ಪಾಕ್ ವಿರುದ್ಧ ಮುಂದುವರೆದ ಭಾರತ ಪ್ರಾಬಲ್ಯ: ಟಿ20 ವಿಶ್ವಕಪ್‌ನಲ್ಲಿ ದಾಖಲೆ
ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರಿಸಿದೆ. ಭಾರತ, ಪಾಕಿಸ್ತಾನ ವಿರುದ್ಧ ಪ್ರಸಕ್ತ ಸಾಲೀನ ಲೀಗ್ ಹಂತದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಏಕ ಪಕ್ಷೀಯ ಜಯ ದಾಖಲಿಸಿದೆ. ಈ ಮೂಲಕ ಭಾರತ ಟಿ20 ವಿಶ್ವಕಪ್‌ನ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ.
ಕೊಲಂಬೊದಲ್ಲಿನ ಸ್ಲೋ ಪಿಚ್‌ನಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 175 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಅಲ್ಲದೆ 18 ಓವರ್‌ಗಳಲ್ಲಿ ಕೇವಲ 114 ರನ್ ಸೇರಿಸಿ ಸೋಲು ಕಂಡಿತು. ಈ ವೇಳೆ ಟೀಮ್ ಇಂಡಿಯಾ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಗೆಲುವು
ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಏಕೆ ಪರಿಗಣಿಸಲಾಗುತ್ತಿದೆ ಎಂಬುದನ್ನು ಸಾಬೀತು ಪಡಿಸಿದರು. ಈ ಜಯದ ಮೂಲಕ ಟೀಮ್ ಇಂಡಿಯಾ ಐಸಿಸಿ ಬಿಗ್ ಇವೆಂಟ್‌ಗಳಲ್ಲಿ ತನ್ನ ಜಯದ ಓಟವನ್ನು ಮುಂದುವರೆಸಿದೆ. ಉಭಯ ತಂಡಗಳು ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 9 ಬಾರಿ ಮುಖಾಮುಖಿ ಆದವು. ಈ ವೇಳೆ ಭಾರತ 8ರಲ್ಲಿ ಜಯ ಸಾಧಿಸಿ ಅಬ್ಬರಿಸಿದೆ. ಈ ಮೂಲಕ ಭಾರತ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಜಯ ಸಾಧಿಸಿದ ದಾಖಲೆಯನ್ನು ಸಹ ಬರೆದಿದೆ.
ಐಸಿಸಿ ಟೂರ್ನಿಯಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಜಯ ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.
8 ಜಯ, ಭಾರತ vs ಪಾಕಿಸ್ತಾನ
6 ಜಯ, ಆಸ್ಟ್ರೇಲಿಯಾ vs ಬಾಂಗ್ಲಾದೇಶ
6 ಜಯ, ಪಾಕಿಸ್ತಾನ vs ಬಾಂಗ್ಲಾದೇಶ
6 ಜಯ, ಶ್ರೀಲಂಕಾ vs ವೆಸ್ಟ್ ಇಂಡೀಸ್
6 ಜಯ, ವೆಸ್ಟ್ ಇಂಡೀಸ್ vs ಇಂಗ್ಲೆಂಡ್

ಈ ಗೆಲುವು ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಅಧಿಪತ್ಯವನ್ನು ಎತ್ತಿ ತೋರಿಸುತ್ತದೆ. ಭಾರತ ಇತ್ತೀಚಿಗೆ ಐಸಿಸಿ ಟೂರ್ನಿಯಲ್ಲಿ 27 ಬಾರಿ ಕಣಕ್ಕೆ ಇಳಿದಿದ್ದು, 26 ಜಯ ದಾಖಲಿಸಿದೆ. ಈ ವೇಳೆ ಭಾರತ ತಂಡ ಒಂದೇ ಒಂದು ಸೋಲು ಕಂಡಿದೆ. ಆ ಸೋಲು 2023ರ ಪುರುಷರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ್ದಾಗಿದೆ.
ಟೀಮ್ ಇಂಡಿಯಾ ಸಾಧನೆ
ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲೂ ಭಾರತ ಅಜೇಯ ಓಟವನ್ನು ನಡೆಸಿತ್ತು. ಅಲ್ಲದೆ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದೇ ಪಟ್ಟವನ್ನು ಉಳಿಸಿಕೊಳ್ಳಲು ಭಾರತ ಹೋರಾಟ ನಡೆಸುತ್ತಿದ್ದು, ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications