
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್ ಮುಕ್ತಾಯದ ಬಳಿಕ ಟೀಂ ಇಂಡಿಯಾ ಒಂದರ ಹಿಂದೆ ಮತ್ತೊಂದರಂತೆ ಸರಣಿಗಳನ್ನ ಆಡಲಿದೆ. ಐಪಿಎಲ್ ಮುಕ್ತಾಯದ ಬಳಿಕ ಜೂನ್ 9ರಿಂದ 19ರವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯುತ್ತಿರುವಾಗಲೇ ಟೀಂ ಇಂಡಿಯಾ ಟೆಸ್ಟ್ ತಂಡದ ಆಟಗಾರರು ಇಂಗ್ಲೆಂಡ್‌ಗೆ ಹಾರಲಿದ್ದಾರೆ. ಜೂನ್ 9ಕ್ಕೆ ದಕ್ಷಿಣ ಆಫ್ರಿಕಾ ಸರಣಿ ಆರಂಭವಾದ್ರೆ, ಜೂನ್ 16 ಟೀಂ ಇಂಡಿಯಾದ ಟೆಸ್ಟ್ ತಂಡವು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಇದರರ್ಥ ದಕ್ಷಿಣ ಆಫ್ರಿಕಾ ವಿರುದ್ಧ ಆಯ್ಕೆಗೊಂಡ ತಂಡವನ್ನೇ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳಿಗೆ ಕಣಕ್ಕಿಳಿಸಲಾಗುವುದು.
ಇದರ ಜೊತೆಗೆ ಕ್ರಿಕ್‌ಬಝ್ ಪ್ರಕಾರ, ಜೂನ್ 24 ರಿಂದ ಲೀಸೆಸ್ಟರ್‌ಶೈರ್ ವಿರುದ್ಧ ಅಭ್ಯಾಸ ಪಂದ್ಯವೊಂದರಲ್ಲಿ ಭಾರತದ ಟೆಸ್ಟ್ ತಂಡವು ಟೆಸ್ಟ್ ಪಂದ್ಯವನ್ನಾಡಲಿದೆ. ಇಂಗ್ಲೆಂಡ್ ವಿರುದ್ಧ ಬಾಕಿಯಾಗಿದ್ದ ಅಂತಿಮ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯವನ್ನಾಡಲಿದೆ. ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯ ಮೊದಲು ಭಾರತದ ವೈಟ್-ಬಾಲ್ ತಂಡವು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ ಎಂದು ವರದಿಯಾಗಿದೆ.
ಅದೇ ಸಮಯದಲ್ಲಿ ಜೂನ್ 26 ಮತ್ತು 28 ರಂದು ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಮತ್ತೊಂದು ತಂಡವು ಟಿ20 ಪಂದ್ಯವನ್ನಾಡಲಿದೆ.
ಐಪಿಎಲ್ 2022ರ ಬಳಿಕ ಟೀಂ ಇಂಡಿಯಾದ ವಿದೇಶಿ ಸರಣಿಗಳು
ಐರ್ಲೆಂಡ್ ಪ್ರವಾಸ (ಜೂನ್ 26 - 28) - 2 ಟಿ20
ಇಂಗ್ಲೆಂಡ್ ಪ್ರವಾಸ (ಜುಲೈ 1 - 17) - 3 ಟಿ20, 3 ಒಡಿಐ, 1 ಟೆಸ್ಟ್
ವೆಸ್ಟ್ ಇಂಡೀಸ್ ಪ್ರವಾಸ (ಜುಲೈ 22 - ಆಗಸ್ಟ್ 7) - 5 ಟಿ20, 3 ಒಡಿಐ
ಏಷ್ಯಾ ಕಪ್ ಸರಣಿ ( ಆಗಸ್ಟ್ 7 - ಸೆ.11)
ದಕ್ಷಿಣ ಆಫ್ರಿಕಾ ಪ್ರವಾಸ (ದಿನಾಂಕ ಅಂತಿಮಗೊಂಡಿಲ್ಲ) - 4 ಟಿ20