IND vs SA: ವೇಗದ ಬೌಲರ್ ಶಮಿ ಟೆಸ್ಟ್ ಆಡುವುದು ಡೌಟ್, ಪ್ರಸಿದ್ಧಗೆ ಅವಕಾಶ ಸಾಧ್ಯತೆ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಆಡುವ ಡೌಟ್ ಎನ್ನಲಾಗುತ್ತಿದೆ. ಕ್ರಿಕ್‌ಬಜ್ ವರದಿಯ ಪ್ರಕಾರ, ಶಮಿ ಪಾದದ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಬಹುದು. 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಿಂದ ನಡೆಯಲಿದೆ.
ನಾಯಕ ರೋಹಿತ್ ಶರ್ಮಾ ಸೇರಿದಂತೆ ಆಟಗಾರರ ಕೊನೆಯ ಗುಂಪು ಶುಕ್ರವಾರ (ಡಿಸೆಂಬರ್ 15) ಜೋಹಾನ್ಸ್‌ಬರ್ಗ್‌ಗೆ ತೆರಳಲಿದೆ. ಆದರೆ 33 ವರ್ಷದ ವೇಗದ ಬೌಲರ್ ಶಮಿ ಅವರು ಈ ವೇಳೆ ತಂಡದ ಜೊತೆ ಇರುವುದಿಲ್ಲ. ಇದುವರೆಗೂ ಬಿಸಿಸಿಐ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಶಮಿ ಔಟಾದರೆ ಅವರ ಜಾಗಕ್ಕೆ ಪ್ರಸಿದ್ಧ್ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಶಮಿ ಆಡುವುದು ಅನುಮಾನ ಎಂದರೆ ಪ್ರಸಿದ್ಧ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು.

ತಂಡವನ್ನು ಪ್ರಕಟಿಸುವ ವೇಳೆಗೆ ಶಮಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಸಿಸಿಐ ಹೇಳಿತ್ತು. ರೋಹಿತ್ ಶರ್ಮಾ ಅವರೊಂದಿಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ ಮತ್ತು ಹರ್ಷಿತ್ ರಾಣಾ ನಿರ್ಗಮಿಸಲಿದ್ದಾರೆ. ಈ ಆಟಗಾರರು ದುಬೈನಿಂದ ದಕ್ಷಿಣ ಆಫ್ರಿಕಾಕ್ಕೆ ಹಾರಲಿದ್ದಾರೆ.
ನವೆಂಬರ್ 30 ರಂದು ದಕ್ಷಿಣ ಆಫ್ರಿಕಾಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿತ್ತು. ಇದೇ ವೇಳೆ ಶಮಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿತ್ತು.

ಎನ್‌ಗಿಡಿ ಮತ್ತು ರಬಾಡಗೆ ಗಾಯ
ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳಾದ ಲುಂಗಿ ಎನ್‌ಗಿಡಿ ಮತ್ತು ಕಗಿಸೊ ರಬಾಡ ಕೂಡ ಗಾಯದಿಂದ ಇನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇಬ್ಬರೂ ವೇಗಿಗಳು ಗಾಯದಿಂದ ಬಳಲುತ್ತಿದ್ದಾರೆ. ಇವರಿಬ್ಬರ ಆಟದ ಬಗ್ಗೆ ಅನುಮಾನವಿದೆ. ವೇಗದ ಬೌಲರ್ ಎನ್ರಿಕ್ ನೋರ್ಟ್ಯಾ ಅವರನ್ನು ಈಗಾಗಲೇ ತಂಡಕ್ಕೆ ಸೇರಿಸಿಕೊಳ್ಳಲಾಗಿಲ್ಲ, ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡದ ಟೆಸ್ಟ್ ಪ್ರದರ್ಶನ ಉತ್ತಮವಾಗಿಲ್ಲ. ಟೀಂ ಇಂಡಿಯಾಗೆ ಇದುವರೆಗೂ ದಕ್ಷಿಣ ಆಫ್ರಿಕಾದಲ್ಲಿ ಒಂದೂ ಟೆಸ್ಟ್ ಸರಣಿ ಗೆದ್ದಿಲ್ಲ. ಆಫ್ರಿಕಾದ ಮೈದಾನದಲ್ಲಿ ತಂಡ ಇದುವರೆಗೆ 8 ಟೆಸ್ಟ್ ಸರಣಿಗಳನ್ನು ಆಡಿದೆ. ಒಂದು ಸರಣಿ ಮಾತ್ರ ಡ್ರಾ ಆಗಿದ್ದರೆ, ಭಾರತ 7ರಲ್ಲಿ ಸೋಲನುಭವಿಸಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications