Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಾಹೀನ್ ಅಫ್ರಿದಿ ಮೂರನೇ ಟೆಸ್ಟ್‌ನಲ್ಲಿ ಆಡದಿರಲು ನಿಜವಾದ ಕಾರಣ ಬಹಿರಂಗ, ಸುಳ್ಳು ಹೇಳಿದ ಪಾಕ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಾಕಿಸ್ತಾನ ಮೂರು ಟೆಸ್ಟ್ ಪಂದ್ಯಗಳನ್ನು ಆಡಿತು. ಮೂರನೇ ಟೆಸ್ಟ್‌ ಪಂದ್ಯದಲ್ಲಿ ತಂಡದ ಸ್ಟಾರ್ ವೇಗದ ಬೌಲರ್‌ ಶಾಹೀನ್ ಶಾ ಆಫ್ರಿದಿ ಅವರನ್ನು ಹೊರಕ್ಕೆ ಕೂಡಿಸಿತ್ತು. ಅಲ್ಲದೆ ಮುಂದಿನ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿಯೂ ತಿಳಿಸಿತು. ಆದರೆ ಇದರ ಅಸಲಿಯತ್ತು ಈಗ ಬಹಿರಂಗವಾಗಿದೆ.

ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಆಡದಿರಲು ನಿಜವಾದ ಕಾರಣ ಬಯಲಾಗಿದೆ. ಈ ಬಗ್ಗೆ ಟೀಮ್ ಡೈರೆಕ್ಟರ್‌ ಮೌನ ಮುರಿದಿದ್ದಾರೆ.

The Actual Reason for Shaheen Afridis Absence in Third Test Revealed

ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ ಅವರು ಶಾಹೀನ್ ಅಫ್ರಿದಿ ಅವರು ಫಿಟ್‌ ಇಲ್ಲದ ಕಾರಣ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ಆಡಿರಲಿಲ್ಲ ಎಂದು ಹೇಳಿದ್ದಾರೆ. ಇಂತಹ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನವು ತನ್ನ ಮುಂಚೂಣಿಯ ಬೌಲರ್‌ಗಳನ್ನು ಆಡುವ 11ರ ಭಾಗವಾಗಿ ಏಕೆ ಮಾಡಲಿಲ್ಲ ಎಂಬ ಪ್ರಶ್ನೆಗಳು ಈ ಹಿಂದೆ ಎದ್ದಿದ್ದವು.

ವಾಸಿಂ ಅಕ್ರಮ್‌ನಿಂದ ಹಿಡಿದು ವಕಾರ್ ಯೂನಿಸ್‌ವರೆಗೆ ಎಲ್ಲರೂ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಶಾಹೀನ್ ಅಫ್ರಿದಿಯನ್ನು ನೋಡದೆ ಆಶ್ಚರ್ಯಚಕಿತರಾದರು. ಶಾಹೀನ್ ಅವರಂತಹ ಪ್ರಮುಖ ಬೌಲರ್ ಆಡುವ 11 ರ ಭಾಗವಾಗದಿದ್ದಾಗ, ಗೆಲುವು ಹೇಗೆ ಸಾಧಿಸಬಹುದು ಎಂದು ಅನುಭವಿ ಆಟಗಾರರು ಹೇಳುತ್ತಿದ್ದರು.

ಮೊದಲೆರಡು ಪಂದ್ಯಗಳಲ್ಲಿ ಶಹೀನ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಹಫೀಜ್ ಹೇಳಿದ್ದಾರೆ. ಶಾಹೀನ್ ಅಫ್ರಿದಿ ಕೂಡ ಗರಿಷ್ಠ ಸಂಖ್ಯೆಯ ಓವರ್‌ಗಳನ್ನು ಬೌಲ್ ಮಾಡಿದರು. ಆದರೆ ಮೂರನೇ ಟೆಸ್ಟ್‌ಗೂ ಮುನ್ನ ತಾನು ಫಿಟ್‌ ಆಗಿಲ್ಲ ಎಂದು ಹೇಳಿದ್ದರು. ಅವರು ಹೇಳಿದನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹಫೀಜ್ ತಿಳಿಸಿದ್ದಾರೆ.

The Actual Reason for Shaheen Afridis Absence in Third Test Revealed

ಅಫ್ರಿದಿ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ 100 ಓವರ್‌ಗಳ ಸಮೀಪ ಬೌಲಿಂಗ್ ಮಾಡಿದ್ದರು. ಹಫೀಜ್, "ಯಾರಾದರೂ ತಾನು ಫಿಟ್ ಅಲ್ಲ ಎಂದು ಭಾವಿಸಿದರೆ. ಅವರು ತಂಡಕ್ಕೆ ಅತ್ಯುತ್ತಮವಾದುದನ್ನು ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದು ಕಠಿಣ ನಿರ್ಧಾರವಾಗಿತ್ತು. ಆದರೆ ಈ ನಿರ್ಧಾರ ಆಟಗಾರರು ಮತ್ತು ತಂಡಕ್ಕೆ ಅಗತ್ಯವಾಗಿತ್ತು. ನಾವು ಯಾವುದೇ ಆಟಗಾರನನ್ನು ಪಣಕ್ಕಿಟ್ಟು ಆಡಲು ಸಾಧ್ಯವಿಲ್ಲ ಎಂದಿದ್ದಾರೆ.

ಜನವರಿ 12 ರಿಂದ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಕಾರಣ ಶಾಹೀನ್ ಆಫ್ರಿದಿ ಕೊನೆಯ ಟೆಸ್ಟ್‌ನಲ್ಲಿ ಭಾಗವಹಿಸಲಿಲ್ಲ ಎಂಬ ಆರೋಪವೂ ಇತ್ತು. ಆದರೆ, ಅಫ್ರಿದಿ ಆಡದಿರಲು ಅವರು ಫಿಟ್ ಆಗಿರದೇ ಇರುವುದೇ ಕಾರಣ ಎಂದು ಹಫೀಜ್ ಸ್ಪಷ್ಟಪಡಿಸಿದ್ದಾರೆ.

ಶಾಹೀನ್ ಅನುಪಸ್ಥಿತಿಯಲ್ಲಿ, ಅಮೀರ್ ಜಮಾಲ್ ಪ್ಲೇಯಿಂಗ್ 11 ರಲ್ಲಿ ಆಡಲು ಅವಕಾಶ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಜಮಾಲ್ ಅದ್ಭುತ ಪ್ರದರ್ಶನ ನೀಡಿ 82 ರನ್ ಗಳಿಸಿ 6 ವಿಕೆಟ್ ಪಡೆದರು. ಇದರ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಪಾಕಿಸ್ತಾನ 0-3 ಅಂತರದಲ್ಲಿ ಕಳೆದುಕೊಂಡಿತ್ತು.

Story first published: Saturday, January 6, 2024, 17:51 [IST]
Other articles published on Jan 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+