Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಾರ್ನ್ ಹೆಸರಿಸಿದ ವಿಶ್ವಶ್ರೇಷ್ಠ ಏಕದಿನ ತಂಡದಲ್ಲಿ ಇಬ್ಬರು ಭಾರತೀಯರು

Tendulkar, Sehwag Included in Warnes Greatest World Odi Xi

ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಅಭಿಮಾನಿಗಳ ಜೊತೆಗೆ ಸಂವಾದವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶೇ್ ವಾರ್ನ್ ವಿಶ್ವ ಶ್ರೇಷ್ಟ ಏಕದಿನ ತಂಡವನ್ನು ಹೆಸರಿಸಿದ್ದಾರೆ.

ಶೇನ್ ವಾರ್ನ್ ತಾವು ಆಡುತ್ತಿದ್ದ ಕಾಲದಲ್ಲಿದ್ದ ಆಟಗಾರರನ್ನು ಮಾತ್ರವೇ ಈ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸದ್ಯ ವಿಶ್ವ ಕ್ರಿಕೆಟ್‌ನಲಲ್ಇ ಮಿಂಚು ಹರಿಸುತ್ತಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಯಾರು ಕೂಡ ಸ್ಥಾನವನ್ನು ಪಡೆದುಕೊಂಡಿಲ್ಲ. ಜೊತೆಗೆ ಆಸ್ಟ್ರೇಲಿಯಾದ ಆಟಗಾರರನ್ನು ಕೂಡ ಶೇನ್ ವಾರ್ನ್ ಈ ತಂಡದಲ್ಲಿ ಪರಿಗಣಿಸಿಲ್ಲ.

ಶೇನ್ ವಾರ್ನ್ ಹೆಸರಿಸಿದ ಈ ತಂಡದಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಇದ್ದಾರೆ. ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರ ಸಚಿ್ ತೆಂಡೂಲ್ಕರ್ ಮತ್ತು ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ತಂಡದಲ್ಲ ಕಾಣಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ, ಶ್ರೀಲಂಕಾ, ವೆಸ್ಟ್‌ಇಂಡೀಸ್‌ನ, ಇಂಗ್ಲೆಂಡ್‌ ಮತ್ತು ಪಾಕಿಸ್ತಾನದಿಂದ ತಲಾ ಇಬ್ಬರು ಮತ್ತು ನ್ಯೂಜಿಲೆಂಡ್‌ನ ಓರ್ವ ಆಟಗಾರ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಾರ್ನ್ ಹೆಸರಿಸಿದ ವರ್ಲ್ಡ್ XI ತಂಡ ಹೀಗಿದೆ: ವೀರೇಂದ್ರ ಸೆಹ್ವಾಗ್, ಸನತ್ ಜಯಸೂರ್ಯ, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಕೆವಿನ್ ಪೀಟರ್ಸನ್, ಕುಮಾರ್ ಸಂಗಕ್ಕಾರ (ವಿಕೆಟ್ ಕೀಪರ್), ಆಂಡ್ರ್ಯೂ ಫ್ಲಿಂಟಾಫ್, ವಾಸಿಮ್ ಅಕ್ರಮ್, ಡೇನಿಯಲ್ ವೆಟ್ಟೋರಿ, ಶೋಯೆಬ್ ಅಖ್ತರ್, ಕಾರ್ಟ್ಲಿ ಆಂಬ್ರೋಸ್

Story first published: Tuesday, April 7, 2020, 21:02 [IST]
Other articles published on Apr 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+