For Quick Alerts
ALLOW NOTIFICATIONS  
For Daily Alerts
 

ಕಾಲಿಗೆ ಹಾಕಿದ್ದ ಹೊಲಿಗೆ ತೆಗೆಯಲಾಗಿದೆ, ಶಮಿ ಮೈದಾನಕ್ಕೆ ಇಳಿಯುವ ಬಗ್ಗೆ ಇಲ್ಲಿದೆ ಅಪ್‌ಡೇಟ್‌

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿಶ್ವಕಪ್ 2023 ರಿಂದ ಮೈದಾನದಿಂದ ದೂರ ಉಳಿದಿದ್ದಾರೆ. ಶಮಿ ಗಾಯಗೊಂಡಿದ್ದರು. ಇದೀಗ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಶಮಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಈಗ ಹೊಲಿಗೆಗಳನ್ನು ತೆಗೆಯಲಾಗಿದೆ ಎಂದು ಶಮಿ ಹೇಳಿದ್ದಾರೆ. ಅವರು ಮುಂದಿನ ತಯಾರಿ ನಡೆಸುತ್ತಿದ್ದಾರೆ. ಶಮಿ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಆದರೆ ಅವರು ಐಪಿಎಲ್ 2024 ರಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ಕೂಡ ಈ ಬಗ್ಗೆ ಮಾಹಿತಿ ನೀಡಿದೆ.

The stitches on his leg have been removed here s an update on Shami s return to the field

ಶಮಿ ಸಮಾಜಿಕ ತಾಣದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಚೇತರಿಕೆಯ ಪ್ರಗತಿಯ ಕುರಿತು ನಾನು ಅಪ್‌ಡೇಟ್‌ ನೀಡಲು ಬಯಸುತ್ತೇನೆ." ನನ್ನ ಶಸ್ತ್ರಚಿಕಿತ್ಸೆಯಿಂದ 15 ದಿನಗಳು ಕಳೆದಿವೆ. ಮತ್ತು ಇತ್ತೀಚೆಗೆ ಹೊಲಿಗೆಗಳನ್ನು ತೆಗೆದುಹಾಕಲಾಗಿದೆ. ಈಗ ನಾನು ಮುಂದಿನ ಪ್ರಕ್ರಿಯೆಯ ಬಗ್ಗೆ ಯೋಚಿಸುತ್ತಿದ್ದೇನೆ.' ಎಂದು ಶಮಿ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಶಮಿ ಅವರ ಈ ಪೋಸ್ಟ್ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪೋಸ್ಟ್ ಅನ್ನು ಹಂಚಿಕೊಂಡಿದೆ. ಶಮಿ ಶೀಘ್ರ ಗುಣಮುಖರಾಗಲಿ ಎಂದು ಬಿಸಿಸಿಐ ಅಭಿನಂದಿಸಿದೆ. ಇತ್ತೀಚೆಗಷ್ಟೇ ಶಮಿ ಬಗ್ಗೆ ಬಿಸಿಸಿಐ ಮಾಹಿತಿ ನೀಡಿತ್ತು. ಫೆಬ್ರವರಿ 26 ರಂದು ಶಮಿ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಬಿಸಿಸಿಐ ತಿಳಿಸಿತ್ತು. ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಶಮಿ ಐಪಿಎಲ್ 2024 ರಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿತ್ತು.

ಶಮಿ ಗುಜರಾತ್ ಟೈಟಾನ್ಸ್‌ನ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರು. ಅವರು ಆಡದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಶಮಿ ಟೂರ್ನಿಯಲ್ಲಿ ಇದುವರೆಗೆ 110 ಪಂದ್ಯಗಳನ್ನು ಆಡಿದ್ದು 127 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್ ಪಂದ್ಯವೊಂದರಲ್ಲಿ 11 ರನ್ ನೀಡಿ 4 ವಿಕೆಟ್ ಕಬಳಿಸಿರುವುದು ಶಮಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಶಮಿ ಕಳೆದ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಶಮಿ 17 ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 18.64 ಆಗಿತ್ತು.

Story first published: Wednesday, March 13, 2024, 16:06 [IST]
Other articles published on Mar 13, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+