ಕೊಹ್ಲಿ, ಧೋನಿ ಮೇಲೆ ಅಪಾರ ಗೌರವವಿದೆ: ಆರೊನ್ ಫಿಂಚ್

ಮೆಲ್ಬೋರ್ನ್, ಏಪ್ರಿಲ್ 30: ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ತಂಡದ ನಾಯಕ ಆರೊನ್ ಫಿಂಚ್, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಎಂ.ಎಸ್ ಧೋನಿ ಅವರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಕಳೆದ ಮಾರ್ಚ್‌ನಲ್ಲಿಇಮಡಿಯನ್ ಪ್ರೀಮಿಯರ್ ಲೀಗ್ 2019ರ ಆರಂಭಕ್ಕೂ ಮೊದಲು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಕ್ರಿಕೆಟ್ ಸರಣಿಯಲ್ಲಿ ಫಿಂಚ್ ನಾಯಕತ್ವದ ಆಸೀಸ್ ಪಡೆ ಸರಣಿ ಜಯ ದಾಖಲಿಸಿತ್ತು. ಈ ಸಂದರ್ಭದಲ್ಲಿ ವಿರಾಟ್ ಮತ್ತು ಧೋನಿ ತಮ್ಮ ಜರ್ಸಿಯನ್ನು ಉಡುಗೊರೆಯಾಗಿ ಫಿಂಚ್‌ಗೆ ನೀಡಿದ್ದರು.
ಈ ಜರ್ಸಿಗಳೊಂದಿಗೆ ಭಾನುವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶ ಪ್ರಕಟಿಸಿರುವ ಫಿಂಚ್, "ಥ್ಯಾಂಕ್ಯೂ ವಿರಾಟ್ ಕೊಹ್ಲಿ ಮತ್ತು ಎಂ.ಎಸ್ ಧೋನಿ. ಭಾರತ ವಿರುದ್ಧದ ಕಡೆಯ ಏಕದಿನ ಸರಣಿ ವೇಳೆ ನಿಮ್ಮಿಬ್ಬರಿಂದಲೂ ಜರ್ಸಿ ಸ್ವೀಕರಿಸಿರುವುದು ನನ್ನ ಅದೃಷ್ಟ. ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಬಗ್ಗೆ ನನಗೆ ಅಪಾರ ಗೌರವವಿದೆ,'' ಎಂದು ಬರೆದುಕೊಂಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಂಬರುವ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5ರಂದು ಮೊದಲ ಪಂದ್ಯವನ್ನಾಡಲಿದ್ದು, ಜೂನ್ 9ರಂದು ತನ್ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೈಪೋಟಿ ನಡೆಸಲಿದೆ.
ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಗೆಲ್ಲುವ ಹಾಟ್ ಫೇವರಿಟ್‌ಗಳಾಗಿವೆ. ಅದರಲ್ಲೂ ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ನಿಷೇಧ ಶಿಕ್ಷೆಯಿಂದ ಹೊರ ಬಂದಿರುವ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ಸೇವೆಯೂ ಲಭ್ಯವಾಗಿರುವುದು ಆನೆ ಬಲ ತಂದುಕೊಟ್ಟಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications