ಟಿ20 ವಿಶ್ವಕಪ್‌ನಲ್ಲಿ ಈ ಮೂವರು ಆಟಗಾರರನ್ನ ಮಿಸ್ ಮಾಡಿಕೊಂಡಿದೆ ಟೀಂ ಇಂಡಿಯಾ
ಸೆಮಿಫೈನಲ್ ಹಂತ ಪ್ರವೇಶಿಸಲಾಗದೆ ಟೀಮ್ ಇಂಡಿಯಾ ಈಗಾಗಲೇ ಟಿ20 ವಿಶ್ವಕಪ್‌ನಿಂದ ಹೊರಬಂದಿದೆ. ವಿಶ್ವದ ಬಲಿಷ್ಠ ಚುಟುಕು ಫಾರ್ಮೆಟ್ ಟೀಮ್, ಗೆಲುವಿನ ಫೇವರಿಟ್ ಎಂದೆಲ್ಲಾ ಗುರುತಿಸಿಕೊಂಡಿದ್ದ ಭಾರತ ಟೂರ್ನಿ ಆರಂಭಗೊಂಡ ಬಳಿಕ ಅಷ್ಟೇ ಮಂಕಾಗಿ ಹೋಗಿದ್ದು ಏಕೆ ಎಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಆಟಗಾರರ ಪ್ರದರ್ಶನ ಗುಣಮಟ್ಟ ತಗ್ಗಿದೆಯೇ? ಆಟಗಾರರಿಗೆ ವಿಶ್ರಾಂತಿ ಕೊರತೆಯೇ? ಐಪಿಎಲ್ ಬೆನ್ನಲ್ಲೇ ವಿಶ್ವಕಪ್ ಒತ್ತಡ ಮೂಡಿಸಿತೇ? ಟೀಮ್ ಸೆಲೆಕ್ಷನ್ ಸರಿ ಇಲ್ಲವೇ? ಹೀಗೆ ನಾನಾ ಪ್ರಶ್ನೆಗಳು ಅಭಿಮಾನಿಗಳ ಮನಸ್ಸಲ್ಲಿ ಮೂಡುವುದು ಸಹಜ. ಇದರ ಜೊತೆಗೆ ಟೀಮ್ ಇಂಡಿಯಾ ಎಡವಿದ್ದೆಲ್ಲಿ ಎಂದು ಕ್ರಿಕೆಟ್ ಪಂಡಿತರು ಚರ್ಚೆ ಮಾಡುವುನ್ನು ಸಹ ಕಾಣಬಹುದು.

ತಂಡದ ಸಂಯೋಜನೆ ಕುರಿತು ಅನುಮಾನವೇ?
ಭಾರತ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ತಂಡದ ಸಂಯೋಜನೆ ಮತ್ತು ಆಯ್ಕೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಟೂರ್ನಿಯಲ್ಲಿ ಭಾರತ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಆದರೆ ಮೊದಲೆರಡು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ನಿಂದ ಸೋಲನ್ನು ಕಂಡ ಬಳಿಕವಷ್ಟೇ ಉಳಿದ ಪಂದ್ಯಗಳನ್ನು ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಗೆಲುವನ್ನು ಕಂಡಿತು. ಹೀಗಾಗಿ ತಂಡದ ಸಂಯೋಜನೆ ಕುರಿತು ಸಹಜವಾಗಿ ಅನುಮಾನ ಮೂಡಿಸಿದೆ.
ಇದರ ನಡುವೆ T20 ವಿಶ್ವಕಪ್‌ಗಾಗಿ ಆಯ್ಕೆದಾರರಿಂದ ನಿರ್ಲಕ್ಷಿಸಲ್ಪಟ್ಟ ಮೂವರು ಪ್ರಮುಖ ಆಟಗಾರರನ್ನು ಟೀಮ್ ಇಂಡಿಯಾ ಮಿಸ್ ಮಾಡಿಕೊಂಡಿದೆ ಎನ್ನುವುದನ್ನು ಮರೆಯಲಾಗದು. ಅವರು ಯಾರು ಎಂಬುದನ್ನ ಮುಂದೆ ತಿಳಿಸಲಾಗಿದೆ.

ಯುಜವೇಂದ್ರ ಚಹಾಲ್
ಹರಿಯಾಣ ಮೂಲದ ಲೆಗ್-ಸ್ಪಿನ್ನರ್ ಯುಜವೇಂದ್ರ ಚಹಾಲ್ 2016 ರಲ್ಲಿ ಟೀಮ್ ಇಂಡಿಯಾಗೆ ಚೊಚ್ಚಲ ಪ್ರವೇಶ ಮಾಡಿದ ನಂತರ ಕಡಿಮೆ ಸಮಯದಲ್ಲೇ ಭಾರತದ ಅಗ್ರ ಬೌಲರ್ ಆಗಿ ಗುರುತಿಸಿಕೊಂಡರು. ಟಿ20 ವಿಶ್ವಕಪ್‌ನ ಆರಂಭಕ್ಕೂ ಮೊದಲು 63 ವಿಕೆಟ್ ಕಬಳಿಸಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. ಪಂದ್ಯಾವಳಿಯಲ್ಲಿ ಜಸ್ಪ್ರೀತ್ ಬುಮ್ರಾ (66) ಆ ಪಟ್ಟಿಯಲ್ಲಿ ಚಹಾಲ್ ಅವರನ್ನು ಹಿಂದಿಕ್ಕಿದರು.
ಐಪಿಎಲ್ 2021 ರಲ್ಲಿ ಚಹಾಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 21 ವಿಕೆಟ್‌ಗಳನ್ನು ಪಡೆದಿದ್ದರು ಮತ್ತು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಪ್ರಮುಖ ಸ್ಪಿನ್ನರ್ ಆಗಿದ್ದರು. UAE ಪಿಚ್‌ಗಳ ಮೇಲೆ ಉತ್ತಮ ಪರಿಣಾಮ ಬೀರಲು ಅವರ ತಂತ್ರವನ್ನು ಬಳಸಬಹುದಿತ್ತು. ಆದರೆ ಆಯ್ಕೆಗಾರರು ಯುಜವೇಂದ್ರ ಚಹಾಲ್‌ರನ್ನ ಕಡೆಗಣಿಸಿದ್ದು ಸಾಕಷ್ಟು ಟೀಕೆಗೆ ಕಾರಣವಾಗಿತ್ತು.
ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್ ಪಾಂಡ್ಯಗೆ ಟಿ20ಯಿಂದ ಕೊಕ್

ರುತುರಾಜ್ ಗಾಯಕ್ವಾಡ್
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಲೀಗ್ ಆರಂಭದಿಂದ ಉತ್ತಮ ಪ್ರದರ್ಶನ ತೋರಿದ ರುತುರಾಜ್ ಗಾಯಕ್ವಡ್ 45.36 ರ ಸರಾಸರಿಯಲ್ಲಿ 635 ರನ್‌ಗಳನ್ನು ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಇವರು ಪ್ರಮುಖ ಕಾರಣರಾಗಿದ್ದರು. ಯುಎಇ ವಿಕೆಟ್‌ಗಳಲ್ಲಿ ಅವರ ಫಾರ್ಮ್ ಅನ್ನು ಅಗ್ರ ಕ್ರಮಾಂಕದ ಮೇಲ್ಭಾಗದಲ್ಲಿ ಬಳಸಿಕೊಳ್ಳಬಹುದಿತ್ತು, ರಾಹುಲ್ ಅವರು 4 ನೇ ಸ್ಥಾನದಲ್ಲಿ ಆಡಿದ್ರೆ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಮುಗಿಸುವ ಕರ್ತವ್ಯವನ್ನು ನಿಭಾಯಿಸಬಹುದಿತ್ತು.

ದೀಪಕ್ ಚಹರ್
ಬೌಲಿಂಗ್ ಆಲ್‌ರೌಂಡರ್ ದೀಪಕ್ ಚಹರ್ ಒಂದೆರಡು ವರ್ಷಗಳಿಂದ ಭಾರತೀಯ ತಂಡದ ಭಾಗವಾಗಿದ್ದಾರೆ ಮತ್ತು ಚುಟುಕು ಕ್ರಿಕೆಟ್ ಫಾರ್ಮೆಟ್‌ನಲ್ಲಿ ಸ್ಥಿರರಾಗಿದ್ದಾರೆ. ಅವರು 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯಗಳಲ್ಲಿ ಗಳಲ್ಲಿ ಹ್ಯಾಟ್ರಿಕ್ ಪಡೆದರು. ಚಹಾರ್ ಅವರ 6/7 ಬೌಲಿಂಗ್ ಫಿಗರ್ ಟಿ20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನವಾಗಿದೆ. ಆದರೂ ಚಹಾರ್ ಪಂದ್ಯಾವಳಿಯ ಸ್ಟ್ಯಾಂಡ್ ಬೈ ಲಿಸ್ಟ್‌ನಲ್ಲಿದ್ದರು. ಫಾರ್ಮ್‌ಗಾಗಿ ಪರದಾಡುತ್ತಿರುವ ಭುವನೇಶ್ವರ್ ಕುಮಾರ್ ಬದಲಿಗೆ ಅವರನ್ನು ಆಯ್ಕೆ ಮಾಡಬಹುದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications