For Quick Alerts
ALLOW NOTIFICATIONS  
For Daily Alerts
 

IPL ನಿಂದ ಹೊರಬಿದ್ದ ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಈ ಮೂವರಲ್ಲಿ ಯಾರು?

ಐಪಿಎಲ್ 13ನೇ ಆವೃತ್ತಿಯು ದಿನದಿಂದ ದಿನಕ್ಕೆ ರೋಚಕತೆಯನ್ನು ಹೆಚ್ಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪ್ರಮಖ ಹೊಡೆತ ಬಿದ್ದಿದೆ.

ಸನ್‌ರೈಸರ್ಸ್ ಹೈದ್ರಾಬಾದ್ ಪರ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್‌ ಗಾಯಾಳುವಾಗಿ ಟೂರ್ನಿಯಿಂದ ಹೊರಬಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಮಿತ್ ಮಿಶ್ರಾ ಮತ್ತೆ ಈ ಸೀಸನ್‌ನಲ್ಲಿ ಕಣಕ್ಕಿಳಿಯಲಾರರು.

ಸನ್‌ರೈಸರ್ಸ್ ಹೈದ್ರಾಬಾದ್‌ ತಂಡದ ಪ್ರಮುಖ ಬೌಲಿಂಗ್ ಶಕ್ತಿಯಾಗಿದ್ದ ಭುವನೇಶ್ವರ್ ಕುಮಾರ್ ಅಲಭ್ಯತೆ ತಂಡಕ್ಕೆ ತೀವ್ರವಾಗಿ ಕಾಡಲಿದೆ. ಭುವನೇಶ್ವರ್‌ ಕುಮಾರ್‌ಗೆ ಸರಿ ಸಮನಾಗಿ ಬೌಲರ್‌ ಸಿಗದಿದ್ದರೂ, ಅವರ ಸ್ಥಾನವನ್ನು ಯಾರು ತುಂಬಬಲ್ಲರು ಎಂಬ ಮಾಹಿತಿ ಈ ಕೆಳಗಿದೆ.

ಅನಿಕೇತ್ ಚೌಧರಿ

ಅನಿಕೇತ್ ಚೌಧರಿ

ಅನಿಕೇತ್ ಚೌಧರಿ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧ ಹೆಸರು. ಅವರು ಎಡಗೈ ವೇಗದ-ಮಧ್ಯಮ ಬೌಲರ್ ಮತ್ತು ಈ ಹಿಂದೆ ಆರ್‌ಸಿಬಿ ಪರ ಆಡಿದ್ದಾರೆ. ಚೌಧರಿ ರಾಜಸ್ಥಾನ ಮೂಲದವನು ಮತ್ತು ಅವರಿಗೆ ದೊರೆತೆ ಐದು ಅವಕಾಶಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ.

ಚೌಧರಿ ಪ್ರಮುಖವಾಗಿ ಅತ್ಯುತ್ತಮ ಕಟ್ಟರ್‌ಗಳನ್ನು ಬೌಲ್‌ ಮಾಡುವ ಸಾಮರ್ಥ್ಯ ಹೊಂದಿರುವ ಸ್ಕಿಡ್ಡಿ ಬೌಲರ್. ಜೊತೆಗೆ ಡೆತ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಸನ್‌ರೈಸರ್ಸ್ ಹೈದ್ರಾಬಾದ್ ಅನುಭವಿ ಮುಖವನ್ನು ಹುಡುಕುತ್ತಿರುವುದರಿಂದ, ಚೌಧರಿ ಎಂಟು ವರ್ಷಗಳಿಗಿಂತ ಹೆಚ್ಚು ಕಾಲ ದೇಶೀಯ ಕ್ರಿಕೆಟ್ ಆಡಿದ್ದಾರೆ ಮತ್ತು ಒಬ್ಬ ಅನುಭವಿ ಬೌಲರ್ ಆಗಿ ಕಣಕ್ಕಿಳಿಯಬಹುದು.

ಜೊತೆಗೆ ವಿಭಿನ್ನ ಮಾರ್ಪಾಡುಗಳನ್ನು ಹೊಂದಿರುವುದರಿಂದ, ಡೆತ್ ಬೌಲರ್ ಆಗಿ ಅವರ ಪರಾಕ್ರಮವು ಅವರನ್ನು ವಿಶ್ವಾಸಾರ್ಹ ಬೌಲರ್ ಆಗಿ ಮಾಡಬಹುದು. ಏಕೆಂದರೆ ಹೈದ್ರಾಬದ್ ಡೆತ್ ಓವರ್‌ಗಳಲ್ಲಿ ಭುವಿ ಇಲ್ಲದೆ ಹೆಣಗಾಡಿದೆ ಅವರ ಬೌಲಿಂಗ್ ತಂಡವು ಮೊದಲಿಗಿಂತಲೂ ದುರ್ಬಲವಾಗಿದೆ.

500 ಸ್ಟ್ರೈಕ್‌ರೇಟ್‌ನಲ್ಲಿ ಕೃನಾಲ್ ಬ್ಯಾಟಿಂಗ್ ಅಬ್ಬರ: ಐಪಿಎಲ್ ಇತಿಹಾಸದಲ್ಲೇ ಮೊದಲು

ರಾಹುಲ್ ಶುಕ್ಲಾ

ರಾಹುಲ್ ಶುಕ್ಲಾ

ಖಲೀಲ್ ಅಹ್ಮದ್, ಟಿ ನಟರಾಜನ್ ಮತ್ತು ಸಂದೀಪ್ ಶರ್ಮಾ ಅವರ ಬೌಲಿಂಗ್ ದಾಳಿಯಿದ್ದರೂ, ಸನ್‌ರೈಸರ್ಸ್ ಹೈದ್ರಾಬಾದ್ ವೇಗದ ಬೌಲಿಂಗ್ ಕೊರತೆಯನ್ನು ಎದುರಿಸುತ್ತಿದೆ. ಅದರಲ್ಲೂ ದುಬೈನಂತಹ ಒಣ ಪಿಚ್‌ಗಳನ್ನು ಬಳಸಿಕೊಳ್ಳಲು ವೇಗದ ಬೌಲರ್‌ ಅವಶ್ಯಕತೆ ಇದೆ. ಹೀಗಾಗಿ ಎಸ್‌ಆರ್‌ಹೆಚ್ ಪರಿಗಣಿಸಬಹುದಾದ ಆಯ್ಕೆಗಳಲ್ಲಿ ರಾಹುಲ್ ಶುಕ್ಲಾ ಕೂಡ ಒಂದು.

ದೇಶೀಯ ವಲಯಗಳಲ್ಲಿ ಶುಕ್ಲಾ ಜಾರ್ಖಂಡ್ ಪರ ಆಡುತ್ತಾನೆ ಮತ್ತು ಆತ ತನ್ನ ವೇಗದ ಬೌಲಿಂಗ್‌ಗೆ ಜನಪ್ರಿಯನಾಗಿದ್ದಾನೆ. ಈ ಹಿಂದೆ ಅವರು ಈಗಾಗಲೇ ಮೂರು ಫ್ರಾಂಚೈಸಿಗಳಿಂದ ಸಹಿ ಹಾಕಿದ್ದಾರೆ. 2012 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಸಹಿ ಹಾಕಿದರು, ನಂತರ ರಾಜಸ್ಥಾನ ಮತ್ತು ದೆಹಲಿ.

ದೇಶೀಯ ಕ್ರಿಕೆಟ್‌ನಲ್ಲಿ ಸುಮಾರು 10 ವರ್ಷಗಳ ಅನುಭವದೊಂದಿಗೆ, ಭುವಿಗೆ ಬದಲಿಯಾಗಿ ಶುಕ್ಲಾ ಬರಬಹುದು ಮತ್ತು ಎಸ್‌ಆರ್‌ಹೆಚ್‌ನ ದಾಳಿಗೆ ಹೆಚ್ಚು ಅಗತ್ಯವಾದ ಸ್ಥಿರತೆಯನ್ನು ಒದಗಿಸಬಹುದು.

