For Quick Alerts
ALLOW NOTIFICATIONS  
For Daily Alerts
 

Asia Cup T20: ಜಸ್ಪ್ರೀತ್ ಬುಮ್ರಾ ಆಡುವ ಬಗ್ಗೆ ಬಿಗ್ ಅಪ್‌ಡೇಟ್‌: ಉಪನಾಯಕ ಯಾರು?

ಇಂಗ್ಲೆಂಡ್‌ ಟೂರ್ನಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಸಮಬಲ ಸಾಧಿಸಿದೆ. ಈಗ ಭಾರತ ಏಷ್ಯಾ ಕಪ್‌ ಟಿ20 ಟೂರ್ನಿಗೆ ತಯಾರಿ ನಡೆಸಿದೆ. ಈ ಸರಣಿಗೆ ಟೀಮ್ ಇಂಡಿಯಾ ಇನ್ನು ತಂಡವನ್ನು ಪ್ರಕಟಿಸಿಲ್ಲ. ಆಗಲೇ ಹಲವು ಪ್ರಶ್ನೆಗಳು ಎದ್ದಿವೆ. ಈ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡ ಸೇರುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ಬಿಗ್‌ ಅಪ್‌ಡೇಟ್ ಸಿಕ್ಕಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ತಂಡದ ಭಾಗವಾಗಿದ್ದ ಜಸ್ಪ್ರೀತ್ ಬುಮ್ರಾ ಐದು ಪಂದ್ಯಗಳ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದರು. ಈ ಬಗ್ಗೆ ಇವರು ಪ್ರವಾಸಕ್ಕೆ ಹೋಗುವ ಮುನ್ನವೇ ತಾವು ಮೂರನೇ ಪಂದ್ಯಗಳನ್ನು ಆಡುವುದಾಗಿ ತಿಳಿಸಿದ್ದರು. ಬುಮ್ರಾ ವರ್ಕ್‌ ಲೋಡ್ ಕಾರಣಕ್ಕಾಗಿ ಉಳಿದ ಎರಡು ಪಂದ್ಯಗಳನ್ನು ಆಡಿರಲಿಲ್ಲ. ಹೀಗಾಗಿ ಇವರು ಏಷ್ಯಾ ಕಪ್ ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಅನುಮಾನಗಳು ಇದ್ದವು. ಆದರೆ ಇತ್ತೀಚಿನ ವರದಿಯ ಪ್ರಕಾರ, ಅವರು ಏಷ್ಯಾ ಕಪ್‌ನಲ್ಲಿ ಆಡಬಹುದು ಎಂದು ತಿಳಿದು ಬಂದಿದೆ.

Team India s Asia Cup Squad Bumrah s Return Vice-Captain Race and Surya Kumar s Practice

ಪಿಟಿಐ ವರದಿಗಳ ಪ್ರಕಾರ ಬುಮ್ರಾ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಲಿದ್ದಾರೆ. ಆದರೆ ಅಕ್ಟೋಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಬುಮ್ರಾಗೆ ವಿಶ್ರಾಂತಿ ನಿಡಲಾಗುವುದು. ಬುಮ್ರಾ ಅವರು ವಿಶ್ವದ ಬೆಸ್ಟ್ ಬೌಲರ್‌ಗಳಲ್ಲಿ ಒಬ್ಬರು. ಇವರು ಏಷ್ಯಾಕಪ್‌ನಲ್ಲಿ ಆಡಿದರೆ ತಂಡಕ್ಕೆ ಪ್ರಯೋಜನವಾಗಲಿದೆ. ಹೀಗಾಗಿ ಬುಮ್ರಾ ಆಡುವುದು ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ.

ಉಪನಾಯಕ ಸ್ಥಾನದ ಮೇಲೆ 2 ಕಣ್ಣು

ಟೀಮ್ ಇಂಡಿಯಾ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿಲ್ಲ. ಇವರು ತಂಡಕ್ಕೆ ಕಂ ಬ್ಯಾಕ್‌ ಮಾಡುವುದು ಖಷಿತ ತಂಡದು ಹೇಳಲಾಗುತ್ತಿದೆ. ಶುಭಮನ್‌ ಗಿಲ್‌ ಟಿ20 ತಂಡಕ್ಕೆ ಸೇರುವ ಸಾಧ್ಯತೆ ಇದ್ದು, ಇವರು ತಂಡಕ್ಕೆ ಮರಳಿದ್ದೇ ಆದಲ್ಲಿ ಇವರಿಗೆ ತಂಡದಲ್ಲಿ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಉಪನಾಯಕನ ರೇಸ್‌ನಲ್ಲಿ ಅಕ್ಷರ್ ಪಟೇಲ್ ಹಾಗೂ ಶುಭಮನ್‌ ಗಿಲ್‌ ಇದ್ದಾರೆ.

ಸೂರ್ಯಕುಮಾರ್ ಅಭ್ಯಾಸ

ಟೀಮ್ ಇಂಡಿಯಾ ಏಷ್ಯಾ ಕಪ್‌ಗೆ ಭಾರತ ತಂಡವನ್ನು ಅಗಸ್ಟ್‌ 3ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಸೆಪ್ಟಂಬರ್‌ 9 ರಿಂದ ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಸೆ.10ರಂದು ಆಡಲಿದೆ. ಇನ್ನು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಈಗಾಗಲೇ ಎನ್‌ಸಿಎನಲ್ಲಿ ಫಿಟ್ನೆಸ್‌ ಅಭ್ಯಾಸ ನಡೆಸಿದ್ದಾರೆ. ಇವರು ತಂಡವನ್ನು ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.

Story first published: Tuesday, August 12, 2025, 10:17 [IST]
Other articles published on Aug 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+