For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ ಗುಣಮಟ್ಟ ಉಳಿಸಿಕೊಳ್ಳಲು, ತಂಡಗಳ ಸಂಖ್ಯೆಯನ್ನ ತಗ್ಗಿಸಬೇಕು: ರವಿಶಾಸ್ತ್ರಿ

Team india and Ravi shastri

ಕ್ರಿಕೆಟ್‌ನ ನಿಜವಾದ ಸ್ವರೂಪ, ಟೆಸ್ಟ್‌ ಕ್ರಿಕೆಟ್‌ ಕುರಿತಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ ದೀರ್ಘಕಾಲದವರೆಗೆ ತನ್ನ ಮಹತ್ವವನ್ನ ಉಳಿಸಿಕೊಳ್ಳಬೇಕಾದಲ್ಲಿ ಐಸಿಸಿ ಕೆಲವೊಂದು ಮಾರ್ಪಾಡುಗಳನ್ನ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ತಂಡಗಳ ಭಾಗಿಗಳ ಪ್ರಮಾಣಕ್ಕಿಂತ, ಗುಣಮಟ್ಟ ಸುಧಾರಿಸಬೇಕಾಗುತ್ತದೆ ಎಂಬುದು ಶಾಸ್ತ್ರಿ ವಾದವಾಗಿದೆ. ಅಗ್ರ ಆರು ತಂಡಗಳಷ್ಟೇ ಟೆಸ್ಟ್ ಕ್ರಿಕೆಟ್ ಆಡಬೇಕು. ಇಂಗ್ಲೆಂಡ್‌ನಲ್ಲಿ ಫುಟ್ಬಾಲ್ ಪ್ರೀಮಿಯರ್ ಲೀಗ್ ರೀತಿಯಲ್ಲಿ ಗುಣಮಟ್ಟದ ತಂಡಗಳಷ್ಟೇ ಟೆಸ್ಟ್ ಕ್ರಿಕೆಟ್‌ ಆಡಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ ಅನ್ನು 10/12 ತಂಡಗಳು ಆಡಬಾರದು

ಟೆಸ್ಟ್ ಕ್ರಿಕೆಟ್‌ ಅನ್ನು 10/12 ತಂಡಗಳು ಆಡಬಾರದು

ಟೆಸ್ಟ್‌ ಕ್ರಿಕೆಟ್‌ನ ಗುಣಮಟ್ಟ ಉಳಿಸಿಕೊಳ್ಳಬೇಕಾದಲ್ಲಿ 10 ಅಥವಾ 12 ತಂಡಗಳನ್ನು ಆಡಿಸಬಾರದು ಎಂದು ಟೀಂ ಇಂಡಿಯಾ ಮಾಜಿ ಕೋಚ್ ಹೇಳಿದ್ದಾರೆ.

"ನೀವು 12 ತಂಡಗಳು ಅಥವಾ ಹತ್ತು ತಂಡಗಳನ್ನು ಹೊಂದಲು ಸಾಧ್ಯವಿಲ್ಲ. ನೀವು ಅಗ್ರ ಆರು ಸ್ಥಾನಗಳನ್ನು ಇಟ್ಟುಕೊಳ್ಳಿ, ಗುಣಮಟ್ಟವನ್ನು ಇಟ್ಟುಕೊಳ್ಳಿ ಮತ್ತು ಪ್ರಮಾಣಕ್ಕಿಂತ ಗುಣಮಟ್ಟವನ್ನು ಗೌರವಿಸಿ. ಇತರ ತಂಡಗಳು ಕ್ರಿಕೆಟ್ ಆಡಲು ಬಾಗಿಲನ್ನು ತೆರೆಯುವ ಏಕೈಕ ಮಾರ್ಗವಾಗಿದೆ. ಆಟವು ಎಲ್ಲೆಡೆ ಹರಡಲು(ಬೇರೆ ರಾಷ್ಟ್ರಗಳಲ್ಲಿ) ನೀವು ಬಯಸಿದರೆ ಏಕದಿನ ಕ್ರಿಕೆಟ್ ಮತ್ತು T20 ಕ್ರಿಕೆಟ್‌ನಲ್ಲಿ ತಂಡಗಳನ್ನು ವಿಸ್ತರಿಸಿ. ಆದರೆ ಟೆಸ್ಟ್ ಕ್ರಿಕೆಟ್ ಆಡುವ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗುತ್ತದೆ'' ಎಂದು ರವಿಶಾಸ್ತ್ರಿ ಅಭಿಪ್ರಾಯವಾಗಿದೆ.

