ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಬದಲಿಗೆ ಸ್ಥಾನ ಪಡೆಯಲು ಈ ಮೂವರ ನಡುವೆ ಪೈಪೋಟಿ!

ಕಾರು ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಇನ್ನು ಕನಿಷ್ಠ 3 ರಿಂದ 6 ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ರಿಷಬ್ ಪಂತ್ ಗಾಯದ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ನಂತರವೇ ಅವರು ಯಾವಾಗ ಚೇತರಿಸಿಕೊಳ್ಳುತ್ತಾರೆ ಎಂದು ಅಂದಾಜು ಮಾಡಬಹುದಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ ರಿಷಬ್ ಪಂತ್ ಫೆಬ್ರವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ. ಪಂತ್ ಯಾವಾಗ ಭಾರತ ತಂಡಕ್ಕೆ ಮರಳುತ್ತಾರೆ ಎಂದು ಹೇಳುವುದು ಕಷ್ಟವಾಗಿರುವುದರಿಂದ, ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಪಂತ್‌ಗೆ ಬದಲೀ ವಿಕೆಟ್ ಕೀಪರ್ ಬ್ಯಾಟರ್ ತಂಡಕ್ಕೆ ಅವಶ್ಯವಿದೆ.
ಹಲವು ಆಟಗಾರರು ಈಗಾಗಲೇ ಪಂತ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿದ್ದಾರೆ. ಆಸ್ಟ್ರೇಲಿಯಾದಂತ ಬಲಿಷ್ಠ ತಂಡವನ್ನು ತವರಿನಲ್ಲಿ ಎದುರಿಸುವಾಗ ಉತ್ತಮ ವಿಕೆಟ್ ಕೀಪರ್ ಬ್ಯಾಟರ್ ತಂಡಕ್ಕೆ ಬೇಕಾಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ, ಗಮನ ಸೆಳೆದಿರುವ ಕೆಲವು ಆಟಗಾರರನ್ನು ಪರಿಗಣಿಸುವ ಸಾಧ್ಯತೆ ಇದೆ.
ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಕೆ ಎಸ್ ಭರತ್, ಉಪೇಂದ್ರ ಯಾದವ್ ಸದ್ಯ ಬಿಸಿಸಿಐ ಮುಂದೆ ಇರುವ ಪ್ರಮುಖ ಆಯ್ಕೆಗಳಾಗಿದೆ. ಸಂಜು ಸ್ಯಾಮ್ಸನ್‌ರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಕಡಿಮೆ ಇದ್ದು, ಉಳಿದ ಮೂವರ ನಡುವೆ ಹೆಚ್ಚಿನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.

ಕೆ ಎಸ್ ಭರತ್‌ಗೆ ಅವಕಾಶ
ಭಾರತ ಎ ತಂಡಕ್ಕೆ ಆಡಿರುವ ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಬಿಸಿಸಿಐನ ಮೊದಲ ಆಯ್ಕೆಯಾಗುವ ಸಾಧ್ಯತೆ ಇದೆ. 83 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕೆಎಸ್ ಭರತ್, 4502 ರನ್ ಗಳಿಸಿದ್ದಾರೆ. ಇದುವರೆಗೂ 25 ಶತಕ 25 ಅರ್ಧಶತಕ ಬಾರಿಸಿರುವ ಕೆಎಸ್ ಭರತ್ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿ ತವರಿನಲ್ಲಿ ನಡೆಯುತ್ತಿರುವುದರಿಂದ ಕೆಎಸ್ ಭರತ್ ಭಾರತೀಯ ಪಿಚ್‌ಗಳಲ್ಲಿ ಆಡಿರುವ ಅನುಭವ ಹೊಂದಿದ್ದು, ಪಂತ್ ಬದಲಿಗೆ ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ. ತಾಂತ್ರಿಕವಾಗಿ, ಭರತ್ ಟೆಸ್ಟ್ ತಂಡದ ಎರಡನೇ ಕೀಪರ್ ಆಗಿರುವುದರಿಂದ ನಾಗ್ಪುರದಲ್ಲಿ ಚೊಚ್ಚಲ ಪಂದ್ಯ ಆಡಬಹುದು.
ಟೆಸ್ಟ್ ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಇನ್ನೂ ಸಿದ್ಧವಾಗಿಲ್ಲ ಟೀಂ ಇಂಡಿಯಾ!

ಉತ್ತಮ ಬ್ಯಾಟರ್ ಉಪೇಂದ್ರ ಯಾದವ್
ಭಾರತ ಎ ತಂಡಕ್ಕಾಗಿ ಆಡುವ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಉಪೇಂದ್ರ ಯಾದವ್. ಇದುವರೆಗೂ 32 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. 40 ಇನ್ನಿಂಗ್ಸ್‌ಗಳಲ್ಲಿ 44.83 ಸರಾಸರಿಯಲ್ಲಿ 1390 ರನ್ ಗಳಿಸಿದ್ದಾರೆ. ಅಜೇಯ 203 ರನ್ ಗಳಿಸಿರುವುದು ಉತ್ತಮ ಸಾಧನೆಯಾಗಿದ.
ಸರಾಸರಿಯನ್ನು ಗಮನಿಸಿದಾಗ ಉಪೇಂದ್ರ ಯಾದವ್ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನವನ್ನು ಗಮನಿಸಿದಾಗ ಅವರು ಉತ್ತಮ ಆಯ್ಕೆಯಾಗಲಿದ್ದಾರೆ.

ಇಶಾನ್ ಕಿಶಾನ್ ಕೂಡ ಪರಿಗಣನೆ
ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಇಶಾನ್ ಕಿಶನ್, ಭಾರತ ತಂಡದ ಸೀಮಿತ ಓವರ್ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಇಶಾನ್ ಕಿಶನ್ ರಣಜಿಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿರುವುದರಿಂದ ಅವರ ಆಯ್ಕೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಯಾವುದೇ ಒತ್ತಡಕ್ಕೆ ಒಳಗಾಗದೆ ಬ್ಯಾಟಿಂಗ್ ಮಾಡುವ ಇಶಾನ್ ಕಿಶನ್, ಪಂತ್‌ರಂತೆ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಮುಖ್ಯವಾಗಿ ಕಿಶನ್, ಎಡಗೈ ಬ್ಯಾಟರ್ ಆಗಿರುವುದು ಅವರನ್ನು ಆಯ್ಕೆ ಮಾಡಲು ಪ್ರಮುಖ ಅಂಶವಾಗುವ ಸಾಧ್ಯತೆ ಇದೆ.
ಇನ್ನುಳಿದಂತೆ ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ, ರಣಜಿಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ಕೂಡ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ, ಬಿಸಿಸಿಐ ಆಯ್ಕೆದಾರರು ಮೊದಲಿನಿಂದಲೂ ಸಂಜು ಸ್ಯಾಮ್ಸನ್‌ರನ್ನು ಕಡೆಗಣಿಸಿರುವುದು ಅವರನ್ನು ಟೆಸ್ಟ್ ತಂಡದಲ್ಲಿ ಆಯ್ಕೆ ಮಾಡುವುದು ಅನುಮಾನವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications