ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾಕ್ಕೆ ಸರಣಿ ಜಯ
ಕಿಂಗ್ ಸ್ಟನ್, ಜುಲೈ 7: ಬೌಲಿಂಗ್ ವಿಭಾಗದ ಕಟ್ಟುನಿಟ್ಟಾದ ಪ್ರದರ್ಶನ ಹಾಗೂ ನಾಯಕ ವಿರಾಟ್ ಕೊಹ್ಲಿಯವರ ಭರ್ಜರಿ, ಅಜೇಯ ಶತಕದ (111* ರನ್, 115 ಎಸೆತ, 12 ಬೌಂಡರಿ, 2 ಸಿಕ್ಸರ್) ಸಹಾಯದಿಂದಾಗಿ ಭಾರತೀಯ ಕ್ರಿಕೆಟ್ ತಂಡ, ಶುಕ್ರವಾರ ತಡರಾತ್ರಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ 8 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ, ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ, 3-1 ಅಂತರದಲ್ಲಿ ಗೆದ್ದುಕೊಂಡಿದೆ.
ಇಲ್ಲಿನ ಸಬೀನಾ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ, ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಈ ಮೊತ್ತವನ್ನು ಹಿಂಬಾಲಿಸಿದ ಭಾರತ, ಕೇವಲ 36.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 206 ರನ್ ಮೊತ್ತ ಗಳಿಸಿತು.

ಶಮಿ, ಉಮೇಶ್ ಮಿಂಚು
ಪಂದ್ಯಕ್ಕೂ ಮೊದಲಿಗೆ ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡ, ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿತ್ತು. ಅದರಂತೆ, ಬ್ಯಾಟಿಂಗ್ ಗೆ ಇಳಿದ ವಿಂಡೀಸ್ ಗೆ ಭಾರತೀಯ ಬೌಲರ್ ಗಳು ಚುರುಕು ಮುಟ್ಟಿಸಿದರು. ವೇಗಿಗಳಾದ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಕ್ರಮವಾಗಿ 4 ಹಾಗೂ 3 ವಿಕೆಟ್ ಕಬಳಿಸಿ ಎದುರಾಳಿಗಳಿಗೆ ಬಿಸಿ ಮುಟ್ಟಿಸಿದರು. ಇನ್ನು, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಜಾಧವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಇತರ ಬ್ಯಾಟ್ಸ್ ಮನ್ ಗಳ ವೈಫಲ್ಯ
ಆರಂಭಿಕ ಆಟಗಾರ ಎವಿನ್ ಲೂಯಿಸ್ (9) ಬೇಗನೇ ಔಟಾದರು. ಆನಂತರ ಮತ್ತೊಬ್ಬ ಆರಂಭಿಕ ಕೈಲ್ ಹೋಪ್ (46) ಹಾಗೂ ಮೂರನೇ ಕ್ರಮಾಂಕದ ಶಾಯ್ ಹೋಪ್ (51) ಕೊಂಚ ಚೇತರಿಕೆಯಾಟ ನೀಡಿದರು. ಆದರೆ, ಈ ಇಬ್ಬರ ವಿಕೆಟ್ ಉರುಳಿದ ನಂತರ, ಬೇರ್ಯಾರೂ ಉತ್ತಮವಾಗಿ ಆಡಲಿಲ್ಲ.

ಆದರೂ ಸಾಧ್ಯವಾಗದ ದೊಡ್ಡ ಮೊತ್ತ
ಮಧ್ಯಮ ಕ್ರಮಾಂಕದಲ್ಲಿ ನಾಯಕ ಹೋಲ್ಡರ್ (36), ರೋವ್ಮನ್ ಪೊವೆಲ್ (31) ಅವರು ಕೊಂಚ ಮಿಂಚಿದ್ದು ಬಿಟ್ಟರೆ, ಮಿಕ್ಕವರ್ಯಾರೂ ಉತ್ತಮವಾಗಿ ಆಡಲಿಲ್ಲ. ಹೀಗಾಗಿ, ವಿಂಡೀಸ್ ತನ್ನ ಇನಿಂಗ್ಸ್ ನಲ್ಲಿ 206 ರನ್ ಮಾತ್ರ ಗಳಿಸಿತಷ್ಟೆ.

ಇನಿಂಗ್ಸ್ ಕಟ್ಟಿದ ರಹಾನೆ, ಕೊಹ್ಲಿ
ವಿಂಡೀಸ್ ನೀಡಿದ್ದ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ (4) ಬೇಗನೇ ಔಟಾಗಿ ಕೊಂಚ ದಿಗಿಲು ಹುಟ್ಟಿಸಿದರು. ಆದರೆ, ಅಜಿಂಕ್ಯ ರಹಾನೆ (39) ಹಾಗೂ ಮೂರನೇ ಕ್ರಮಾಂಕದ ವಿರಾಟ್ ಕೊಹ್ಲಿ (ಅಜೇಯ 111) 2ನೇ ವಿಕೆಟ್ ಗೆ 79 ರನ್ ಪೇರಿಸಿದರು, ಧವನ್ ಶೀಘ್ರ ನಿರ್ಗಮನದಿಂದಾಗಿದ್ದ ದುಗುಡತೆಯನ್ನು ನಿವಾರಿಸಿದರು.

122 ರನ್ ಪಾರ್ಟ್ ನರ್ ಶಿಪ್
ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ (ಅಜೇಯ) ಅವರು ಇನಿಂಗ್ಸ್ ಮುಕ್ತಾಯದವರೆಗೂ ಕ್ರೀಸ್ ನಲ್ಲಿದ್ದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇವರಿಬ್ಬರ 122 ರನ್ ಜತೆಯಾಟ ತಂಡಕ್ಕೆ ಜಯ ತಂದುಕೊಟ್ಟಿತು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 9 ವಿಕೆಟ್ ಗೆ 206 (ಶಾಯ್ ಹೋಪ್ 51, ಕೈಲ್ ಹೋಪ್ 46; ಮೊಹಮ್ಮದ್ ಶಮಿ 48ಕ್ಕೆ 4, ಉಮೇಶ್ ಯಾದವ್ 53ಕ್ಕೆ 2); ಭಾರತ 36.5 ಓವರ್ ಗಳಿಗೆ 2 ವಿಕೆಟ್ ನಷ್ಟಕ್ಕೆ 206 (ವಿರಾಟ್ ಕೊಹ್ಲಿ ಅಜೇಯ 111, ದಿನೇಶ್ ಕಾರ್ತಿಕ್ 50; ಅಲ್ಜಾರಿ ಜೋಸೆಫ್ 39ಕ್ಕೆ 1, ದೇವೇಂದ್ರ ಬಿಶೂ 42ಕ್ಕೆ 1). ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications