ವಿಭಿನ್ನ ನಿಯಮಗಳ ಬುಷ್‌ಫೈರ್ ಬ್ಯಾಷ್ ಪಂದ್ಯಕ್ಕೆ ದಿಗ್ಗಜರ ತಂಡಗಳು ಪ್ರಕಟ!

ಬೆಂಗಳೂರು, ಫೆಬ್ರವರಿ 7: ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್, ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಈ ಶ್ರೇಷ್ಠ ಕ್ರಿಕೆಟಿಗರ ಬ್ಯಾಟಿಂಗ್ ನೋಡದೆ ಎಷ್ಟೋ ದಿನಗಳಾಗಿವೆ. ಇಂಥ ಅನೇಕ ಕ್ರಿಕೆಟ್ ದಿಗ್ಗಜರ ಬ್ಯಾಟಿಂಗ್ ನೋಡುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ಒದಗಿಬಂದಿದೆ. ಅದು ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯದ ಮೂಲಕ.
ಬಿಗ್‌ಬ್ಯಾಷ್ ಲೀಗ್ ಫೈನಲ್ ಪಂದ್ಯ ಫೆಬ್ರವರಿ 9ರಂದು ನಡೆಯಲಿದೆ. ಇದೇ ದಿನ, ಆಸ್ಟ್ರೇಲಿಯಾದಲ್ಲಿ ನಡೆದ ಬುಷ್ ಫೈರ್ ದುರಂತಕ್ಕೆ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಕ್ರಿಕೆಟ್ ದಿಗ್ಗಜರನ್ನೊಳಗೊಂಡ ತಂಡಗಳ ನಡುವೆ ನಡೆಯುವ ಬುಷ್‌ಫೈರ್ ಬ್ಯಾಷ್ ಪಂದ್ಯ ಮೆಲ್ಬರ್ನ್‌ನ ಜಂಕ್ಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. 10 ಓವರ್‌ಗಳ ಈ ಪಂದ್ಯ 3.15pmಗೆ ಆರಂಭಗೊಳ್ಳಲಿದೆ. ಸೋನಿ ಸಿಕ್ಸ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.
ವಿಶೇಷ ನಿಯಮಾವಳಿಗಳು
ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯದಲ್ಲಿ ಸಾಮಾನ್ಯ ಪಂದ್ಯಕ್ಕಿಂತ ವಿಶೇಷ ನಿಯಮಗಳು ಇರಲಿವೆ. 10 ಓವರ್‌ಗಳ ಈ ಆಟದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಆತ ಎದುರಿಸುವ ಮೊದಲ ಎಸೆತಕ್ಕೆ ಔಟ್ ಆದರೆ ಅದು ಔಟ್ ಅಲ್ಲ. ಬೌಲರ್‌ಗಳಿಗೆ ಇಷ್ಟೇ ಓವರ್ ಎಸೆಯಬೇಕನ್ನೋ ನಿಯಮವಿಲ್ಲ. ಬದಲಿ ಆಟಗಾರ ಬೇಕನ್ನಿಸಿದರೆ ಯಾವುದೇ ಸಮಯದಲ್ಲಿ ಆಟಗಾರನ ಬದಲಿಸುವ ಅವಕಾಶ ತಂಡದ ನಾಯಕನಿಗಿರುತ್ತದೆ.
ಪಾಂಟಿಂಗ್ XI: ಮ್ಯಾಥ್ಯೂ ಹೇಡನ್, ಜಸ್ಟಿನ್ ಲ್ಯಾಂಗರ್, ರಿಕಿ ಪಾಂಟಿಂಗ್ (ಸಿ), ಎಲಿಸ್ ವಿಲ್ಲಾನಿ, ಬ್ರಿಯಾನ್ ಲಾರಾ, ಫೋಬೆ ಲಿಚ್‌ಫೀಲ್ಡ್, ಬ್ರಾಡ್ ಹ್ಯಾಡಿನ್ (ವಿಕೆ), ಬ್ರೆಟ್ ಲೀ, ವಾಸಿಮ್ ಅಕ್ರಮ್, ಡಾನ್ ಕ್ರಿಶ್ಚಿಯನ್, ಲ್ಯೂಕ್ ಹಾಡ್ಜ್. ಕೋಚ್: ಸಚಿನ್ ತೆಂಡೂಲ್ಕರ್.
ಗಿಲ್‌ಕ್ರಿಸ್ಟ್ XI: ಆ್ಯಡಮ್ ಗಿಲ್‌ಕ್ರಿಸ್ಟ್ (ಸಿ & ವಿಕೆ), ಶೇನ್ ವ್ಯಾಟ್ಸನ್, ಬ್ರಾಡ್ ಹಾಡ್ಜ್, ಯುವರಾಜ್ ಸಿಂಗ್, ಅಲೆಕ್ಸ್ ಬ್ಲ್ಯಾಕ್‌ವೆಲ್, ಆ್ಯಡ್ರ್ಯೂ ಸೈಮಂಡ್ಸ್, ಕರ್ಟ್ನಿ ವಾಲ್ಷ್, ನಿಕ್ ರಿಯೊವಾಲ್ಡ್, ಪೀಟರ್ ಸಿಡಲ್, ಫವಾದ್ ಅಹ್ಮದ್ (ಇನ್ನೊಬ್ಬನ ಹೆಸರು ಪ್ರಕಟಿಸಬೇಕಿದೆ). ಕೋಚ್: ಟಿಮ್ ಪೈನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications