Shamar Joseph: ಅಂದು ಕೂಲಿ, ಸೆಕ್ಯುರಿಟಿ ಗಾರ್ಡ್: ಮನದರಿಸಿಯ ಸಹಾಯದಿಂದ ಇಂದು ಅಪಾಯಕಾರಿ ಬೌಲರ್
ಪ್ರತಿಯೋಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಪುರುಷ ದೊಡ್ಡ ಸಾಧನೆ ಮಾಡಿದಾಗ, ಅವನ ಸಾಧನೆಯನ್ನು ಕಂಡು ಹಿರಿ ಹಿರಿ ಹಿಗ್ಗಿ ತಾನೇ ಆ ಸಾಧನೆ ಮಾಡಿದಷ್ಟು ಖುಷಿ ಪಡುವ ಜೀವ.. ಹೀಗೆ ಒಂದು ಹೆಣ್ಣಿನ ಸಹಾಯದಿಂದಲೇ ತನ್ನ ನೆಚ್ಚಿನ ಕ್ರೀಡೆಯನ್ನು ಆರಿಸಿಕೊಂಡು, ಆಸ್ಟ್ರೇಲಿಯಾದಲ್ಲಿ ವೆಸ್ಟ್ ಇಂಡೀಸ್ ಗೆಲುವಿಗೆ ಕಾರಣನಾದ ಆಟಗಾರ.
24 ವರ್ಷದ ಯುವ ಆಟಗಾರನಿಗೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ವೆಸ್ಟ್ ಇಂಡೀಸ್ ಮಣೆ ಹಾಕಿತು. ಸಿಕ್ಕ ಅವಕಾಶವನ್ನೇ ಸದು ಪಯೋಗ ಪಡಿಸಿಕೊಂಡು ಕಾಂಗರೂ ಪಡೆಯ ಸದ್ದಡಗಿಸಿದ ಕೀರ್ತಿ ವಿಂಡೀಸ್ ತಂಡದ ಯುವ ವೇಗಿ ಶಮರ್ ಜೋಸೆಫ್ ಅವರಿಗೆ ಸಲ್ಲುತ್ತದೆ. ಈ ಆಟಗಾರನ ಪರಿಚಯ ಕೆಲವು ದಿನಗಳ ಹಿಂದೆ ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ ಕ್ರೀಡೆಯನ್ನು ಇಷ್ಟ ಪಡುವ ಅಭಿಮಾನಿಗಳ ಕಿವಿಯ ಪರದೆಗೆ ಈ ಹೆಸರು ಕೇಳಿಸಿಕೊಳ್ಳುತ್ತಿದ್ದಂತೆ ರೋಮಾಂಚನವಾಗುತ್ತದೆ.

ಆರಂಭಿಕ ಜೀವನ
ಗಬ್ಬಾದಲ್ಲಿ ಕಾಂಗರೂಗಳ ವಿರುದ್ಧ ಏಳು ವಿಕೆಟ್‌ಗಳನ್ನು ಕಬಳಿಸುವ ಮೂಲಕ 27 ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ವೆಸ್ಟ್ ಇಂಡೀಸ್ ಅನ್ನು ಗೆಲುವಿನತ್ತ ಮುನ್ನಡೆಸಿದ ಶಮರ್ ಜೋಸೆಫ್‌ಗೆ ಕ್ರಿಕೆಟಿಗನಾಗುವುದು ತುಂಬಾ ಕಷ್ಟಕರವಾಗಿತ್ತು. ಮೊದಲು ಕೂಲಿ ಮಾಡಿ ನಂತರ ಸೆಕ್ಯೂರಿಟಿ ಗಾರ್ಡ್ ಆಗಿಯೂ ಕೆಲಸ ಮಾಡಿದ್ದ ಅವರು, ಕ್ರಿಕೆಟ್ ಆಟಗಾರನಾಗುವ ಕನಸನ್ನು ಬಿಡಲೇ ಇಲ್ಲ.
ಶಮರ್ ಜೋಸೆಫ್ ಬಳಿ ಆರಂಭದಲ್ಲಿ ಬೌಲಿಂಗ್ ಅಭ್ಯಾಸ ಮಾಡಲು ಕ್ರಿಕೆಟ್ ಬಾಲ್ ಕೂಡ ಇರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಅವರು ಪೇರಲೆ ಮತ್ತು ನಿಂಬೆಯೊಂದಿಗೆ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದರು. ಶಮರ್ ಜೋಸೆಫ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೊದಲು ಸಾಕಷ್ಟು ಹೋರಾಟ ನಡೆಸಿದ್ದಾರೆ.

