Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK in IPL: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಹತ್ತಕ್ಕೂ ಹೆಚ್ಚು ಪಂದ್ಯಗಳಲ್ಲಿ ಗೆದ್ದ ತಂಡಗಳು ಇವು!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ ಒಂದು. ನಾಲ್ಕು ಬಾರಿ ಚಾಂಪಿಯನ್ ಎನಿಸಿಕೊಂಡಿರುವ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್‌ಗೆ ಪ್ರವೇಶಿಸಿರುವ ತಂಡ ಎನಿಸಿಕೊಂಡಿದೆ. ಸಿಎಸ್‌ಕೆ ತಂಡದ ಈ ಪ್ರಮಾಣದ ಯಶಸ್ಸಿಗೆ ಪ್ರಮುಖ ಕಾರಣ ನಾಯಕ ಎಂಎಸ್ ಧೋನಿ ಎಂಬುದು ಬಹುತೇಕ ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯ.

ಆರಂಭಿಕ ಆವೃತ್ತಿಯಿಂದಲೂ ಅದ್ಭುತ ಪ್ರದರ್ಶನ ನೀಡುತ್ತಾ ಮಿಂಚಲು ಆರಂಭಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಂತರ ಎಲ್ಲಾ ತಂಡಗಳು ಕೂಡ ಗೆಲ್ಲಲೇ ಬೇಕು ಎಂದೆನಿಸುವ ಎದುರಾಳಿಯಾಗಿ ಬೆಳೆದಿತ್ತು. ಈಗಲೂ ಬಹುತೇಕ ಫ್ರಾಂಚೈಸಿಗಳು ಸಿಎಸ್‌ಕೆ ತಂಡವನ್ನು ಬದ್ಧ ಎದುರಾಳಿ ಎಂದೇ ಪರಿಗಣಿಸುತ್ತಿರುವುದು ಇದಕ್ಕೆ ಕಾರಣ.

These 3 IPL teams defeated Chennai Super Kings more than 10 times in the tournament

ಇಂಥಾ ತಂಡದ ವಿರುದ್ಧ ಮೂರು ತಂಡಗಳು ಮಾತ್ರವೇ ಹತ್ತಕ್ಕೂ ಅಧಿಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಸಿಎಸ್‌ಕೆ ವಿರುದ್ಧ ಯಶಸ್ಸು ಸಾಧಿಸಿರುವ ಆ ಮೂರು ತಂಡಗಳು ಯಾವುದು? ಇಲ್ಲಿದೆ ಮಾಹಿತಿ.

12 ಬಾರಿ ಮಣಿಸಿದೆ ಪಂಜಾಬ್ ಕಿಂಗ್ಸ್

ಐಪಿಎಲ್‌ನಲ್ಲಿ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರದ ತಂಡ ಎನಿಸಿಕೊಂಡಿದ್ದರೂ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಯಶಸ್ಸು ಸಾಧಿಸಿದೆ. ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮುಖಾಮುಖಿ ಅಭಿಮಾನಿಗಳನ್ನು ಸಾಕಷ್ಟು ರಂಜಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 12 ಪಂದ್ಯಗಳಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿದೆ.

13 ಬಾರಿ ಗೆಲುವು ಸಾಧಿಸಿದೆ ರಾಜಸ್ಥಾನ್ ರಾಯಲ್ಸ್ ತಂಡ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೊಂದು ಬದ್ಧ ಎದುರಾಳಿ ಎಂದರೆ ಅದು ರಾಜಸ್ಥಾನ ರಾಯಲ್ಸ್ ತಂಡ. 2008ರ ಐಪಿಎಲ್ ಆವೃತ್ತಿಯಿಂದಲೇ ಈ ಎರಡು ತಂಡಗಳ ಮುಖಾಮುಖಿ ರಂಗು ಪಡೆದುಕೊಂಡಿತ್ತು. ಈ ಎರಡು ತಂಡಗಳು ಚೊಚ್ಚಲ ಐಪಿಎಲ್ ಆವೃತ್ತಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು ರಾಜಸ್ಥಾನ್ ರಾಯಲ್ಸ್ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು. ಒಟ್ಟಾರೆಯಾಗಿ ರಾಜಸ್ಥಾನ್ ರಾಯಲ್ಸ್ ತಂಡ ಸಿಎಸ್‌ಕೆ ವಿರುದ್ಧ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಸಿಎಸ್‌ಕೆ ವಿರುದ್ಧ ಅತ್ಯದ್ಭುತ ದಾಖಲೆ ಹೊಂದಿದೆ ಮುಂಬೈ ಇಂಡಿಯನ್ಸ್

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತಿ ದೊಡ್ಡ ಮುಖಾಮುಖಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಗುರುತಿಸಲಾಗುತ್ತದೆ. ಈ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಅತಿ ಹೆಚ್ಚು 20 ಬಾರಿ ಗೆಲುವು ಸಾಧಿಸಿದೆ. ಈ ಎರಡು ತಂಡಗಳ ಮುಖಾಮುಖಿಗಾಗಿ ಐಪಿಎಲ್ ಅಭಿಮಾನಿಗಳು ಕಾಯುತ್ತಿರುತ್ತಾರೆ ಎಂಬುದು ಸುಳ್ಳಲ್ಲ.

Story first published: Thursday, April 13, 2023, 21:01 [IST]
Other articles published on Apr 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+