ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಮತ್ತು 50ಕ್ಕೂ ಅಧಿಕ ವಿಕೆಟ್ ಪಡೆದ ಮೂವರು ಕ್ರಿಕೆಟಿಗರು ಇವರೇ!!
ಟೆಸ್ಟ್ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಆಗಿ ಸಾಧನೆ ಮಾಡುವುದು ಸುಲಭವಲ್ಲ. ಈ ಸುದೀರ್ಘ ಮಾದರಿಯಲ್ಲಿ ಸುದೀರ್ಘ ಕಾಲ ಉಳಿದುಕೊಳ್ಳಲು ಕೌಶಲ್ಯದ ಜೊತೆಗೆ ಫಿಟ್‌ನೆಸ್ ಹಾಗೂ ಬದ್ಧತೆಯೂ ಬೇಕು. ಹಾಗಿದ್ದಾಗ ಮಾತ್ರ ಅಂಥಾ ಸಾಧನೆ ಸಾಧ್ಯ. ಐದು ದಿನಗಳ ಕಾಲ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಎದುರಾಳೀ ವಿರುದ್ಧ ಸೆಣಸಾಡುವುದು ಸುಲಭ ಅಲ್ಲವೇ ಅಲ್ಲ. ಹಾಗಿದ್ದರೂ ಕೆಲ ಸಾಧಕರು ಅಂಥಾ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸುದೀರ್ಘ ಕಾಲ ಯಶಸ್ಸು ಕಂಡ ಕೆವಲ ಮೂವರು ಆಟಗಾರರ ವಿಶೇಷ ಮಾಹಿತಿ ಇಲ್ಲಿದೆ. ಟೆಸ್ಟ್ ಕ್ರಿಕೆಟ್‌ನ ಸುದೀರ್ಘ ಇತಿಹಾಸದಲ್ಲಿ 10,000ಕ್ಕೂ ಅಧಿಕ ರನ್ ಮತ್ತು ಬೌಲಿಂಗ್‌ನಲ್ಲಿ 50ಕ್ಕೂ ಅಧಿಕ ವಿಕೆಟ್ ಪಡೆದುಕೊಂಡ ದಾಖಲೆಯನ್ನು ಈ ಮೂವರು ಕ್ರಿಕೆಟಿಗರು ಮಾತ್ರವೇ ಹೊಂದಿದ್ದಾರೆ. ಆ ಮೂವರು ಕ್ರಿಕೆಟಿಗರು ಯಾರು? ಇಲ್ಲಿದೆ ಮಾಹಿತಿ.

ಜಾಕಲ್ ಕ್ಯಾಲಿಸ್, ಟೆಸ್ಟ್ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್
ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ ಕ್ಯಾಲಿಸ್ ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್. ವಿಶ್ವ ಕ್ರಿಕೆಟ್‌ನ ಪರಿಪೂರ್ಣ ಆಟಗಾರ ಎಂದೇ ಬಹುತೇಕರಿಂದ ಕರೆಸಿಕೊಂಡಿದ್ದಾರೆ ಜಾಕಸ್ ಕ್ಯಾಲಿಸ್. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಕ್ಯಾಲಿಸ್ 280 ಇನ್ನಿಂಗ್ಸ್‌ಗಳಲ್ಲಿ 13,289 ರನ್‌ಗಳನ್ನು ಗಳಿಸಿದ್ದು ಬೌಲಿಂಗ್‌ನಲ್ಲಿ 292 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ 10000 ರನ್‌ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಆಸಿಸ್ ಮಾಜಿ ನಾಯಕ ಸ್ಟೀವ್ ವಾ
ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಕೂಡ ಈ ಪಟ್ಟಿಯಲ್ಲಿದ್ದಾರೆ. ತಮ್ಮ ತಂಡದ ಪರವಾಗಿ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಕೊಡುಗೆ ನಿಡುತ್ತಿದ್ದರು ವಾ. ಸ್ಟೀವ್ ವಾ ತಮ್ಮ ವೃತ್ತಿ ಜೀವನದಲ್ಲಿ 260 ಇನ್ನಿಂಗ್ಸ್‌ಗಳನ್ನು ಆಡಿದ್ದು 10927 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಇವರ ಸಾಧನೆಯತ್ತ ಗಮನಹರಿಸಿದರೆ 92 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.

ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್
ಇನ್ನು ಈ ಪಟ್ಟಿಯಲ್ಲಿರುವ ಆಟಗಾರರ ಪೈಕಿ ಪ್ರಸ್ತುತ ಆಡುತ್ತಿರುವ ಏಕೈಕ ಆಟಗಾರ ಜೋ ರೂಟ್. ಜೋ ರೂಟ್ ಕೂಡ ಬ್ಯಾಟಿಂಗ್‌ನ ಜೊತೆಗೆ ಬೌಲಿಂಗ್‌ನಲ್ಲಿಯೂ ತಂಡಕ್ಕೆ ನೆರವನ್ನು ನೀಡುವ ಸಾಮರ್ಥ್ಯ ಹೊಂದಿರುವ ಆಟಗಾರ. ಟೆಸ್ಟ್ ಕ್ರಿಕೆಟ್‌ನಲ್ಲಿ ರೂಟ್ ಇತ್ತೀಚೆಗಷ್ಟೇ 11,000 ರನ್‌ಗಳ ಗಡಿಯನ್ನು ದಾಟಿದ್ದಾರೆ. ಇನ್ನು ಆಫ್‌ಸ್ಪಿನ್ ಬೌಲಿಂಗ್ ಮಾಡುವ ಜೋ ರೂಟ್ 54 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications