೂರಿದೆ.

128 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ಗೆ 22 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ 2 ಬೌಂಡರಿ ಸಹಾಯದಿಂದ 10 ರನ್‌ ಬಾರಿಸಿದ್ದ ಶುಭಮನ್‌ ಗಿಲ್‌ ಸೈಮ್‌ ಅಯೂಬ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಇನ್ನು ಆರಂಭಿಕ ಆಟಗಾರ ತಮ್ಮ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ಇವರು 238ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಇವರು 13 ಎಸೆತಗಳಲ್ಲಿ 31 ರನ್ ಸಿಡಿಸಿದರು. ಇವರು 4 ಬೌಂಡರಿ, 2 ಸಿಕ್ಸರ್ ಬಾರಿಸಿ ಮಿಂಚಿದರು. ಟೀಮ್ ಇಂಡಿಯಾ ಪವರ್‌ ಪ್ಲೇನಲ್ಲಿ 2 ವಿಕೆಟ್‌ಗೆ 61 ರನ್‌ ಸಿಡಿಸಿತು.

Team India trounces Pakistan in Asia Cup clash inches closer to Super 4s

ಮೂರನೇ ವಿಕೆಟ್‌ಗೆ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಜೋಡಿ ಸೊಗಸಾದ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿಹಾಕಲು ಪಾಕ್‌ ತಂಡ ಮಾಡಿಕೊಂಡಿದ್ದ ಪ್ಲ್ಯಾನ್‌ ಎಲ್ಲ ಉಲ್ಟಾ ಆಯಿತು. ಈ ಜೋಡಿ 52 ಎಸೆತಗಳಲ್ಲಿ 56 ರನ್‌ ಸೇರಿಸಿತು, ತಿಲಕ್ ವರ್ಮಾ 31 ರನ್‌ ಬಾರಿಸಿ ಔಟ್ ಆದರು.

ಸಂಘಟಿತ ಆಟ

ಟೀಮ್ ಇಂಡಿಯಾ ಟೂರ್ನಿಯಲ್ಲಿ ತನ್ನ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದೆ. ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಭಾರತ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣಬಡಿಸಿದೆ. ಸೂರ್ಯಕುಮಾರ್‌ ಯಾದವ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರನ್ನು ಕಟ್ಟಿ ಹಾಕುವಲ್ಲಿ ಪಾಕ್‌ ವಿಫಲವಾಯಿತು. ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ ಅಜೇಯ 47 ರನ್‌ ಸಿಡಿಸಿ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದರು. ಆಲ್‌ರೌಂಡರ್‌ ಶಿವಂ ದುಬೆ ಅಜೇಯ 10 ರನ್‌ ಬಾರಿಸಿದರು.

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಆರಂಭ ಕಳಪೆಯಾಗಿತ್ತು. ಆರಂಭಿಕ ಸೈಮ್‌ ಅಯೂಬ್‌ ಹಾಗೂ ಮೊಹಮ್ಮದ್‌ ಹ್ಯಾರೀಸ್‌ ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್‌ ಪಡೆದರು. ಪಾಕಿಸ್ತಾನ ಪವರ್‌ ಪ್ಲೇನಲ್ಲಿ 2 ವಿಕೆಟ್‌ ಕಳೆದುಕೊಂಡು 42 ರನ್‌ ಸೇರಿಸಿತು.

Team India trounces Pakistan in Asia Cup clash inches closer to Super 4s

ಮೂರನೇ ವಿಕೆಟ್‌ಗೆ ಫಖರ್‌ ಜಮಾನ್‌ ಹಾಗೂ ಸಾಹಿಬ್‌ಜಾದಾ ಫರ್ಹಾನ್ ಜೋಡಿ 38 ಎಸೆತಗಳಲ್ಲಿ 39 ರನ್‌ ಸೇರಿಸಿತು. ಫಖರ್‌ ಜಮಾನ್‌ 17 ರನ್‌ ಬಾರಿಸಿದ್ದಾಗ ಪೆವಿಲಿಯನ್‌ ಸೇರಿದರು. ಪಾಕಿಸ್ತಾನ ತಂಡದ ನಾಯಕ ಸಲ್ಮಾನ್‌ ಅಘಾ ನಿರಾಸೆ ಅನುಭವಿಸಿದರು. ಆರಂಭಿಕ ಸಾಹಿಬ್‌ಜಾದಾ ಫರ್ಹಾನ್ ಕೊಂಚ ತಂಡಕ್ಕೆ ಅಧಾರವಾದರು. ಇವರು 44 ಎಸೆತಗಳಲ್ಲಿ 40 ರನ್‌ ಬಾರಿಸಿದರು. ಇವರ ಇನಿಂಗ್ಸ್‌ನಲ್ಲಿ 1 ಬೌಂಡರಿ, 3 ಸಿಕ್ಸರ್ ಸೇರಿವೆ. ಶಾಹೀನ್‌ ಶಾ ಆಫ್ರಿದಿ 4 ಸಿಕ್ಸರ್‌ ಸಹಾಯದಿಂದ 33 ರನ್‌ ಬಾರಿಸಿ ಮಿಂಚಿದರು.

ಭಾರತದ ಪರ ಮೊದಲ ಪಂದ್ಯದ ಹೀರೋ ಕುಲ್‌ದೀಪ್‌ ಯಾದವ್ 18 ರನ್ ನೀಡಿ 3 ವಿಕೆಟ್‌ ಕಬಳಿಸಿದರು. ಉಳಿದಂತೆ ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಕಬಳಿಸಿದರು.

Story first published: Sunday, September 14, 2025, 23:17 [IST]
Other articles published on Sep 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+