ಸಚಿನ್ ತೆಂಡೂಲ್ಕರ್ ಜರ್ಸಿ 10 ಅನಧಿಕೃತವಾಗಿ ನಿವೃತ್ತಿ!

Posted By:

ಬೆಂಗಳೂರು, ನವೆಂಬರ್ 30: ಸಚಿನ್ ಅವರ ವೃತ್ತಿ ಬದುಕು ಅಂತ್ಯವಾದ ಬಳಿಕ ಅವರು ಬಳಸುತ್ತಿದ್ದ ಜರ್ಸಿ 10 ಬೇರೊಬ್ಬರಿಗೆ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಮುಂಬೈ ಇಂಡಿಯನ್ಸ್ ಮನಸು ಮಾಡಿರಲಿಲ್ಲ.

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಓನರ್ ನೀತಾ ಅಂಬಾನಿ ಅವರು, 10ನೇ ನಂಬರ್ ಜರ್ಸಿಯನ್ನು ರಿಟೈರ್ ಮಾಡಲು ನಿರ್ಧರಿಸುವುದಾಗಿ ಹೇಳಿದ್ದರು. ಈಗ ಬಿಸಿಸಿಐ ಕೂಡಾ ಇದೇ ರೀತಿ ನಿರ್ಧರಕ್ಕೆ ಬಂದಿದೆ.

Tendulkar's No. 10 jersey unofficially retired

ಸಚಿನ್ ಅವರು ನಿವೃತ್ತಿ ಘೋಷಿಸಿದ ಬಳಿಕ ಜರ್ಸಿ 10 ಯಾರಿಗೂ ನೀಡಿರಲಿಲ್ಲ. ಆದರೆ, ಇತ್ತೀಚೆಗೆ 26 ವರ್ಷ ವಯಸ್ಸಿನ ಶಾರ್ದೂಲ್ ಠಾಕೂರ್ ಅವರು ಏಕದಿನ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಾಗ 10ನೇ ನಂಬರ್ ಜರ್ಸಿ ತೊಟ್ಟಿದ್ದರು. ಆದರೆ, ಸಾರ್ವಜನಿಕವಾಗಿ ಅನೇಕ ಅಭಿಮಾನಿಗಳು ಟ್ವೀಟ್ ಮಾಡಿ ಕಾಲೆಳೆದಿದ್ದರು.

ಜರ್ಸಿ ವಿದಾಯಕ್ಕೆ ಅಭಿಯಾನ: ಹಾಗೆ ನೋಡಿದರೆ 2012ರಲ್ಲೇ ಈ ಅಭಿಯಾನ ಆರಂಭವಾಯಿತು. ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿದ ಬಳಿಕ#RetireTheJerseyNo10 ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಮುಂಬೈನ ಫ್ಯಾನ್ ಕ್ಲಬ್ ಗಳು ಅಭಿಯಾನ ಆರಂಭಿಸಿದವು. ಇದಕ್ಕೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೂಡಾ ಸಮ್ಮತಿಸಿತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಸಾಮಾನ್ಯವಾಗಿ ಈ ರೀತಿ ಕ್ಲಾಸಿಕ್ ಆಟಗಾರರ ಜರ್ಸಿಗೆ ವಿದಾಯ ಹೇಳುವ ಪದ್ಧತಿ ಫುಟ್ಬಾಲ್ ಜಗತ್ತಿನಲ್ಲಿ ಕಾಣಬಹುದು. ಕ್ರಿಕೆಟ್ ನಲ್ಲಿ ಹೊಸದೊಂದು ಆಧ್ಯಾಯಕ್ಕೆ ಮುಂಬೈ ಇಂಡಿಯನ್ಸ್ ಮುನ್ನುಡಿ ಹಾಡಿದ್ದು, ಸಚಿನ್ ಅಭಿಮಾನಿಗಳಿಗೂ ಇದು ಸಮ್ಮತವಾಗಿದೆ.

Story first published: Thursday, November 30, 2017, 9:29 [IST]
Other articles published on Nov 30, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