ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹೆಸರಲ್ಲಿ 'ವಾಷಿಂಗ್ಟನ್' ಬಂದಿದ್ಹೇಗೆ?!

ನವದೆಹಲಿ, ಆಗಸ್ಟ್ 5: ಇತ್ತೀಚಿನ ದಿನಗಳಲ್ಲಿ ವಾಷಿಂಗ್ಟನ್ ಸುಂದರ್ ಹೆಚ್ಚು ಸುದ್ದಿಯಲ್ಲಿರುವ ಹೆಸರು. ಕ್ರಿಕೆಟ್ ಪರಿಣಿತರು, ಭಾರತದ ಮಾಜಿ ಆಟಗಾರರೆಲ್ಲ ಸುಂದರ್ ಬಗ್ಗೆ ಮಾತನಾಡುತ್ತಿರುವುದು ಮಾಧ್ಯಮಗಳಲ್ಲಿ ಕಾಣಿಸುತ್ತಿದೆ. ಇವೆಲ್ಲದ್ದಕ್ಕಿಂತ ಹೆಚ್ಚಾಗಿ ಯುವ ವೇಗಿ 'ವಾಷಿಂಗ್ಟನ್ ಸುಂದರ್' ಅವರ ಭಿನ್ನ ಹೆಸರೂ ಚರ್ಚೆಯ ವಸ್ತುವಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತದ ಟಿ20 ತಂಡದಲ್ಲಿ ಮೈದಾನಕ್ಕಿಳಿದಿದ್ದ ವಾಷ್ಟಿಂಗ್ಟನ್ ಸುಂದರ್, ಆಡಿರುವ ಎರಡೂ ಪಂದ್ಯಗಳಲ್ಲಿ ಅಮೂಲ್ಯ ಎರಡು ವಿಕೆಟ್‌ಗಳೊಂದಿದೆ ತಂಡಕ್ಕೆ ನೆರವಾಗಿದ್ದರು. ಟೀಮ್ ಇಂಡಿಯಾ ಪರ ಸುಂದರ್ ವಿಕೆಟ್ ಪಡೆದಾಗ ಅವರ ಹೆಸರಿಗಂಟಿರುವ 'ವಾಷಿಂಗ್ಟನ್'ನ ಬಗ್ಗೆ ಒಂದಿಷ್ಟು ಮಂದಿ ಕುತೂಹಲದಿಂದ ಪ್ರಶ್ನಿಸಿದ್ದರು ಕೂಡ. ಹಾಗಾದರೆ ವಾಷಿಂಗ್ಟನ್ ಸುಂದರ್ ಹೆಸರಿನಲ್ಲಿ ಷಾಷಿಂಗ್ಟನ್ ಬಾಂದಿದ್ಹೇಗೆ?
ಹತ್ತನೇ ಆವೃತ್ತಿಯ ಐಪಿಎಲ್‌ನಲ್ಲಿ ವಾಷಿಂಗ್ಟನ್ ಸುಂದರ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಮೊದಲ ಬಾರಿ ಮೈದಾನಕ್ಕಿಳಿದಿದ್ದಾಗ ಅವರ ವಿಚಿತ್ರ ಹೆಸರಿನತ್ತ ಎಲ್ಲರ ಚಿತ್ತ ಹರಿದಿತ್ತು. ಆವತ್ತು ಸುಂದರ್ ತಂದೆ ಆ ಹೆಸರಿನ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದರು. ಆದರೆ ಇಂದಿಗೂ ಕೆಲವರಿಗೆ ಆ ಹೆಸರಿನ ಕತೆ ಗೊತ್ತಿಲ್ಲ.

ತಂದೆಯಿಟ್ಟ ಹೆಸರು
ವಾಷಿಂಗ್ಟನ್ ಸುಂದರ್ ಹೆಸರಿನಲ್ಲಿ 'ವಾಷಿಂಗ್ಟನ್' ಸೇರಿಸಿದ್ದು ಅವರ ತಂದೆ ಎಂ ಸುಂದರ್. ಎಂ ಸುಂದರ್ ಕೂಡ ಕ್ರಿಕೆಟರೆ. ಆದರೆ ತಮಿಳುನಾಡು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರಲಿಲ್ಲ. ಎಂ ಸುಂದರ್‌ಗೊಬ್ಬರು ಗಾಡ್ ಫಾದರ್ ಇದ್ದರು. ಪಿಡಿ ವಾಷಿಂಗ್ಟನ್ ಅವರು ಹೆಸರು.

ದೊಡ್ಡ ಕ್ರಿಕೆಟ್ ಅಭಿಮಾನಿ
ಪಿಡಿ ವಾಷಿಂಗ್ಟನ್ ಒಬ್ಬ ದೊಡ್ಡ ಕ್ರಿಕೆಟ್ ಅಭಿಮಾನಿ. ಸುಂದರ್ ಆಟವನ್ನು ಅವರು ಇಷ್ಟಪಡುತ್ತಿದ್ದರು. ಅಲ್ಲದೆ ಶಾಲಾ ಪುಸ್ತಕಗಳನ್ನು ತೆಗೆದುಕೊಡುತ್ತ, ಶಾಲಾ ಶುಲ್ಕ ಪಾವತಿಸುತ್ತ ಸುಂದರ್ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದರು. ಇದರಿಂದ ಸುಂದರ್‌ಗೆ ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳಲೂ ಸಹಾಯವಾಗಿತ್ತು.

ಗಾಡ್ ಫಾದರ್ ಹೆಸರು ಪುತ್ರನಿಗೆ
1999ರಲ್ಲಿ ಪಿಡಿ ವಾಷಿಂಗ್ಟನ್ ಸಾವನ್ನಪ್ಪಿದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಸುಂದರ್‌ಗೆ ಗಂಡು ಮಗು ಜನಿಸಿತು. ತನ್ನ ಗಾಡ್ ಫಾದರ್ ಹೆಸರನ್ನು ತನ್ನ ಪುತ್ರನಿಗಿಡಲು ಸುಂದರ್ ಬಯಸಿದರು. ಹೀಗೆ ವಾಷಿಂಗ್ಟನ್ ಸುಂದರ್ ಹೆಸರಿನಲ್ಲಿ 'ವಾಷಿಂಗ್ಟನ್' ಸೇರಿಕೊಂಡಿತು.

17ನೇ ವಯಸ್ಸಿನಲ್ಲಿ ಐಪಿಎಲ್‌ಗೆ
17ನೇ ಹರೆಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಪಾದಾರ್ಪಣೆ ಮಾಡಿದ್ದ ವಾಷಿಂಗ್ಟನ್ ಸುಂದರ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ. 2017 ಡಿಸೆಂಬರ್‌ನಲ್ಲಿ ಸುಂದರ್, ಶ್ರೀಲಂಕಾ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications