Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಸಿಎಸ್‌ಕೆ ಚಿಂತೆಯ ಗೆರೆಗಳನ್ನು ಅಳಿಸಿದ ಟೀಮ್ ಇಂಡಿಯಾದ ಪೇಸ್ ಬೌಲರ್

ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಐಪಿಎಲ್‌ ಆರಂಭಕ್ಕೂ ಮುನ್ನವೇ ಖುಷಿ ಸುದ್ದಿ ಸಿಕ್ಕದೆ. ಫಾರ್ಮ್‌ನಿಂದ ಪರದಾಡುತ್ತಿದ್ದ ಸ್ಟಾರ್ ಪ್ಲೇಯರ್‌ಗಳು ಲಯಕ್ಕೆ ಮಳಿದ್ದು, ತಂಡದ ಮನೋಬಲ ಹೆಚ್ಚಿಸಿದೆ. ಅಲ್ಲದೆ ಆರನೇ ಬಾರಿ ಟ್ರೋಫಿ ಗೆಲ್ಲುವಿನ ಆಸೆಗೆ ಬೂಸ್ಟ್‌ ಸಿಕ್ಕಂತೆ ಆಗಿದೆ. ಈ ಪ್ಲೇಯರ್‌ ಫಾರ್ಮ್‌ಗೆ ಮರಳಿದ್ದು ಧೋನಿ ಸೈನ್ಯಕ್ಕೆ ಇನ್ನಿಲ್ಲದ ಖುಷಿ ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ ಮಿನಿ ಹರಾಜಿನಲ್ಲಿ ಶಾರ್ದೂಲ್ ಠಾಕೂರ್ ತಮ್ಮ ತಂಡದ ಭಾಗವಾಗಿ ಮಾಡಿಕೊಂಡಿತ್ತು. ಅದೇ ಸಮಯದಲ್ಲಿ, ಐಪಿಎಲ್ ಸೀಸನ್ ಪ್ರಾರಂಭವಾಗುವ ಮೊದಲು, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಿಹಿ ಸುದ್ದಿ ಇದೆ. ಇಂದು ಮುಂಬೈ ರಣಜಿ ಟ್ರೋಫಿಯಲ್ಲಿ ಅಸ್ಸಾಂನ ಸವಾಲನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರ ಅಬ್ಬರ ಕಂಡು ಬಂತು. ಶಾರ್ದೂಲ್ ಠಾಕೂರ್ 10.1 ಓವರ್‌ಗಳಲ್ಲಿ 21 ರನ್ ನೀಡಿ 6 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಶಾರ್ದೂಲ್ ಠಾಕೂರ್ 2.06 ರ ಎಕನಾಮಿಯೊಂದಿಗೆ ಬೌಲಿಂಗ್ ನಡೆಸಿದ್ದಾರೆ. ಶಾರ್ದೂಲ್ ಠಾಕೂರ್ ಬೌಲಿಂಗ್ ಗೆ ಅಸ್ಸಾಂ ತಂಡದ ಬ್ಯಾಟ್ಸ್ ಮನ್ ಗಳ ಬಳಿ ಉತ್ತರವೇ ಇರಲಿಲ್ಲ.

Team Indias pace bowler erased CSKs worries

ಶಾರ್ದೂಲ್ ಠಾಕೂರ್ ಅವರ ಮಾರಕ ಬೌಲಿಂಗ್ ಮುಂದೆ ಅಸ್ಸಾಂ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 100 ರನ್ ಗಡಿ ಸಹ ದಾಟಲೂ ಸಾಧ್ಯವಾಗಲಿಲ್ಲ. ಅಸ್ಸಾಂ ತಂಡ ಕೇವಲ 84 ರನ್‌ಗಳಿಗೆ ಕುಸಿಯಿತು. ಆದರೆ, ಶಾರ್ದೂಲ್ ಠಾಕೂರ್ ಅವರ ಅಮೋಘ ಫಾರ್ಮ್ ಚೆನ್ನೈ ಸೂಪರ್ ಕಿಂಗ್ಸ್ ಗೆ ಸಂತಸದ ಸುದ್ದಿ. ಅದೇ ಸಮಯದಲ್ಲಿ, ಶಾರ್ದೂಲ್ ಠಾಕೂರ್ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ನೆಟ್ಟಿಗರು ನಿರಂತರವಾಗಿ ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಲೇ ಇದ್ದಾರೆ.

Team Indias pace bowler erased CSKs worries

ಶಾರ್ದೂಲ್ ವೃತ್ತಿಜೀವನ

ಶಾರ್ದೂಲ್ ಠಾಕೂರ್ ಅವರ ಐಪಿಎಲ್ ವೃತ್ತಿಜೀವನವನ್ನು ಗಮನಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿ, ಈ ಆಟಗಾರ ಪಂಜಾಬ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇಲ್ಲಿಯವರೆಗೆ, ಶಾರ್ದೂಲ್ ಠಾಕೂರ್ 86 ಐಪಿಎಲ್ ಪಂದ್ಯಗಳಲ್ಲಿ 18.83 ಸ್ಟ್ರೈಕ್ ರೇಟ್ ಮತ್ತು 28.76 ಸರಾಸರಿಯೊಂದಿಗೆ 89 ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದ್ದಾರೆ. ಇವರು 11 ಟೆಸ್ಟ್ ಪಂದ್ಯಗಳನ್ನು ಹೊರತುಪಡಿಸಿ, ಶಾರ್ದೂಲ್ ಠಾಕೂರ್ 47 ಏಕದಿನ ಮತ್ತು 25 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Story first published: Saturday, February 17, 2024, 9:41 [IST]
Other articles published on Feb 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+