ಟೆಸ್ಟ್ ಕ್ರಿಕೆಟ್‍ನಲ್ಲಿ ಒಮ್ಮೆಯೂ ಶತಕ ಬಾರಿಸದೇ ಅತಿಹೆಚ್ಚು ರನ್ ಕಲೆ ಹಾಕಿರುವ ಇಬ್ಬರು ಕ್ರಿಕೆಟಿಗರಿವರು!

ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಆಟಗಾರರು ಭಿನ್ನವಿಭಿನ್ನವಾದ ದಾಖಲೆಗಳನ್ನು ತಮ್ಮ ಹೆಸರುಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಅತಿಹೆಚ್ಚು ಶತಕ, ಅತಿ ಹೆಚ್ಚು ರನ್ ಹಾಗೂ ಅತಿ ಹೆಚ್ಚು ಅರ್ಧಶತಕಗಳನ್ನು ದಾಖಲಿಸಿದ ಆಟಗಾರ ಯಾರು ಎಂಬ ದಾಖಲೆಗಳ ಕಡೆ ಹೆಚ್ಚಿನ ಗಮನವನ್ನು ನೀಡುತ್ತಿದ್ದು, ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಮ್ಮೆಯೂ ಶತಕ ಬಾರಿಸದೇ ಅತಿ ಹೆಚ್ಚು ರನ್ ಕಲೆ ಹಾಕಿರುವ ಆಟಗಾರರ ದಾಖಲೆ ಕೂಡ ಇದೆ ಎಂಬುದು ಅನೇಕ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರದ ಮಾಹಿತಿ ಎನ್ನಬಹುದು.
ಹೌದು, ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ಆಟಗಾರರು ಶತಕ ಬಾರಿಸದೇ ಅತಿ ಹೆಚ್ಚು ರನ್ ಕಲೆಹಾಕಿದ ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಮ್ಮೆಯೂ ಶತಕ ಬಾರಿಸದೇ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಈ ರೀತಿ ವಿಭಿನ್ನವಾದ ದಾಖಲೆಯನ್ನು ಹೊಂದಿರುವ ಶೇನ್ ವಾರ್ನ್ ಅವರ ಸಾಲಿನಲ್ಲಿ ಹಲವಾರು ಆಟಗಾರರಿದ್ದು, ಇದೀಗ ಸಕ್ರಿಯರಾಗಿರುವ ಆಟಗಾರರ ಪೈಕಿ ಇಬ್ಬರು ಕ್ರಿಕೆಟಿಗರು ಇದೇ ರೀತಿ ಟೆಸ್ಟ್ ಕ್ರಿಕೆಟ್‍ನಲ್ಲಿ ಒಮ್ಮೆಯೂ ಶತಕ ಬಾರಿಸದೇ ಅತಿ ಹೆಚ್ಚು ರನ್ ಕಲೆಹಾಕಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಕೆಳಕಂಡಂತಿದೆ ಓದಿ.

ಟೆಸ್ಟ್ ಕ್ರಿಕೆಟ್‍ನಲ್ಲಿ ಒಮ್ಮೆಯೂ ಶತಕ ಬಾರಿಸದೇ ಹೆಚ್ಚು ರನ್ ಗಳಿಸಿರುವ ಸಕ್ರಿಯ ಆಟಗಾರರು
ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿರುವ ಆಟಗಾರರ ಪೈಕಿ ಇದುವರೆಗೂ ಒಮ್ಮೆಯೂ ಶತಕವನ್ನೇ ಬಾರಿಸದೇ ಅತಿ ಹೆಚ್ಚು ಅಂತರರಾಷ್ಟ್ರೀಯ ಟೆಸ್ಟ್ ರನ್ ಬಾರಿಸಿರುವ ಇಬ್ಬರು ಆಟಗಾರರೆಂದರೆ ಶ್ರೀಲಂಕಾದ ನಿರೋಷನ್ ಡಿಕ್ವೆಲ್ಲ ಮತ್ತು ಆಸ್ಟ್ರೇಲಿಯಾದ ಟಿಮ್ ಪೇನ್. ಹೌದು, ಶ್ರೀಲಂಕಾದ ಆಟಗಾರ ನಿರೋಷನ್ ಡಿಕ್ವೆಲ್ಲಾ ಟೆಸ್ಟ್ ಕ್ರಿಕೆಟ್‍ನಲ್ಲಿ 93 ಇನ್ನಿಂಗ್ಸ್ ಆಡಿದ್ದು, 2735 ರನ್ ಕಲೆಹಾಕಿದ್ದಾರೆ. ಈ ಪೈಕಿ 22 ಅರ್ಧಶತಕಗಳನ್ನು ಬಾರಿಸಿರುವ ನಿರೋಷನ್ ಡಿಕ್ವೆಲ್ಲಾ ಒಮ್ಮೆಯೂ ಸಹ ಶತಕವನ್ನು ಬಾರಿಸಿಲ್ಲ. ಇನ್ನು ಆಸ್ಟ್ರೇಲಿಯಾದ ಟಿಮ್ ಪೇನ್ 57 ಟೆಸ್ಟ್ ಇನ್ನಿಂಗ್ಸ್ ಆಡಿದ್ದು, 1534 ರನ್ ಕಲೆಹಾಕಿದ್ದಾರೆ ಹಾಗೂ ಒಟ್ಟು 9 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಟಿಮ್ ಪೇನ್ ಒಮ್ಮೆಯೂ ಸಹ ಶತಕ ಬಾರಿಸಿಲ್ಲ. ಹೀಗೆ ಈ ಇಬ್ಬರು ಪ್ರಸ್ತುತ ಸಕ್ರಿಯರಾಗಿರುವ ಕ್ರಿಕೆಟಿಗರ ಪೈಕಿ ಒಮ್ಮೆಯೂ ಶತಕ ಬಾರಿಸದೇ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ ಆಟಗಾರರು ಎನಿಸಿಕೊಂಡಿದ್ದಾರೆ.

್ರಿಕೆಟ್ ಇತಿಹಾಸದಲ್ಲಿ ಶತಕ ರಹಿತ ಅತಿ ಹೆಚ್ಚು ಟೆಸ್ಟ್ ರನ್ ದಾಖಲಿಸಿರುವ ಆಟಗಾರರ ಟಾಪ್ 5 ಪಟ್ಟಿ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಶತಕವನ್ನೇ ಬಾರಿಸದೇ ಅತಿ ಹೆಚ್ಚು ರನ್ ಕಲೆ ಹಾಕಿರುವ ಆಟಗಾರರ ಟಾಪ್ 5 ಪಟ್ಟಿ ಕೆಳಕಂಡಂತಿದೆ.
1. ಶೇನ್ ವಾರ್ನ್ ( ಆಸ್ಟ್ರೇಲಿಯಾ ) - 3154 ರನ್‌ಗಳು
2. ನಿರೋಷನ್ ಡಿಕ್ವೆಲ್ಲಾ ( ಶ್ರೀಲಂಕಾ ) - 2735 ರನ್‌ಗಳು*
3. ಚೇತೇಂದ್ರ ಪ್ರಸಾದ್ ಸಿಂಗ್ ಚೌಹಾಣ್ (ಭಾರತ) - 2084 ರನ್
4. ಡೆರಿಕ್ ಲಾನ್ಸ್ ಮುರ್ರೆ ( ವೆಸ್ಟ್ ಇಂಡೀಸ್ ) - 1993 ರನ್
5. ಟಿಮ್ ಸೌಥಿ ( ನ್ಯೂಜಿಲೆಂಡ್ ) - 1855 ರನ್‌ಗಳು

ಭಾರತದ ಪರ ಶತಕರಹಿತ ಅತಿ ಹೆಚ್ಚು ಟೆಸ್ಟ್ ರನ್ ಬಾರಿಸಿದರು
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಮ್ಮೆಯೂ ಶತಕ ಬಾರಿಸದೇ ಅತಿ ಹೆಚ್ಚು ರನ್ ಕಲೆಹಾಕಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಚೇತೇಂದ್ರ ಪ್ರಸಾದ್ ಸಿಂಗ್ ಚೌಹಾಣ್ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 40 ಟೆಸ್ಟ್ ಪಂದ್ಯಗಳಲ್ಲಿ 68 ಇನ್ನಿಂಗ್ಸ್ ಆಡಿರುವ ಚೌಹಾಣ್ 2084 ರನ್ ಕಲೆಹಾಕಿದ್ದು, 16 ಅರ್ಧಶತಕಗಳನ್ನು ಬಾರಿಸಿದ್ದಾರೆ ಹಾಗೂ ಚೌಹಾಣ್ ಟೆಸ್ಟ್ ಕ್ರಿಕೆಟ್‍ನಲ್ಲಿ ಬಾರಿಸಿರುವ ಗರಿಷ್ಠ ರನ್ 97.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications