ಪಾಕ್ ಅಭಿಮಾನಿಗೆ 2011ರಿಂದಲೂ ವಿಶ್ವಕಪ್ ಟಿಕೆಟ್ ಕೊಡಿಸುತ್ತಿದ್ದಾರೆ ಧೋನಿ!

ನವದೆಹಲಿ, ಜೂನ್ 14: ಮೊಹಾಲಿ ಸ್ಟೇಡಿಯಂನಲ್ಲಿ 2011ರಲ್ಲಿ ವಿಶ್ವಕಪ್ ಸೆಮಿಫೈನಲ್‌ಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆಗ ಹೇಗೋ ಕೂಲ್ ಕ್ಯಾಪ್ಟನ್ ಎಂಎಸ್ ಗೆ ಕರಾಚಿಯಲ್ಲಿ ಜನಿಸಿದ ಚಿಕಾಗೋ ನಿವಾಸಿ ಮೊಹಮ್ಮದ್ ಬಶೀರ್ ಅವರ ಪರಿಚಯವಾಗಿತ್ತು. ಅಲ್ಲಿಂದ ಇಲ್ಲೀವರೆಗೂ ಇಬ್ಬರ ಬಾಂಧವ್ಯ ಬಂಧ ಗಟ್ಟಿಯಾಗುತ್ತಲೇ ಸಾಗಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ವಿಶೇಷವೆಂದರೆ 'ಚಾಚಾ ಚಿಕಾಗೋ' ಎಂದು ಕರೆಯಲ್ಪಡುವ ಈ ಅಜ್ಜನಿಗೆ ಪರಿಚಯವಾದಾಗಿನಿಂದಲೂ ಧೋನಿ, ಭಾರತ vs ಪಾಕಿಸ್ತಾನ ಪಂದ್ಯಗಳ ವಿಶ್ವಕಪ್ ಟಿಕೆಟ್ ಕೊಡಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಭಾರತ-ಪಾಕ್ ಪಂದ್ಯ ವೀಕ್ಷಿಸಲು ಓಲ್ಡ್ ಟ್ರಾಫರ್ಡ್ ಸ್ಟೇಡಿಯಂಗೆ ಬಂದಿದ್ದ ಬಶೀರ್ ಮಾತಿಗೆ ಸಿಕ್ಕರು.
'ನೆನ್ನೆತಾನೆ (ಜೂನ್ 13) ಇಲ್ಲಿಗೆ ತಲುಪಿದೆ. 800-900 ಪೌಂಡ್ (ಸುಮಾರು 70, 80 ಸಾವಿರ ರೂ.) ಕೊಟ್ಟು ಒಂದು ಟಿಕೆಟ್ ಖರೀದಿಸಲು ಇಲ್ಲಿ ಸಾಕಷ್ಟು ಮಂದಿ ತಯಾರಿದ್ದಾರೆ. ನನಗೆ ಚಿಕಾಗೋಗೆ ವಾಪಸ್ಸಾಗಲು ಟಿಕೆಟಿನ ದರವೂ ಸರಿ ಸುಮಾರು ಇಷ್ಟೇನೆ. ಆದರೆ ಟಿಕೆಟ್‌ಗಾಗಿ ನಾನು ಪರದಾಡುವಂತಿಲ್ಲ. ಧೋನಿಗೆ ನನ್ನ ಧನ್ಯವಾದಗಳು' ಎಂದು ಪಿಟಿಐ ಜೊತೆ ಮಾತನಾಡುತ್ತಾ ಬಶೀರ್ ಹೇಳಿದರು.

'ಧೋನಿ ತುಂಬಾ ಬ್ಯುಸಿ ಇರೋದ್ರಿಂದ ನಾನು ಅವರಿಗೆ ಕರೆ ಮಾಡೋದಿಲ್ಲ. ಆದ್ರೆ ಟೆಕ್ಸ್ಟ್ ಮೆಸೇಜ್ ಮೂಲಕ ಸಂಪರ್ಕದಲ್ಲಿದ್ದೇನೆ. ಧೋನಿ ನನಗೆ ಈ ಬಾರಿಯೂ ಟಿಕೆಟ್ ಒದಗಿಸುವ ಭರವಸೆ ನೀಡಿದ್ದಾರೆ. ಧೋನಿಯೊಬ್ಬ ಶ್ರೇಷ್ಠ ವ್ಯಕ್ತಿತ್ವವುಳ್ಳವರು' ಎಂದು ಬಶೀರ್ ಖುಷಿ ಹಂಚಿಕೊಂಡರು.
ಚಿಕಾಗೋದಲ್ಲಿ ಸ್ವಂತ ರೆಸ್ಟೋರೆಂಟ್ ಇಟ್ಟುಕೊಂಡಿರುವ ಚಾಚಾ ಚಿಕಾಗೋಗೆ ಈಗ 63ರ ಹರೆಯ. ಅವರ ಬಳಿ ಅಮೆರಿಕಾ ಪಾಸ್‌ಪೋರ್ಟ್ ಕೂಡ ಇದೆ. ಇತ್ತಂಡಗಳ ಪಂದ್ಯಗಳ ವೇಳೆ ಭಾರತ-ಪಾಕಿಸ್ತಾನ ರಾಷ್ಟ್ರ ಧ್ವಜಗಳನ್ನು ಒಂದಕ್ಕೊಂದು ಅಂಟಿಸಿ ಎರಡೂ ದೇಶಗಳ ನಡುವೆ ಸಾಮರಸ್ಯದ ಸಂದೇಶ ಸಾರುತ್ತ ನಿಂತಿರುವ ಬಶೀರ್ ಕಂಡರೆ ಧೋನಿಗೂ ಪ್ರೀತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications