Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್, ಸಚಿನ್ ಹರ್ಷೋದ್ಗಾರ ಮೊದಲಿಗೆ ಶುರು ಮಾಡಿದ್ದು ಯಾರು?

ಮುಂಬೈ, ಮೇ 10: ಸಚಿನ್, ಸಚಿನ್ ಹರ್ಷೋದ್ಗಾರ ಮೊದಲಿಗೆ ಶುರು ಮಾಡಿದ್ದು ಯಾರು? ಎಂಬ ಕುತೂಹಲ ಪ್ರಶ್ನೆಗೆ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಉತ್ತರಿಸಿದ್ದಾರೆ. ಈ ರೀತಿ ಹರ್ಷೋದ್ಗಾರ ಮೊದಲಿಗೆ ಶುರು ಮಾಡಿದ್ದು ಸಚಿನ್ ಅವರ ಪಾಲಿನ ದೇವರು ಅವರ ಹೆತ್ತ ತಾಯಿ.

ನನ್ನ ಶಾಲಾ ದಿನಗಳಲ್ಲಿ, ಮನೆಯ ಬಳಿ ಆಡುವಾಗ ಕೇಳಿ ಬರುತ್ತಿದ್ದ 'ಸಚಿನ್ ಸಚಿನ್' ಎಂಬ ಆಪ್ತ ಕೂಗು ಈ ಪರಿ ಬೆಳವಣಿಗೆ ಕಾಣುತ್ತದೆ ಎಂದೆನಿಸಿರಲಿಲ್ಲ. ಈಗ ಇದೇ ಉದ್ಗಾರ ವಿಶ್ವದೆಲ್ಲೆಡೆ ಹಬ್ಬಿದ್ದು ಕೆಲ ದಿನಗಳಲ್ಲಿ ವಿಶ್ವದ ಅನೇಕ ಚಿತ್ರಮಂದಿರಗಳಲ್ಲಿ ಕೇಳಿ ಬರಲಿದೆ.[ಐಪಿಎಲ್ 10 ರ ಸಂಭ್ರಮ, ಕ್ರಿಕೆಟ್ ದೇವರ ಜರ್ಸಿ ನಂಬರ್ 10ರ ಕಥೆ]

ಅಭಿಮಾನಿಗಳು ತಮ್ಮ ಪಾಲಿನ ಕ್ರಿಕೆಟ್ ದೇವರು ಸಚಿನ್ ಅವರನ್ನು 'ಸಚಿನ್ ಸಚಿನ್' ಎಂದು ಕೂಗಿ ಕರೆಯುತ್ತಾ ಹುರಿದುಂಬಿಸುವುದು ನೋಡುವುದು ಕೇಳುವುದೇ ಒಂದು ರೀತಿ ಆನಂದ.

Tendulkar Reveals That It Was His Mother Who Started The ‘Sachin, Sachin’ Chant


ನಾನು ಚಿಕ್ಕಂದಿನಲ್ಲಿ ಮನೆಯಿಂದ ಕೆಳಗಿಳಿದು ಮೈದಾನದ ಕಡೆಗೆ ಹೋಗುವಾಗ, ನನ್ನ ತಾಯಿ ನನ್ನನ್ನು ಇದೇ ರೀತಿ ಕರೆಯುತ್ತಿದ್ದರು ಎಂದು ಸಚಿನ್ ಹೇಳಿದರು. ಸಚಿನ್ ಸಚಿನ್ ಎಂಬ ಉದ್ಗಾರ ಮೊದಲಿಗೆ ಯಾರಿಂದ ಬಂತು ಎಂಬ ಪ್ರಶ್ನೆಗೆ ಸಚಿನ್ ಉತ್ತರಿಸಿದರು.[ಸಂಸದರಾಗಿ ಅತ್ಯಂತ ಕಳಪೆ ರೆಕಾರ್ಡ್ ನಿರ್ಮಿಸಿದ ಸಚಿನ್]

ಕ್ರಿಕೆಟ್ ಆಗಲಿ, ಟೆನಿಸ್ ಆಗಲಿ ಎದುರಿಗೆ ಚೆಂಡು ಕಾಣಿಸಿದರೆ ಚೆಚ್ಚುವುದು ನನ್ನ ಗುರಿಯಾಗಿತ್ತು. ನನ್ನ ಅಣ್ಣ ನಾನು ಬಾರಿಸಿದ ಚೆಂಡುಗಳನ್ನು ಹೆಕ್ಕಿ ತರುತ್ತಿದ್ದ. ಆ ಕಾಲದಲ್ಲಿ ತೆಗೆದ ಚಿತ್ರಗಳು ಈಗ ಫಿಲ್ಮ್ ಗೆ ಬಳಕೆಯಾಗಿದೆ ಎಂದರು.

ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಸಂಗೀತವಿರುವ 'ಸಚಿನ್ ಎ ಬಿಲಿಯನ್ ಡ್ರೀಮ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಸಚಿನ್ ಸಚಿನ್ ಎಂಬ ಇಂಪಾದ ಕೂಗು ಕೇಳಿ ಬರಲಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+