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 25 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್ ಗಿಲ್

ಫುಟ್ಬಾಲ್ ರೀತಿಯಲ್ಲಿ ಅಗ್ರ ತಂಡಗಳಷ್ಟೇ ಟೆಸ್ಟ್ ಕ್ರಿಕೆಟ್ ಆಡಲಿ!

ಫುಟ್ಬಾಲ್ ರೀತಿಯಲ್ಲಿ ಅಗ್ರ ತಂಡಗಳಷ್ಟೇ ಟೆಸ್ಟ್ ಕ್ರಿಕೆಟ್ ಆಡಲಿ!

"ಬಾಟಮ್ ಲೈನ್, ಇದು ಫುಟ್ಬಾಲ್ ಮಾದರಿಯಾಗಿದೆ. ನೀವು ಇಂಗ್ಲೀಷ್ ಪ್ರೀಮಿಯರ್ ಲೀಗ್, ಲಾ ಲೀಗಾ, ಜರ್ಮನ್ ಲೀಗ್, ದಕ್ಷಿಣ ಅಮೇರಿಕಾ ಕೋಪಾ ಅಮೇರಿಕಾವನ್ನು ನೋಡಿದ್ರೆ, ಅಗ್ರ ತಂಡಗಳಷ್ಟೇ ಟೂರ್ನಿಯಲ್ಲಿ ಭಾಗಿಯಾಗುತ್ತವೆ. ಭವಿಷ್ಯದಲ್ಲಿ ಇದೇ ರೀತಿಯಲ್ಲಿ ಟೆಸ್ಟ್ ಕ್ರಿಕೆಟ್‌ ಅನ್ನು ಆಡುವ ಅಗ್ರ ತಂಡಗಳಷ್ಟೇ ಆಡಿಸುವುದನ್ನ ಕಾಣಬಹುದು. ಭವಿಷ್ಯದಲ್ಲಿ ಅದು ಹಾಗೆ ಆಗುತ್ತದೆ, ನೀವು ಒಂದು ವಿಶ್ವಕಪ್ ದೊಡ್ಡ ಮಟ್ಟದಲ್ಲಿ ನಡೆಸುವುದು ಮತ್ತು ಉಳಿದವುಗಳು ಪ್ರಪಂಚದಾದ್ಯಂತ ವಿವಿಧ ಲೀಗ್‌ಗಳು ನಡೆಯುವುದು ಉತ್ತಮ "ಎಂದು ರವಿಶಾಸ್ತ್ರಿ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದರು.

ಶ್ರೀಲಂಕಾ vs ಪಾಕಿಸ್ತಾನ 2ನೇ ಟೆಸ್ಟ್: ಪಂದ್ಯದ ಪ್ರಿವ್ಯೂ, ಹೆಡ್ ಟು ಹೆಡ್ ಹಾಗೂ ಆಡುವ ಬಳಗ

West Indies ವಿರುದ್ಧ 3 ರನ್ ಗಳಿಂದ ಗೆದ್ದ ಟೀಂ ಇಂಡಿಯಾ:ಹೇಗಿತ್ತು ಕೊನೆ ಓವರ್ | *Cricket | OneIndia Kannada
ಎದುರಾಳಿ ಬಲಿಷ್ಟವಾಗಿರದಿದ್ರೆ, ಎರಡು ಅಥವಾ ಮೂರು ದಿನಕ್ಕೆ ಪಂದ್ಯ ಮುಗಿಯುವುದು

