For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಜೊತೆ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಈ ಕ್ರಿಕೆಟಿಗರು ಈಗ ಕ್ರಿಕೆಟ್‍ನಿಂದಲೇ ಮರೆಯಾಗಿದ್ದಾರೆ

These 2 players were made test debut with Virat Kohli and faded away early

ಕ್ರಿಕೆಟ್ ಆಟವನ್ನು ತಮ್ಮ ವೃತ್ತಿಜೀವನವಾಗಿ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಬ್ಬರು ಸಹ ತಮ್ಮ ದೇಶದ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಬೇಕು ಎಂಬ ಕನಸನ್ನು ಹೊತ್ತಿರುತ್ತಾರೆ. ಈ ರೀತಿ ಕನಸನ್ನು ಹೊತ್ತು ಕ್ರಿಕೆಟ್ ಕ್ಷೇತ್ರಕ್ಕೆ ಬರುವ ಎಲ್ಲಾ ಆಟಗಾರರಿಗೂ ಕೂಡ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರು ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಮನ ಗೆದ್ದು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಹೆಚ್ಚು ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಉದಾಹರಣೆಗಳಿವೆ. ಮತ್ತೊಂದೆಡೆ ಇನ್ನೂ ಕೆಲ ಆಟಗಾರರು ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚಿದರೂ ಸಹ ಟೀಮ್ ಇಂಡಿಯಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಒಮ್ಮೆಯೂ ಸಿಗದೇ ನಿರಾಸೆಗೊಳಗಾದ ಹಲವಾರು ಉದಾಹರಣೆಗಳಿವೆ.

ಇನ್ನು ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗುವುದು ತುಸು ಕಷ್ಟವೆಂದೇ ಹೇಳಬಹುದು. ಕ್ರಿಕೆಟ್‌ಗೆ ಅತಿ ಹೆಚ್ಚು ಪ್ರಾತಿನಿಧ್ಯ ನೀಡುವ ಭಾರತದಲ್ಲಿ ಕ್ರಿಕೆಟಿಗನಾಗಲು ದೊಡ್ಡ ಮಟ್ಟದ ಪೈಪೋಟಿ ಇರುವ ಕಾರಣ ಉತ್ತಮ ಪ್ರದರ್ಶನ ನೀಡುವ ಎಲ್ಲರಿಗೂ ಸಹ ಅವಕಾಶ ಸಿಗುವುದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಅವಕಾಶ ಸಿಗದೇ ಕೆಲ ಕ್ರಿಕೆಟಿಗರು ದೇಸಿ ಕ್ರಿಕೆಟ್ ಹಂತದಲ್ಲಿಯೇ ಮರೆಯಾದರೆ, ಇನ್ನೂ ಕೆಲ ಆಟಗಾರರು ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ನಂತರ ಹೆಚ್ಚು ದಿನ ಉಳಿಯಲಾಗದೇ ಮರೆಯಾಗಿದ್ದಾರೆ.

ಈ ರೀತಿ ವಿರಾಟ್ ಕೊಹ್ಲಿ ಜತೆ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಇಬ್ಬರು ಆಟಗಾರರು ಇಂದು ಕ್ರಿಕೆಟ್ ಜಗತ್ತಿನಿಂದ ಮರೆಯಾಗಿದ್ದು, ಅವರ ಕುರಿತ ಮಾಹಿತಿ ಕೆಳಕಂಡಂತಿದೆ.

ಅಭಿನವ್ ಮುಕುಂದ್

ಅಭಿನವ್ ಮುಕುಂದ್

ಅಭಿನವ್ ಮುಕುಂದ್ ವಿರಾಟ್ ಕೊಹ್ಲಿ ಜೊತೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಟಗಾರ. ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ 2 ಇನ್ನಿಂಗ್ಸ್‌ ಪೈಕಿ 36 ರನ್ ಕಲೆಹಾಕಿದ್ದ ತಮಿಳುನಾಡು ಮೂಲದ ಈ ಕ್ರಿಕೆಟಿಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. 2017ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ ಅಭಿನವ್ ಮುಕುಂದ್ ಟೀಮ್ ಇಂಡಿಯಾ ಪರ ಒಟ್ಟು 7 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದು 320 ರನ್ ಕಲೆಹಾಕಿದ್ದರು. ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಕಾಣಿಸಿಕೊಳ್ಳದ ಅಭಿನವ್ ಮುಕುಂದ್ ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ.

ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್

ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ವಿರಾಟ್ ಕೊಹ್ಲಿ ಜೊತೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ 6 ವಿಕೆಟ್ ಪಡೆದು ಮಿಂಚಿದ್ದ ಪ್ರವೀಣ್ ಕುಮಾರ್ ನಂತರದ ದಿನಗಳಲ್ಲಿ ಹೆಚ್ಚು ಗಾಯದ ಸಮಸ್ಯೆಗೆ ಒಳಗಾದರು ಹಾಗೂ ನಿವೃತ್ತಿಯನ್ನು ಘೋಷಿಸಿದರು. ಪ್ರವೀಣ್ ಕುಮಾರ್ ಒಟ್ಟಾರೆ 6 ಟೆಸ್ಟ್ ಪಂದ್ಯಗಳನ್ನಾಡಿ 27 ವಿಕೆಟ್ ಪಡೆದಿದ್ದು, ಇದರಲ್ಲಿ ಒಂದು 5 ವಿಕೆಟ್‍ಗಳ ಗೊಂಚಲು ಕೂಡ ಇದೆ.

ಅಭಿನವ್ ಮತ್ತು ಪ್ರವೀಣ್ ಕುಮಾರ್ ಕೊಹ್ಲಿ ಜೊತೆ ಆರ್‌ಸಿಬಿಯಲ್ಲಿಯೂ ಇದ್ದರು

ಅಭಿನವ್ ಮತ್ತು ಪ್ರವೀಣ್ ಕುಮಾರ್ ಕೊಹ್ಲಿ ಜೊತೆ ಆರ್‌ಸಿಬಿಯಲ್ಲಿಯೂ ಇದ್ದರು

ಇನ್ನು ವಿರಾಟ್ ಕೊಹ್ಲಿ ಜತೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಭಿನವ್ ಮುಕುಂದ್ ಮತ್ತು ಪ್ರವೀಣ್ ಕುಮಾರ್ ಕೆಲ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿ ವಿರಾಟ್ ಕೊಹ್ಲಿ ಸಹ ಆಟಗಾರರಾಗಿದ್ದರು. ಪ್ರವೀಣ್ ಕುಮಾರ್ 2008 - 10ರವರೆಗಿನ ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದರು ಹಾಗೂ ಅಭಿನವ್ ಮುಕುಂದ್ 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು.

Story first published: Thursday, June 23, 2022, 10:16 [IST]
Other articles published on Jun 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+