ಬರಿಂದರ್ ಸ್ರಾನ್

ಬರಿಂದರ್ ಸ್ರಾನ್

ಬರೀಂದರ್ ಸ್ರಾನ್ ಈಗಾಗಲೇ ಎಸ್‌ಆರ್‌ಹೆಚ್ ಪರ ಆಡಿದ್ದಾರೆ ಮತ್ತು ಟೀಮ್ ಇಂಡಿಯಾವನ್ನು ಸಹ ಪ್ರತಿನಿಧಿಸಿದ್ದಾರೆ. ಅವರು ಹಿಟ್-ದಿ-ಡೆಕ್ ಬೌಲರ್ ಮತ್ತು ಯುಎಇ ಪಿಚ್‌ಗಳನ್ನು ಬಳಸಿಕೊಳ್ಳಬಹುದು. ಎಡಗೈ ವೇಗಿ ಅತ್ಯುನ್ನತ ಮಟ್ಟದಲ್ಲಿ ಆಡುವ ಪ್ರಮುಖ ಅನುಭವವನ್ನು ಹೊಂದಿರುವುದರಿಂದ 2016 ರಲ್ಲಿ ಭಾರತವನ್ನು ಪ್ರತಿನಿಧಿಸಿದ ಅವರ ಅನುಭವವೂ ಅವರ ಪರವಾಗಿ ಕೆಲಸ ಮಾಡಬಹುದು.

27 ರ ಹರೆಯ ಈತ ಐಪಿಎಲ್‌ನಲ್ಲಿ 24 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಹೆಸರಿನಲ್ಲಿ 18 ವಿಕೆಟ್‌ಗಳಿವೆ. ಅವರು ಕಳೆದ ಸೀತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು ಮತ್ತು ಅವರನ್ನು ತಂಡದಲ್ಲಿ ಸೇರಿಸುವ ಮೂಲಕ, ಎಸ್‌ಆರ್‌ಹೆಚ್ ಯೋಗ್ಯವಾದ ಬೌಲರ್‌ ಜೊತೆಗೆ ಹೆಚ್ಚು ಅಗತ್ಯವಿರುವ ಅನುಭವವನ್ನು ಹೊಂದಬಹುದು.

ಅವರು ಐಪಿಎಲ್‌ನ 2016 ಸೀಸನ್‌ನಲ್ಲಿ ಚಾಂಪಿಯನ್ ಎಸ್‌ಆರ್‌ಹೆಚ್ ತಂಡದ ಭಾಗವಾಗಿದ್ದರು. ಗಮನಾರ್ಹ ವಿಚಾರ ಏನಂದ್ರೆ ಡೇವಿಡ್ ವಾರ್ನರ್ ಅವರು 2016 ರಲ್ಲಿ ಎಸ್‌ಆರ್‌ಹೆಚ್‌ನ ನಾಯಕರಾಗಿದ್ದರು ಮತ್ತು ಅದು ಸ್ರಾನ್‌ನ ಪರವಾಗಿ ಹೋಗಬಹುದು.

ಡೆಲ್ಲಿ ಕ್ಯಾಪಿಟಲ್ಸ್‌ಗೂ ಬದಲಿ ಆಟಗಾರನ ಹುಡುಕಾಟ

ಡೆಲ್ಲಿ ಕ್ಯಾಪಿಟಲ್ಸ್‌ಗೂ ಬದಲಿ ಆಟಗಾರನ ಹುಡುಕಾಟ

ಸನ್‌ರೈಸರ್ಸ್ ಹೈದ್ರಾಬಾದ್ ರೀತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬದಲಿ ಆಟಗಾರನ ಹುಡುಕಾಟದಲ್ಲಿದೆ. ಇದಕ್ಕೆ ಕಾರಣ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಗಾಯಾಳುವಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸದ್ಯಕ್ಕೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರ ಸ್ಥಾನ ತುಂಬಿದ್ದಾರೆ. ಆದರೆ ಗಾಯಾಳು ಸಂಖ್ಯೆ ಏನಾದರೂ ಹೆಚ್ಚಾದಲ್ಲಿ ಯಾರನ್ನು ಡೆಲ್ಲಿ ಕ್ಯಾಪಿಟಲ್ಸ್ ಪಡೆಯಲಿದೆ ಅನ್ನೋದು ಪ್ರಮುಖ ಪ್ರಶ್ನೆಯಾಗಿದೆ.

Story first published: Tuesday, October 6, 2020, 9:41 [IST]
Other articles published on Oct 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+