ಎದುರಾಳಿ ಬಲಿಷ್ಟವಾಗಿರದಿದ್ರೆ, ಎರಡು ಅಥವಾ ಮೂರು ದಿನಕ್ಕೆ ಪಂದ್ಯ ಮುಗಿಯುವುದು

ಬಲಿಷ್ಠ ತಂಡದ ಎದುರು ದುರ್ಬಲ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಎದುರಾದಾಗ ಪಂದ್ಯವು ಎರಡು ಅಥವಾ ಮೂರು ದಿನಕ್ಕೆ ಮುಗಿದು ಹೋಗುತ್ತದೆ. ಇದರಿಂದ ಪ್ರಸಾರಕರಿಗೆ ಹಾಗೂ ಅಭಿಮಾನಿಗಳಿಗೆ ನಷ್ಟವಾಗುತ್ತದೆ. ಏಕೆಂದರೆ ಅಭಿಮಾನಿಗಳು ಕಠಿಣ ಫೈಟ್ ಅನ್ನು ನಿರೀಕ್ಷಿಸುತ್ತಾರೆ ಎಂದು ಶಾಸ್ತ್ರಿ ಹೇಳಿದ್ದಾರೆ.

''ಏಕೆಂದರೆ ಟೆಸ್ಟ್ ಕ್ರಿಕೆಟ್ ಎಂದರೇನು? ಇದು ನಿಮ್ಮನ್ನು ಪರೀಕ್ಷಿಸುತ್ತದೆ ಮತ್ತು ಅದಕ್ಕಾಗಿ ನಿಮಗೆ ಗುಣಮಟ್ಟದ ಅಗತ್ಯವಿದೆ. ಗುಣಮಟ್ಟವಿಲ್ಲದಿದ್ದರೆ ಅದನ್ನು ಯಾರು ನೋಡುತ್ತಾರೆ? ಎದುರಾಳಿ ಬಲಿಷ್ಠವಾಗಿರದಿದ್ರೆ ವಿರೋಧವು ಸರಿಯಾಗಿಲ್ಲದಿದ್ದರೆ ನೀವು ಮೂರು ದಿನದ ಪಂದ್ಯಗಳನ್ನು, ಎರಡು ದಿನದ ಆಟಗಳನ್ನು ಹೊಂದಲಿದ್ದೀರಿ'' ಎಂದು ಮಾಜಿ ಭಾರತದ ಕ್ರಿಕೆಟಿಗ ಅಭಿಪ್ರಾಯ ಪಟ್ಟಿದ್ದಾರೆ.

ಕೆಳ ಕ್ರಮಾಂಕದ ತಂಡಗಳು ಇಂಗ್ಲೆಂಡ್ ಮತ್ತು ಭಾರತದಂತಹ ಕಠಿಣ ಸ್ಥಳಗಳಲ್ಲಿ ಪ್ರವಾಸ ಮಾಡುವುದು ಕಷ್ಟವಾಗಿದೆ. ಏಕೆಂದರೆ ಅಂತಹ ತಂಡಗಳು 3 ದಿನಗಳಿಗಿಂತ ಹೆಚ್ಚು ಕಾಲ ಆಡಲು ಸಾಧ್ಯವಾಗುವುದಿಲ್ಲ ಎಂದು ಶಾಸ್ತ್ರಿ ಹೇಳಿಕೆಯಾಗಿದೆ. ಇದು ಪ್ರಸಾರಕರು ಮತ್ತು ಅಭಿಮಾನಿಗಳಿಗೆ ನೋವುಂಟು ಮಾಡುತ್ತದೆ ಎಂದಿದ್ದಾರೆ.

Story first published: Saturday, July 23, 2022, 16:23 [IST]
Other articles published on Jul 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+