ಈತನ ರೀತಿಯ ಉತ್ಸಾಹಿ ಕ್ರಿಕೆಟಿಗ ಮತ್ತೊಬ್ಬನಿಲ್ಲ; ಭಾರತೀಯನನ್ನು ಕೊಂಡಾಡಿದ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ

ಕ್ರಿಕೆಟ್ ಆಸ್ಟ್ರೇಲಿಯಾದ ನೂತನ ಸಿಇಒ ನಿಕ್ ಹಾಕ್ಲೇ ಬಿಸಿಸಿಐನ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿಯ ಕುರಿತು ಬುಧವಾರ ಮಾತನಾಡಿದ್ದು ಕೊಂಡಾಡಿದ್ದಾರೆ. ಸೌರವ್ ಗಂಗೂಲಿ ಕುರಿತು ಮಾತನಾಡಿದ ನಿಕ್ ಹಾಕ್ಲೇ ಗಂಗೂಲಿ ರೀತಿಯ ಮತ್ತೋರ್ವ ಉತ್ಸಾಹಿ ಕ್ರಿಕೆಟಿಗನನ್ನು ನಾನು ನೋಡೇ ಇಲ್ಲ ಎಂದಿದ್ದಾರೆ.
ಐಪಿಎಲ್ ಟೂರ್ನಿ ವಿಸ್ತರಿಸುವ ಬಿಸಿಸಿಐ ಕನಸಿಗೆ ಐಸಿಸಿ ತಣ್ಣೀರು
ಕಳೆದ ಕೆಲ ವರ್ಷಗಳಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ನಿಕ್ ಹಾಕ್ಲೇ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದ್ದು ಎರಡೂ ಕ್ರಿಕೆಟ್ ಬೋರ್ಡ್‌ಗಳ ನಡುವೆ ಉತ್ತಮ ಸಂಬಂಧ ವೃದ್ಧಿಸಿದೆ. ಮುಂಬರಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಕುರಿತು ಮಾತನಾಡಿರುವ ನಿಕ್ ಹಾಕ್ಲೇ ಅದೇ ಸಮಯದಲ್ಲಿ ಭಾರತ ಮಹಿಳಾ ತಂಡ ಮತ್ತು ಸೌರವ್ ಗಂಗೂಲಿ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಐಪಿಎಲ್ ಮುಂದುವರೆದಾಗ ಚೆನ್ನೈ ತಂಡವನ್ನು ಕಾಡಲಿದೆ ಈ ಗಂಭೀರ ಸಮಸ್ಯೆ
'ಸೌರವ್ ಗಂಗೂಲಿ ನಿಜಕ್ಕೂ ಅತ್ಯದ್ಭುತ ವ್ಯಕ್ತಿ ಹಾಗೂ ತುಂಬಾ ಸರಳ ಸ್ವಭಾವವುಳ್ಳವರು. ಕ್ರಿಕೆಟ್ ಜಗತ್ತಿನಲ್ಲಿಯೇ ಸೌರವ್ ಗಂಗೂಲಿ ರೀತಿಯ ಉತ್ಸಾಹಿ ಕ್ರಿಕೆಟಿಗ ಮತ್ತೊಬ್ಬನಿಲ್ಲ. ಅಂತಹ ವ್ಯಕ್ತಿ ಜೊತೆ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಖುಷಿಯಾಗುತ್ತದೆ. ಇತ್ತೀಚೆಗಷ್ಟೇ ಅವರೊಡನೆ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ ಮುಂಬರುವ ಟೆಸ್ಟ್ ಸರಣಿ ಕುರಿತು ಚರ್ಚಿಸಿದ್ದು ಖುಷಿ ತಂದಿದೆ' ಎಂದು ನಿಕ್ ಹಾಕ್ಲೇ ಗಂಗೂಲಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications