ಭಾರತೀಯ ವನಿತೆಯರಿಗೆ ಟ್ವಿಟ್ಟರ್ ನಲ್ಲಿ ಅಭಿನಂದನೆಯ ಸುರಿಮಳೆ
ಡರ್ಬಿ(ಇಂಗ್ಲೆಂಡ್), ಜುಲೈ 3: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವನಿತೆಯರ ಐಸಿಸಿ ವಿಶ್ವಕಪ್ ನಲ್ಲಿ ನಿನ್ನೆ (ಜು.2) ಪಾಕಿಸ್ತಾನದ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ಭಾರತೀಯ ವನಿತೆಯರು 95 ರನ್ ಗಳ ಭರ್ಜರಿ ಜಯಗಳಿಸುತ್ತಿದ್ದಂತೆಯೇ ಭಾರತೀಯರೆಲ್ಲ ಕುಣಿದು ಕುಪ್ಪಳಿಸಿದ್ದರು.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಪುರುಷರ ತಂಡ ಕಂಡ ಹೀನಾಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ರೀತಿಯಲ್ಲಿ ಭಾರತೀಯ ವನಿತೆಯರು ರೋಚಕ ಆಟವಾಡಿದರು.
ಭಾರತೀಯ ವನಿತೆಯರ ಈ ಸಾಧನೆಗೆ ಇದೀಗ ಟ್ವಿಟ್ಟರ್ ಸೇರಿದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂಗ್ಲೆಂಡಿನ ಡರ್ಬಿಯ ಕಂಟ್ರಿ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತೀಯ ವನಿತೆಯರು ಗಳಿಸಿದ್ದು ಕೇವಲ 169 (50 ಓವರ್) ರನ್ ಆದರೂ, ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನಿ ವನಿತೆಯರು ಕೇವಲ 74 (38.1 ಓವರ್) ರನ್ ಗಳಿಸಿ ಆಲೌಟ್ ಆದರು!
ಸದ್ಯಕ್ಕೆ ಇದುವರೆಗೂ ಆಡಿದ ಎಲ್ಲಾ ಮೂರೂ ಪಂದ್ಯಗಳನ್ನೂ ಗೆದ್ದಿರುವ ಭಾರತ ಟೂರ್ನಿಯ ಅಂಕ ಪಟ್ಟಿಯಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಒಟ್ಟಿನಲ್ಲಿ ಭಾರತೀಯ ವನಿತೆಯರ ಸಾಧನೆಗೆ ಎಲ್ಲೆಡೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. ಮುಂದಿನ
ಅಮಿತ್ ಶಾ ಅಭಿನಂದನೆ
ಅದ್ಭುತ ಆಟದೊಂದಿಗೆ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಮುಂಬರುವ ಎಲ್ಲಾ ಪಂದ್ಯಗಳಿಗೂ ಶುಭಹಾರೈಕೆಗಳು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಒಂಬತ್ತನೇ ಬಾರಿನೂ ತೋಳ ಹಳ್ಳಕ್ಕೆ ಬಿತ್ತು!
ಭಾರತ ವನಿತಾ ತಂಡದ ನಾಯಕಿ ಮಿಥಾಲಿ ರಾಜ್ ಒಂಬತ್ತನೇ ಬಾರಿ ಪಾಕಿಸ್ತಾನದ ಜೊತೆಗಿನ ಪಂದ್ಯದ ಮುಂದಾಳತ್ವ ವಹಿಸಿದ್ದರು. ಎಲ್ಲಾ ಒಂಬತ್ತು ಬಾರಿಯೂ ಭಾರತವನ್ನು ಗೆಲ್ಲಿಸಿದ್ದು ಇಥಾಲಿ ರಅಜ್ ಹೆಗ್ಗಳಿಕೆ ಎಂದು ಶ್ವೇತಾ ಶಾಲಿನಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ಅವೀಸ್ಮರಣೀಯ ಜಯ
ಪಾಕಿಸ್ತಾನದೊಂದಿಗೆ ಅವೀಸ್ಮರಣೀಯ ಜಯ ದಾಖಲಿಸಿದ ಭಾರತೀಯ ಮಹಿಳಾ ತಂಡಕ್ಕೆ ಶುಭಾಶಯಗಳು. ಮುಂದಿನ ಪಂದ್ಯಗಳಲ್ಲೂ ನಿಮಗೆ ಯಶಸ್ಸು ಸಿಗಲಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನ್ವಾಜ್ ಹುಸೇನ್ ಟ್ವೀಟ್ ಮಾಡಿದ್ದಾರೆ.
ವಿಶೇಷ ಅಭಿನಂದನೆ ಪಡೆದ ಏಕ್ತಾ ಬಿಶ್ತ್
ಪಾಕಿಸ್ತಾನವನ್ನು 95 ರನ್ ಗಳಿಂದ ಸೋಲಿಸಿದ ಭಾರತೀಯ ವನಿತಾ ಕ್ರಿಕೆಟ್ ತಂಡಕ್ಕೆ ಮತ್ತು ವಿಶೇಷವಾಗಿ ಬೌಲರ್ ಏಕ್ತಾ ಬಿಶ್ತ್ ಅವರಿಗೆ ಅಭಿನಂದನೆಗಳು. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಇಂಡಿಯಾ ಟಿವಿ, ಸಂಪಾದಕ ರಜತ್ ಶರ್ಮಾ ಟ್ವೀಟ್ ಮಾಡಿದ್ದಾರೆ. 10 ಓವರ್ ಗಳಲ್ಲಿ ಕೇವಲ 18 ರನ್ ನೀಡಿ, 5 ವಿಕೆಟ್ ಪಡೆದ ಏಕ್ತಾ ಬಿಶ್ತ್ ಅವರಿಗೆ ರಜತ್ ಶರ್ಮಾ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications