ಗುರು ಪೂರ್ಣಿಮೆಯಂದು ನೆಚ್ಚಿನ ಗುರುವಿಗೆ ನಮಿಸಿದ ತೆಂಡೂಲ್ಕರ್!

ಮುಂಬೈ, ಜುಲೈ 16: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ತಮಗೆ ಕ್ರಿಕೆಟ್‌ನ ಅಆಇಈ ಕಲಿಸಿಕೊಟ್ಟ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್‌ಗೆ ಗುರು ಪೂರ್ಣಿಮೆಯ ದಿನದಂದು ಮಂಗಳವಾರ ನಮನ ಸಲ್ಲಿಸಿದ್ದಾರೆ.
"ವಿಧ್ಯಾರ್ಥಿಗಳಲ್ಲಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವವೇ ಗುರು. ನನ್ನ ಪಾಲಿಗೆ ಈ ರೀತಿಯ ಗುರುವಾಗಿದ್ದಕ್ಕೆ ಥ್ಯಾಂಕ್ಯೂ ಅಚ್ರೇಕರ್ ಸರ್. ನನ್ನ ಈ ಎಲ್ಲಾ ಸಾಧನೆಗಳಿಗೆ ಮಾರ್ಗದರ್ಶಕರು ನೀವು," ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರಂತಹ ಸ್ಟಾರ್ ಆಟಗಾರರನ್ನು ದೇಶಕ್ಕೆ ಕೊಟ್ಟ ರಮಾಕಾಂತ್ ಅಚ್ರೇಕರ್ (87) ಹೃದಯಾಘಾತದಿಂದ ಇದೇ ಜನವರಿಯಲ್ಲಿ ಇಲ್ಲಿನ ದಾದರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು.
ಅಚ್ರೇಕರ್ ತಮ್ಮ ಸಾಧನೆಗಾಗಿ 2010ರಲ್ಲಿ ಪದ್ಮ ಶ್ರೀ ಹಾಗೂ 1990ರಲ್ಲಿ ಧ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದರು. ಸಚಿನ್ ಕಾಂಬ್ಳಿ ಸೇರಿದಂತೆ ಹಲವು ಪ್ರತಿಭಾನ್ವಿತ ಯುವ ಕ್ರಿಕೆಟಿಗರಿಗೆ ಯಶಸ್ಸಿನೆಡೆಗೆ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಅಚ್ರೇಕರ್ ಅವರದ್ದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications