For Quick Alerts
ALLOW NOTIFICATIONS  
For Daily Alerts
 

ಭಾರತ ಅಂದರೆ ಇವರಿಗಿಷ್ಟ!: ಭಾರತದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಇಬ್ಬರು ದಾಂಡಿಗರು ಇವರು: ಇಬ್ಬರೂ ಆಸ್ಟ್ರೇಲಿಯನ್ನರು!

ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಭಾರತ ಕೂಡ ಒಂದು. ಅದರಲ್ಲೂ ಕಳೆದ ಎರಡು ದಶಕಗಳಲ್ಲಿ ಟೀಮ್ ಇಂಡಿಯಾ ಎಲ್ಲಾ ಮಾದರಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದು ವಿಶ್ವದ ಅಗ್ರ ತಂಡಗಳ ಪೈಕಿ ಒಂದೆನಿಸಿದೆ. ಹೀಗಾಗಿಯೇ ಎಲ್ಲಾ ಬ್ಯಾಟರ್‌ಗಳಿಗೂ ಭಾರತದ ವಿರುದ್ಧ ಹೆಚ್ಚು ರನ್‌ಗಳಿಸಬೇಕು ಎಂಬುದು ಕನಸಾಗಿರುತ್ತದೆ.

ಭಾರತದ ವಿಶ್ವದ ಕೆಲವು ಅತ್ಯುತ್ತಮ ಬೌಲರ್‌ಗಳಿಗೆ ತವರೂರು ಆಗಿರುವುದರಿಂದ ಮೇಲೆ ಈ ಸಾಧನೆ ಸಾಧ್ಯವಾಗಿದೆ. ಮೊದಲಿಗೆ ಟೀಮ್ ಇಂಡಿಯಾ ಹಲವಾರು ಅದ್ಭುತ ಸ್ಪಿನ್ನರ್‌ಗಳನ್ನು ಹೊಂದಿದ್ದು ಆ ಮೂಲಕ ಛಾಪು ಮೂಡಿಸಿದ್ದರೆ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ವೇಗದ ಬೌಲರ್‌ಗಳು ಭಾರತದಲ್ಲಿ ಹೊರಹೊಮ್ಮುತ್ತಿದ್ದು ಎಂಥಾ ಪಿಚ್‌ನಲ್ಲಿಯೂ ಎದುರಾಳಿಗಳ ವಿರುದ್ಧ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿದೆ.

These 2 cricketers hit the most centuries against India in international cricket

ಇನ್ನು ಈಗಾಗಲೇ ಹೇಳಿದಂತಾ ಭಾರತದ ವಿರುದ್ಧ ರನ್‌ಗಳಿಸುವುದು ಎಲ್ಲಾ ಬ್ಯಾಟರ್‌ಗಳ ದೊಡ್ಡ ಕನಸಾಗಿರುತ್ತದೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಆದರೆ ಇಬ್ಬರು ಆಟಗಾರರು ಭಾರತದ ವಿರುದ್ಧ ಸತತವಾಗಿ ಅದ್ಭುತ ಯಶಸ್ಸು ಸಾಧಿಸಿಕೊಂಡು ಬಂದಿದ್ದಾರೆ. ಭಾರತ ವಿರುದ್ಧ ಅತಿ ಹೆಚ್ಚು ಶತಕದ ದಾಖಲೆಯನ್ನು ಈ ಇಬ್ಬರು ಆಟಗಾರರು ಹೊಂದಿದ್ದು ಅವರಿಬ್ಬರು ಕೂಡ ಆಸ್ಟ್ರೇಲಿಯನ್ನರು ಎಂಬುದು ಗಮನಾರ್ಹ.

ಪ್ರಸ್ತುತ ಆಡುವ ಆಟಗಾರರ ಪೈಕಿ ಸ್ಟೀವ್ ಸ್ಮಿತ್‌ಗೆ ಅಗ್ರಸ್ಥಾನ

ಭಾರತದ ವಿರುದ್ಧ ಅತ್ಯಂತ ಹೆಚ್ಚು ಶತಕ ಸಿಡಿಸಿರುವ ಆಟಗಾರರ ಪಟ್ಟಿಯಲ್ಲಿ ಬರುವ ಆಟಗಾರ ಎಂದರೆ ಅದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್. ಭಾರತದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಸಕ್ರಿಯ ಕ್ರಿಕೆಟಿಗನೂ ಇವರೇ ಆಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಒಟ್ಟು 14 ಶತಕ ಸಿಡಿಸಿದಂತಾಗಿದೆ. ಟೆಸ್ಟ್ ಮಾದರಿಯಲ್ಲಿ ಭಾರತದ ವಿರುದ್ಧ ಸ್ಮಿತ್ 9 ಶತಕ ಸಿಡಿಸಿದರೆ ಉಳಿದ ಐದು ಶತಕಗಳು ಏಕದಿನ ಮಾದರಿಯಲ್ಲಿ ಬಂದಿದೆ. ಭಾರತದ ವಿರುದ್ಧ ಆಡಿರುವ 65 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ ಸ್ಮಿತ್

ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಆಡಿದಾಗ ಯಾವಾಗಲೂ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಮೊದಲ ದಿನದಾಟದಲ್ಲಿ ಸ್ಟೀವ್ ಸ್ಮಿತ್ 95 ರನ್‌ಗಳಿಸಿ ಅಜೇಯವಾಗುಳಿದಿದ್ದರು. ಎರಡನೇ ದಿನದಾಟದಲ್ಲಿ ತಮ್ಮ ಶತಕವನ್ನು ಪೂರ್ತಿಗೊಳಿಸಿದ್ದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ಟ್ರೆವಿಸ್ ಹೆಡ್ ಅವರ ಅದ್ಭುತ ಬ್ಯಾಟಿಂಗ್‌ನ ಕಾರಣದಿಂದಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 469 ರನ್‌ಗಳನ್ನು ಗಳಿಸಿದೆ.

ದಿಗ್ಗಜ ನಾಯಕ ರಿಕಿ ಪಾಂಟಿಂಗ್

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಆಡುವಾಗ ಒಟ್ಟು 14 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದ್ದಾರೆ. ಭಾರತದ ವಿರುದ್ಧ ಆಡುವಾದ ರಿಕಿ ಪಾಂಟಿಂಗ್ ಕೂಡ ಯಾವಾಗಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಅದರಲ್ಲೂ 2003ರ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಸಿಡಿಸಿದ ಶತಕವನ್ನು ಭಾರತೀಯ ಕ್ರಿಕೆಟ್ ಅಭಿಮಾಣಿಗಳು ಮರೆಯಲು ಸಾಧ್ಯವಿಲ್ಲ. 2011ರ ವಿಶ್ವಕಪ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಅಹ್ಮದಾಬಾದ್‌ನಲ್ಲಿ ಮುಖಾಮುಖಿಯಾಗಿದ್ದಾಗಲೂ ರಿಕಿ ಪಾಂಟಿಂಗ್ ಏಕಾಂಗಿ ಹೋರಾಟ ಪ್ರದರ್ಶಿಸಿ ಶತಕ ಸಿಡಿಸಿದ್ದರು.

Story first published: Thursday, June 8, 2023, 21:28 [IST]
Other articles published on Jun 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+