For Quick Alerts
ALLOW NOTIFICATIONS  
For Daily Alerts
 

ದಾಖಲೆ: ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

Team india

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಲಂಕಾ ತಂಡವನ್ನ ಮೂರೇ ದಿನಗಳಲ್ಲಿ ಮಣಿಸಿ 238ರನ್‌ಗಳ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನ ಭಾರತ 2-0ಯಿಂದ ವಶಪಡಿಕೊಂಡಿದೆ.

ಕಳೆದ 10 ವರ್ಷಗಳಿಂದ ತವರು ನೆಲದಲ್ಲಿ ಭಾರತವನ್ನು ಸೋಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಆ ಮೂಲಕ ತವರಿನಲ್ಲಿ ಸತತ 15 ಸರಣಿ ಗೆದ್ದ ಏಕೈಕ ತಂಡವಾಗಿ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಭಾರತ ತನ್ನ ಹೆಸರಿನಲ್ಲಿದ್ದ ದಾಖಲೆಯನ್ನು ಸುಧಾರಿಸಿಕೊಂಡಿತು.

ಟೀಂ ಇಂಡಿಯಾ ಕೊನೆಯದಾಗಿ 2012ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತವರು ನೆಲದಲ್ಲಿ ಸೋತಿತ್ತು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಸೋಲು ಅನುಭವಿಸಿತು. ಆ ಬಳಿಕ ಭಾರತ ತಂಡ ಒಂದೇ ಒಂದು ಸರಣಿಯನ್ನು ಭಾರತದಲ್ಲಿ ಕಳೆದುಕೊಂಡಿಲ್ಲ. ತವರಿನಲ್ಲಿ ಅಜೇಯ ತಂಡವಾಗಿ ಮುಂದುವರಿಯಲಿದೆ.

ಟೀಮ್ ಇಂಡಿಯಾ ನಂತರ ಆಸ್ಟ್ರೇಲಿಯಾ ತಂಡವು ತವರಿನಲ್ಲಿ ಸತತ ಅತಿ ಹೆಚ್ಚು ಟೆಸ್ಟ್ ಸರಣಿ ಗೆದ್ದಿದೆ. ಕಾಂಗರೂಗಳು ತವರಿನಲ್ಲಿ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದಿದ್ದಾರೆ. ಆಸೀಸ್ ಎರಡು ಬಾರಿ ಪ್ರಶಸ್ತಿಯನ್ನು ಗೆದ್ದಿದೆ (ನವೆಂಬರ್ 1994-ನವೆಂಬರ್ 2000 ರ ನಡುವೆ ಮತ್ತು ಜುಲೈ 2004 ಮತ್ತು ನವೆಂಬರ್ 2008 ರ ನಡುವೆ).

ಶ್ರೀಲಂಕಾವನ್ನು ಸೋಲಿಸೋಕೆ ರೋಹಿತ್ ಗೆ ಹೆಲ್ಪ್‌ ಮಾಡಿದ್ದು ಯಾರು? | Oneindia Kannada

447 ರನ್ ಗಳ ಬೃಹತ್ ಗುರಿಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ 208 ರನ್ ಗಳಿಗೆ ಆಲೌಟ್ ಆಯಿತು. ಲಂಕಾ ನಾಯಕ ದಿಮುತ್ ಕರುಣಾ ರತ್ನೆ (174 ಎಸೆತಗಳಲ್ಲಿ 15 ಬೌಂಡರಿ ಸಹಿತ 107) ಶತಕ ಬಾರಿಸಿದರೂ ಫಲಿತಾಂಶ ಗೆಲುವಿನ ಕಡೆ ದಾಟಲಿಲಲ್. ಕುಶಾಲ್ ಮೆಂಡಿಸ್ (60 ಎಸೆತಗಳಲ್ಲಿ 8 ಬೌಂಡರಿ ಸಹಿತ 54) ಅರ್ಧಶತಕ ಗಳಿಸಿದರೆ ಇತರ ಆಟಗಾರರು ವಿಫಲರಾದರು. ಭಾರತದ ಬೌಲರ್‌ಗಳಲ್ಲಿ ರವಿಚಂದ್ರನ್ ಅಶ್ವಿನ್ ನಾಲ್ಕು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಎರಡು ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.

Story first published: Tuesday, March 15, 2022, 13:12 [IST]
Other articles published on Mar 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+