ಬಡತನದಲ್ಲೇ ಅರಳಿದ ಪ್ರತಿಭೆ
ಶಮರ್ ಜೋಸೆಫ್ ಅವರು ಗಯಾನಾದ ಬರಾಕಾರದಲ್ಲಿ 31 ಆಗಸ್ಟ್ 1999 ರಂದು ಜನಿಸಿದರು. 2018 ರವರೆಗೆ ಅವರ ಗ್ರಾಮದಲ್ಲಿ ಇಂಟರ್ನೆಟ್ ಇರಲಿಲ್ಲ. ಶಮರ್ ಹಳೆಯ ಪಂದ್ಯಗಳ ಮುಖ್ಯಾಂಶಗಳನ್ನು ನೋಡುವ ಮೂಲಕ ತಮ್ಮ ಬೌಲಿಂಗ್ ಕಲಿತರು. ವೆಸ್ಟ್ ಇಂಡೀಸ್ ನ ಮಾಜಿ ಶ್ರೇಷ್ಠ ಆಟಗಾರರಾದ ಕರ್ಟ್ಲಿ ಆಂಬ್ರೋಸ್ ಮತ್ತು ಕರ್ಟ್ನಿ ವಾಲ್ಷ್ ಅವರು ಶಮರ್ ಜೋಸೆಫ್ ಅವರ ಆರಾಧ್ಯ ದೈವಗಳು. ಶಮರ್ ತನ್ನ ಹಳೆಯ ಪಂದ್ಯಗಳನ್ನು ನೋಡಿದ ನಂತರವೇ ಬಿರುಗಾಳಿಯ ಬೌಲರ್ ಆದರು.
ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡ ಸಾಧಕ
ಶಮರ್ ಜೋಸೆಫ್ ಅವರಿಗೆ ವೃತ್ತಿಪರ ಕ್ರಿಕೆಟಿಗರಾಗುವುದು ಸುಲಭವಾಗಿರಲಿಲ್ಲ. ಶಮರ್ ಅವರದು ಬಡ ಕುಟುಂಬ. ಅಂತಹ ಪರಿಸ್ಥಿತಿಯಲ್ಲಿ, ಹಣಕಾಸಿನ ಅಡಚಣೆಯಿಂದಾಗಿ, ಅವರು ಬಾಲ್ಯದಿಂದಲೂ ತಂದೆಯೊಂದಿಗೆ ಕೆಲಸ ಮಾಡಬೇಕಾಯಿತು. ಶಮರ್ ಅವರು ಕೂಲಿ ಕೆಲಸ ಮಾಡಿದರು ಮತ್ತು ನಂತರ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದರು, ಇದರಿಂದ ಅವರು ತಮ್ಮ ಕುಟುಂಬವನ್ನು ಆರ್ಥಿಕ ಬಿಕ್ಕಟ್ಟಿನಿಂದ ಮೇಲೆತ್ತಿದರು.
ಶಮರ್ ಜೋಸೆಫ್ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿತ್ತು. ಹೀಗಿರುವಾಗ ಕ್ರಿಕೆಟಿಗನಾಗುವ ಅವರ ಕನಸು ದೂರವಾಗುತ್ತಿತ್ತು. ಈ ಸಮಯದಲ್ಲಿ, ಒಬ್ಬ ಹುಡುಗಿ ಅವನ ಜೀವನದಲ್ಲಿ ಬಂದಳು ಮತ್ತು ಅವರ ಇಡೀ ಜೀವನವನ್ನು ಬದಲಾಯಿಸಿದಳು. ಶಮರ್ ತನ್ನ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ನಂತರ ಸೆಕ್ಯುರಿಟಿ ಗಾರ್ಡ್‌ನ ಕೆಲಸವನ್ನು ಬಿಟ್ಟು ಕ್ರಿಕೆಟ್‌ನತ್ತ ಗಮನ ಹರಿಸಲು ಪ್ರಾರಂಭಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬರುವುದು ಸುಲಭದ ಮಾತಲ್ಲ. ಇದಕ್ಕಾಗಿ, ಶಮರ್‌ಗೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಸಹಾಯ ಮಾಡಿದರು. ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಶಮರ್ ಜೋಸೆಫ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದರು. ಇದಾದ ನಂತರ ಶಮರ್ ಹಿಂತಿರುಗಿ ನೋಡಲಿಲ್ಲ ಮತ್ತು ಅದ್ಭುತ ಪ್ರದರ್ಶನವನ್ನು ಮುಂದುವರೆಸಿದರು. ಇದಾದ ಬಳಿಕ ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದು ಇತಿಹಾಸ ನಿರ್ಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications